More

    ಐರ್ಲೆಂಡ್ ಮಣಿಸಿ ಟಿ20 ವಿಶ್ವಕಪ್ ಸೂಪರ್-12 ಹಂತಕ್ಕೇರಿದ ನಮೀಬಿಯ

    ಶಾರ್ಜಾ: ದಕ್ಷಿಣ ಆಫ್ರಿಕಾದ ವಲಸೆ ಆಟಗಾರ ಡೇವಿಡ್ ವೈಸ್ (28*ರನ್, 14 ಎಸೆತ, 1 ಬೌಂಡರಿ, 2 ಸಿಕ್ಸರ್, 22ಕ್ಕೆ 2) ಆಲ್ರೌಂಡ್ ನಿರ್ವಹಣೆ ಹಾಗೂ ನಾಯಕ ಜೆಹಾರ್ಡ್ ಎರಾಸ್ಮಸ್ (53*ರನ್, 49 ಎಸೆತ, 3 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ ನಮೀಬಿಯ ತಂಡ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿ ಸೂಪರ್-12ಹಂತಕ್ಕೇರಿತು. ಪ್ರಧಾನ ಹಂತಕ್ಕೇರಲು ಈ ಪಂದ್ಯ ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಕದನವಾಗಿತ್ತು. ಐರ್ಲೆಂಡ್‌ಗೆ ಅನಿರೀಕ್ಷಿತ ಆಘಾತ ನೀಡಿದ ನಮೀಬಿಯ ಎ ಗುಂಪಿನಿಂದ ಎರಡನೇ ತಂಡವಾಗಿ ಪ್ರಧಾನ ಸುತ್ತಿಗೇರಿತು.

    ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ 8 ವಿಕೆಟ್‌ಗೆ 125 ರನ್ ಪೇರಿಸಿದರೆ, ಪ್ರತಿಯಾಗಿ ನಮೀಬಿಯ ತಂಡ 18.3 ಓವರ್‌ಗಳಲ್ಲಿ 2 ವಿಕೆಟ್‌ಗೆ 126 ರನ್‌ಗಳಿಸಿ ಜಯದ ನಗೆ ಬೀರಿತು. ನಮೀಬಿಯ ತಂಡದ ಪರ ಡೇವಿಡ್ ವೈಸ್ ಹಾಗೂ ನಾಯಕ ನಾಯಕ ಜೆಹಾರ್ಡ್ ಎರಾಸ್ಮಸ್ ಮುರಿಯದ 3ನೇ ವಿಕೆಟ್‌ಗೆ 53 ರನ್ ಪೇರಿಸಿ ತಂಡದ ಗೆಲುವನ್ನು ಸುಲಭವಾಗಿಸಿತು.

    ಐರ್ಲೆಂಡ್: 8 ವಿಕೆಟ್‌ಗೆ 125 (ಪೌಲ್ ಸ್ಟಿರ್ಲಿಂಗ್ 38, ಕೆವಿನ್ ಓಬ್ರಿಯಾನ್ 25, ಆಂಡಿ ಬಾಲ್ಬಿರ್ನಿ 21, ಜಾನ್ ಪ್ರಿಲಿಂಕ್ 21ಕ್ಕೆ 3, ಡೇವಿಡ್ ವೈಸ್ 22ಕ್ಕೆ 2), ನಮೀಬಿಯ: 18.3 ಓವರ್‌ಗಳಲ್ಲಿ 2 ವಿಕೆಟ್‌ಗೆ 126 (ಜೆಹಾರ್ಡ್ ಎರಾಸ್ಮಸ್ 53*, ಡೇವಿಡ್ ವೈಸ್ 28*, ಜಾನೆ ಗ್ರೀನ್ 24, ಕರ್ಟಿಸ್ ಕ್ಯಾಂರ್ 14ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts