More

    ಲಾಲ್​ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಜ.26ರಂದು ನಮ್ಮ ಮೆಟ್ರೋದಲ್ಲಿ ಆಗಮಿಸುವವರಿಗೆ ವಿಶೇಷ ಟಿಕೆಟ್‌ ವ್ಯವಸ್ಥೆ; ಇಲ್ಲಿದೆ ವಿವರ…

    ಬೆಂಗಳೂರು: ಲಾಲ್​ಬಾಗ್​ನಲ್ಲಿ ಆಯೋಜನೆಗೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಗಣರಾಜ್ಯೋತ್ಸವ(ಜ.26)ದಂದು ಆಗಮಿಸುವ ಜನರಿಗೆ ನಮ್ಮ ಮೆಟ್ರೋದಲ್ಲಿ ಅನುಕೂಲ ಕಲ್ಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ರಿರ್ಟನ್​ ಜರ್ನಿ ಪೇಪರ್​ ಟಿಕೆಟ್​ ಸೌಲಭ್ಯ ಜಾರಿಗೊಳಿಸಿದೆ.

    ಪೇಪರ್​ ಟಿಕೆಟ್​ನ್ನು ಬೆಳಗ್ಗೆ 8ರಿಂದ ಸಂಜೆ 6 ಗಂಟೆ ವರೆಗೆ ನಗರದ ಎಲ್ಲ ನಿಲ್ದಾಣಗಳಲ್ಲಿ ಖರೀದಿಸಬಹುದಾಗಿದೆ. ಲಾಲ್​ಬಾಗ್​ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ 8 ಗಂಟೆ ವರೆಗೆ ಪೇಪರ್​ ಟಿಕೆಟ್​ ಲಭ್ಯವಿದೆ.

    ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆ ವರೆಗೆ ಲಾಲ್​ಬಾಗ್​ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು 30 ರೂ. ಟಿಕೆಟ್​ ದರ ನಿಗದಿಪಡಿಸಲಾಗಿದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ. ಲಾಲ್​ಬಾಗ್​ ನಿಲ್ದಾಣಕ್ಕೆ ಟೋಕನ್​, ಸ್ಮಾರ್ಟ್​ಕಾರ್ಡ್​ ಸೇರಿದಂತೆ ಕ್ಯೂಆರ್​ ಕೋಡ್​ ಟಿಕೆಟ್​ಗಳ ಮೂಲಕ ಪ್ರಯಾಣಿಸಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts