More

    ಸದ್ಯದಲ್ಲೇ ಕ್ಯೂಆರ್​ ಕೋಡ್​ ಆ್ಯಪ್​ ಬಿಡುಗಡೆ; ನಮ್ಮ ಮೆಟ್ರೋ ಟಿಕೆಟ್​ ಖರೀದಿಗೆ ಸಹಕಾರಿ

    ಬೆಂಗಳೂರು: ದಿನದಿಂದ ದಿನಕ್ಕೆ ನಮ್ಮ ಮೆಟ್ರೋ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ಕ್ಯೂಆರ್​ ಕೋಡ್​ ವ್ಯವಸ್ಥೆಯನ್ನು ಸಾರ್ವತ್ರಿಕ ವೇದಿಕೆಗೆ ತರಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಮುಂದಾಗಿದೆ.

    ನಮ್ಮ ಮೆಟ್ರೋದಲ್ಲಿ ಈಗಾಗಲೇ ಕ್ಯೂಆರ್​ ಕೋಡ್​ ವ್ಯವಸ್ಥೆ ಇದೆ. ಆದರೆ, ಅಸ್ತಿತ್ವದಲ್ಲಿರುವ ಕ್ಯೂಆರ್​ ಕೋಡ್​ ಎಲ್ಲ ಅಪ್ಲಿಕೇಶನ್​ಗಳಿಗೆ ಹೊಂದಿಕೆ ಆಗುವುದಿಲ್ಲ. ಬದಲಾಗಿ ಕೆಲವು ಡಿಜಿಟಲ್​ ಪೇಮೆಂಟ್​ ಆ್ಯಪ್​ಗಳೊಂದಿಗೆ ಮಾತ್ರ ಬಳಕೆಯಾಗುತ್ತಿದೆ. ಹೀಗಾಗಿ ಟಿಕೆಟ್​, ಟೋಕನ್​ರಹಿತ ಚಾಲನೆಗೆ ಅವಕಾಶ ನೀಡುವ ಈ ಕ್ಯೂಆರ್​ ಕೋಡ್​ ವ್ಯವಸ್ಥೆಯನ್ನು ವಿಸ್ತರಿಸಲು ಬಿಎಂಆರ್​ಸಿಎಲ್​ ನಿರ್ಧರಿಸಿದೆ.

    ಇದರ ಭಾಗವಾಗಿ ‘ಭಾರತ್​ ಬಿಲ್​ ಪೇ ಸಿಸ್ಟಂ’ ಮಾದರಿಯ ಆ್ಯಪ್​ ವಿನ್ಯಾಸಕ್ಕೆ ಬಿಎಂಆರ್​ಸಿಎಲ್​ ಈಗಾಗಲೇ ಟೆಂಡರ್​ ಪ್ರಕ್ರಿಯೆ ಆರಂಭಿಸಿದೆ. ಮೆಟ್ರೋ ಪ್ರಯಾಣಿಕರು ಈ ಆ್ಯಪ್​ ಮೂಲಕ ಮೆಟ್ರೋ ಟಿಕೆಟ್​ಗಳನ್ನು ಖರೀದಿಸಬಹುದು. ಜತೆಗೆ ತಮ್ಮ ಸ್ಮಾರ್ಟ್​ ಕಾರ್ಡ್​ಗಳನ್ನು ರೀಚಾರ್ಜ್​ ಮಾಡಬಹುದು. ಅಲ್ಲದೇ ಆಟೋರಿಾ ಹಾಗೂ ಕ್ಯಾಬ್​ಗಳನ್ನು ಬುಕ್​ ಮಾಡಬಹುದಾಗಿದೆ.

    ಭಾನುವಾರ 7,415 ಮಂದಿ ಪ್ರಯಾಣ

    ಕಳೆದ ಭಾನುವಾರ ವಿಶ್ವ ಕ್ಯಾನ್ಸರ್​ ದಿನದ ಪ್ರಯುಕ್ತ ನಮ್ಮ ಮೆಟ್ರೋ ಸೇವೆ ಬೆಳಗ್ಗೆ 4.30ರಿಂದ ಪ್ರಾರಂಭವಾಗಿತ್ತು. ಇದರ ಲಾಭವನ್ನು ನಗರದ ಮಂದಿ ಬಳಸಿಕೊಂಡಿದ್ದಾರೆ. ಅಂದು ಸೇವೆ ಆರಂಭವಾದಾಗಿನಿಂದ ಬೆಳಗ್ಗೆ 7 ಗಂಟೆವರೆಗೆ 7,415 ಮಂದಿ ಪ್ರಯಾಣಿಕರು ಮೆಟ್ರೋ ರೈಲಿನಲ್ಲಿ ಓಡಾಟ ನಡೆಸಿದ್ದಾರೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫೆ.4ರಂದು 6 ಲಕ್ಷ ಮಂದಿ ಮೆಟ್ರೋ ಬಳಕೆ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts