More

    ಚೆನ್ನೈ ಬಂದರು ತಲುಪಿದ ಚಾಲಕರಹಿತ ಮೆಟ್ರೋ; ರಸ್ತೆ ಮಾರ್ಗವಾಗಿ ಹೆಬ್ಬಗೋಡಿ ಡಿಪೋಗೆ ಆಗಮನ

    ಬೆಂಗಳೂರು: ಆರ್​.ವಿ. ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಸಂಚರಿಸಲಿರುವ ಚಾಲಕ ರಹಿತ ಮೆಟ್ರೋ ರೈಲಿನ ಬೋಗಿಗಳು ಚೆನ್ನೈ ಬಂದರು ತಲುಪಿವೆ. ಸದ್ಯದಲ್ಲೇ ಹಡಗಿನಿಂದ ಅನ್​ಲೋಡ್​ ಆಗಲಿದೆ.

    ಆರು ಬೋಗಿಗಳುಳ್ಳ ಮೊದಲ ರೈಲನ್ನು ಜ.24ರಂದು ಚೀನಾದ ಶಾಂಘೈ ಬಂದರಿನಿಂದ ಕಳುಹಿಸಿಕೊಡಲಾಗಿತ್ತು. ಚೆನ್ನೈನಲ್ಲಿ ಕಸ್ಟಮ್ಸ್​ ಕ್ಲಿಯರೆನ್ಸ್​ಗೆ ಅಂದಾಜು ಐದು ದಿನ ಬೇಕಾಗುತ್ತದೆ. ಬಳಿಕ ರಸ್ತೆ ಮಾರ್ಗವಾಗಿ ಬೋಗಿಗಳನ್ನು ಬೆಂಗಳೂರಿಗೆ ಸಾಗಿಸಲಾಗುತ್ತದೆ. 18ರೊಳಗಾಗಿ ಈ ಬೋಗಿಗಳು ಎಲೆಕ್ಟ್ರಾನಿಕ್ಸ್​ಸಿಟಿ ಬಳಿಯ ಹೆಬ್ಬಗೋಡಿ ಡಿಪೋ ತಲುಪುವ ಸಾಧ್ಯತೆಯಿದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಸದ್ಯದಲ್ಲೇ ಕ್ಯೂಆರ್​ ಕೋಡ್​ ಆ್ಯಪ್​ ಬಿಡುಗಡೆ

    ದಿನದಿಂದ ದಿನಕ್ಕೆ ನಮ್ಮ ಮೆಟ್ರೋ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ಕ್ಯೂಆರ್​ ಕೋಡ್​ ವ್ಯವಸ್ಥೆಯನ್ನು ಸಾರ್ವತ್ರಿಕ ವೇದಿಕೆಗೆ ತರಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಮುಂದಾಗಿದೆ.

    ನಮ್ಮ ಮೆಟ್ರೋದಲ್ಲಿ ಈಗಾಗಲೇ ಕ್ಯೂಆರ್​ ಕೋಡ್​ ವ್ಯವಸ್ಥೆ ಇದೆ. ಆದರೆ, ಅಸ್ತಿತ್ವದಲ್ಲಿರುವ ಕ್ಯೂಆರ್​ ಕೋಡ್​ ಎಲ್ಲ ಅಪ್ಲಿಕೇಶನ್​ಗಳಿಗೆ ಹೊಂದಿಕೆ ಆಗುವುದಿಲ್ಲ. ಬದಲಾಗಿ ಕೆಲವು ಡಿಜಿಟಲ್​ ಪೇಮೆಂಟ್​ ಆ್ಯಪ್​ಗಳೊಂದಿಗೆ ಮಾತ್ರ ಬಳಕೆಯಾಗುತ್ತಿದೆ. ಹೀಗಾಗಿ ಟಿಕೆಟ್​, ಟೋಕನ್​ರಹಿತ ಚಾಲನೆಗೆ ಅವಕಾಶ ನೀಡುವ ಈ ಕ್ಯೂಆರ್​ ಕೋಡ್​ ವ್ಯವಸ್ಥೆಯನ್ನು ವಿಸ್ತರಿಸಲು ಬಿಎಂಆರ್​ಸಿಎಲ್​ ನಿರ್ಧರಿಸಿದೆ.

    ಇದರ ಭಾಗವಾಗಿ ‘ಭಾರತ್​ ಬಿಲ್​ ಪೇ ಸಿಸ್ಟಂ’ ಮಾದರಿಯ ಆ್ಯಪ್​ ವಿನ್ಯಾಸಕ್ಕೆ ಬಿಎಂಆರ್​ಸಿಎಲ್​ ಈಗಾಗಲೇ ಟೆಂಡರ್​ ಪ್ರಕ್ರಿಯೆ ಆರಂಭಿಸಿದೆ. ಮೆಟ್ರೋ ಪ್ರಯಾಣಿಕರು ಈ ಆ್ಯಪ್​ ಮೂಲಕ ಮೆಟ್ರೋ ಟಿಕೆಟ್​ಗಳನ್ನು ಖರೀದಿಸಬಹುದು. ಜತೆಗೆ ತಮ್ಮ ಸ್ಮಾರ್ಟ್​ ಕಾರ್ಡ್​ಗಳನ್ನು ರೀಚಾರ್ಜ್​ ಮಾಡಬಹುದು. ಅಲ್ಲದೇ ಆಟೋರಿಾ ಹಾಗೂ ಕ್ಯಾಬ್​ಗಳನ್ನು ಬುಕ್​ ಮಾಡಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts