More

    ಥಿಯೇಟರ್​​ನ ಗೋಡೆಯೊಳಗೆ ಸಿಕ್ಕಿಕೊಂಡಿದ್ದ ಬೆತ್ತಲೆ ಮನುಷ್ಯ!

    ನ್ಯೂಯಾರ್ಕ್​: ಸಿನಿಮಾ ಥಿಯೇಟರ್​ನ ಗೋಡೆಯೊಳಗೆ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಅಗ್ನಿ ಶಾಮಕ ದಳದವರು ಗೋಡೆ ಕೊರೆದು ರಕ್ಷಿಸಿದ ಪ್ರಸಂಗವೊಂದು ನ್ಯೂಯಾರ್ಕ್​ನ ಸೈರಾಕೂಸ್​ನಿಂದ ವರದಿಯಾಗಿದೆ. ಪುರುಷರ ಶೌಚಾಲಯದ ಕಂಭದ ಗೋಡೆಯಲ್ಲಿ ಎರಡು ದಿನಗಳ ಕಾಲ ಟ್ರ್ಯಾಪ್​​ ಆಗಿದ್ದ ಈತ ಸಿಕ್ಕಾಗ, ಪೂರ್ಣ ಬೆತ್ತಲೆಯಾಗಿದ್ದ ಎಂದು ವರದಿ ತಿಳಿಸಿದೆ.

    ಶುಕ್ರವಾರದಂದು ಬೆಳಿಗ್ಗೆ ಅಲ್ಲಿನ ಲ್ಯಾಂಡ್​​ಮಾರ್ಕ್​​ ಥಿಯೇಟರಿನ ಗೋಡೆಯ ಮೇಲೆ ಗುದ್ದುತ್ತಾ ಸಹಾಯ ಕೋರುತ್ತಿದ್ದ ದನಿಯೊಂದು ಕೇಳಿಸಿತು. ಆಗ ಸೈರಾಕೂಸ್​ನ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸಂರಕ್ಷಕ ಸಿಬ್ಬಂದಿ ಗೋಡೆಯಲ್ಲಿ ರಂಧ್ರ ಮಾಡಿ ಒಂದು ಫೈಬರ್​ ಆಪ್ಟಿಕ್​ ಕ್ಯಾಮೆರಾವನ್ನಿರಿಸಿ ಆ ವ್ಯಕ್ತಿಯಿರುವ ನಿರ್ದಿಷ್ಟ ಜಾಗವನ್ನು ಗಮನಿಸುತ್ತಾ, ಗೋಡೆಯನ್ನು ಒಡೆದು ಅವನನ್ನು ಹೊರತೆಗೆದರು ಎನ್ನಲಾಗಿದೆ.

    ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲೇ ಭತ್ತದ ಫಸಲು ಬಡಿದ ರೈತರು!

    ಈ 39 ವರ್ಷ ವಯಸ್ಸಿನ ಪುರುಷನು ಮೇಲ್ಮಹಡಿಯ ಕ್ರಾಲ್​ಸ್ಪೇಸ್​ನಲ್ಲಿ ಎರಡು ದಿನ ಬಚ್ಚಿಟ್ಟುಕೊಂಡಿದ್ದ. ನಂತರ ಪುರುಷರ ಶೌಚಾಲಯದ ಕಂಭದ ಗೋಡೆಯ ಒಳಕ್ಕೆ ಬಿದ್ದು ಸಿಕ್ಕಿಹಾಕಿಕೊಂಡ ಎಂದು ತಿಳಿದುಬಂದಿದೆ. ಥಿಯೇಟರ್​ ನಿರ್ದೇಶಕರಾದ ಮೈಕ್​ ಇಂಟಗ್ಲೈಟಾ ಪ್ರಕಾರ, ಕೆಲವು ನೌಕರರು ಆ ವ್ಯಕ್ತಿ ಥಿಯೇಟರಿನಲ್ಲಿ ಓಡಾಡುತ್ತಿದ್ದುದನ್ನು ನೋಡಿದ್ದರು. ನಂತರ ಅವನು ಹೊರಟುಹೋಗಿದ್ದಾನೆ ಎಂದು ತಿಳಿದಿದ್ದರು ಎನ್ನಲಾಗಿದೆ.

    ಆಶ್ರಯಕ್ಕಾಗಿ ಬಂದಿದ್ದನೋ, ಬಾತ್​ರೂಮನ್ನು ಉಪಯೋಗಿಸಲು ಬಂದಿದ್ದನೋ ಗೊತ್ತಿಲ್ಲ ಎಂದಿರುವ ಅಧಿಕಾರಿಗಳು ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರಬಹುದೆಂದು ಶಂಕಿಸಿದ್ದಾರೆ. ಸದ್ಯ ಆತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯಕ್ಕೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)

    ಐಡಿಯಲ್​​ ಐಸ್​ಕ್ರೀಂ ಸಂಸ್ಥೆಯ ಸ್ಥಾಪಕ ಪ್ರಭಾಕರ ಕಾಮತ್​ ನಿಧನ

    ವೈಟ್​ಹೌಸ್​ನಲ್ಲೂ ಬೆಳಗಿದ ದೀಪ! ಹಬ್ಬಕ್ಕೆ ಶುಭ ಕೋರಿದ ಅಮೆರಿಕ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts