More

    ಮಾನವೀಯ ಮೌಲ್ಯ ಬಿತ್ತುತ್ತಿರುವ ನಾಲವಾರ ಮಠ

    ನಾಲವಾರ: ಆಧುನಿಕತೆ ಹಾಗೂ ತಂತ್ರಜ್ಞಾನದ ಹೊಡೆತಕ್ಕ ಸಿಕ್ಕು ಮೌಲ್ಯಗಳು ವಿಮುಖವಾಗುತ್ತಿರುವ ಇಂದಿನ ದಿನಗಳಲ್ಲಿ, ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಮರುಸ್ಥಾಪಿಸುವ ಕೆಲಸ ನಾಲವಾರ ಮಠ ಮಾಡುತ್ತಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

    ನಾಲವಾರದ ಶ್ರೀ ಕೋರಿಸಿದ್ಧೇಶ್ವರ ಮಠದಲ್ಲಿ ಗುರುವಾರ ರಾತ್ರಿ ಮಹಾದ್ವಾರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಜಾತಿ, ಮತ, ಪಂಥಗಳ ತಾರತಮ್ಯವಿಲ್ಲದೇ ಲಕ್ಷಾಂತರ ಜನರು ಡಾ.ಸಿದ್ಧ ತೋಟೇಂದ್ರ ಶ್ರೀಗಳ ದರ್ಶನಾಶೀರ್ವಾದ ಪಡೆಯಲು ಬರುತ್ತಾರೆ. ಅಸಂಖ್ಯಾತ ಭಕ್ತರಿಗೆ ತ್ರಿವಿಧ ದಾಸೋಹ ಮೂಲಕ ಹರಿಸಿ, ಕಷ್ಟಗಳನ್ನು ದೂರ ಮಾಡುವ ಕೆಲಸ ನಡೆಯುತ್ತಿದೆ. ಹೀಗಾಗಿ ನಾಲವಾರ ಮಠ ನೆಮ್ಮದಿ ನೀಡುವ ತಾಣವಾಗಿದೆ ಎಂದರು.

    ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಮಾತನಾಡಿದರು. ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ವಿಶ್ವನಾಥರೆಡ್ಡಿ ಪಾಟೀಲ್, ಮಹೇಶ ರೆಡ್ಡಿ ಪಾಟೀಲ್ ಸೂಗೂರ (ಎನ್), ಸಂಗಾರೆಡ್ಡಿಗೌಡ ಮಲ್ಹಾರ, ಸೋಮನಾಥರೆಡ್ಡಿ ಬಾಲಛಡಿ, ಡಾ.ವೀರೇಶ ಎಣ್ಣಿ, ಪ್ರದೀಪ ಮಾಲಿಪಾಟೀಲ್, ಶಿರಡಿಗೌಡ ಸೋಮರೆಡ್ಡಿ, ಸಿದ್ದಲಿಂಗಪ್ಪ ಗೌಡ ಹೆಬ್ಬಳ್ಳಿ, ಭೀಮರೆಡ್ಡಿಗೌಡ ಚಟ್ನಳ್ಳಿ ಇತರರಿದ್ದರು.

    ರಾತ್ರಿ ಮಾಸಿಕ ಮಾಸಿಕ ಶಿವಾನುಭವ ಚಿಂತನೆ ಕಾರ್ಯಕ್ರಮ ನಡೆಯಿತು. ಭಕ್ತರು ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಿಸಿದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಸನ್ನತಿ ದೇವಸ್ಥಾನದ ಅರ್ಚಕ ಶ್ರೀಧರ ಶಾಸ್ತ್ರೀ, ಮುಖಂಡರಾದ ಅರುಣಕುಮಾರ ಪಾಟೀಲ್, ಮಹಾದೇವ ಗಂವ್ಹಾರ್, ಗೋಪಾಲ ರಾಠೋಡ್, ಶಿವರೆಡ್ಡಿ ಕುಲಕುಂದಿ, ಈರಣ್ಣ ಇಂಗಳಗಿ ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts