More

    ನಾರಿಯರ ಸಬಲೀಕರಣಕ್ಕೆ ಸಹಕರಿಸಿ

    ನಾಗರಮುನ್ನೋಳಿ: ಮನೆ ಜವಾಬ್ದಾರಿ ನಿಭಾಯಿಸುವ ಹೆಣ್ಣು ಆರ್ಥಿಕವಾಗಿ ಸಬಲೆಯಾಗಲು ಆಕೆಗೆ ಸೂಕ್ತ ಅವಕಾಶ ಕಲ್ಪಿಸಿಕೊಡುವುದು ಇಂದಿನ ಅವಶ್ಯವಾಗಿದೆ ಎಂದು ಮಹಿಳಾ ಮತ್ತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

    ತಾಲೂಕಿನ ನಾಗರಮುನ್ನೊಳ್ಳಿ ಗ್ರಾಮದ ಶ್ರೀ ರಕ್ಷೆ ಮಹಿಳಾ ಸ್ವ-ಸಹಾಯ ಸಂಘ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೆಲ ಗ್ರಾಮೀಣ ಭಾಗದಲ್ಲಿ ಮಹಿಳೆಯರನ್ನು ಇನ್ನೂ ಕೀಳರಿಮೆಯಿಂದ ನೋಡಲಾಗುತ್ತಿದೆ.

    ಭಾರತದಲ್ಲಿ ಕಾನೂನು ಹಾಗೂ ಪೊಲೀಸ್ ವ್ಯವಸ್ಥೆ ಬಲಗೊಂಡರೂ ಬಾಲ್ಯವಿವಾಹ, ಅತ್ಯಾಚಾರದಂತಹ ಪ್ರಕರಣಗಳು ಮೇಲಿಂದ ಮೇಲೆ ಘಟಿಸುತ್ತಲೇ ಇವೆ. ಈ ಕೃತ್ಯಗಳಿಗೆ ಬ್ರೇಕ್ ಬೀಳಬೇಕು. ಕಾನೂನು ಹಾಗೂ ಸುವ್ಯವಸ್ಥೆ ಇನ್ನೂ ಗಟ್ಟಿಗೊಳ್ಳ ಬೇಕಾಗಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ರಾಯಚೂರಿನ ಪ್ರಗತಿಪರ ಮಹಿಳೆ ಕವಿತಾ ಮಿಶ್ರಾ ಮಾತನಾಡಿ, ರೈತರು ಕಷ್ಟಪಟ್ಟು ದುಡಿದರೆ ಭೂಮಿತಾಯಿ ಕೈಬಿಡುವುದಿಲ್ಲ.

    ಶ್ರಮ ವಹಿಸಿ ದುಡಿಯುವ ಛಲ ಮಹಿಳೆಯರಲ್ಲಿ ಬೆಳೆಯಬೇಕು. ರೈತರು ಋತು ಆಧಾರಿತ ಕೃಷಿಯಲ್ಲಿ ತೊಡಗಬೇಕು. ಸರ್ಕಾರದ ಸೌಲಭ್ಯ ಸದುಪಯೋಗ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಆಗ ಸಮಾಜದಲ್ಲಿ ನಿಮಗೆ ವಿಶೇಷ ಗೌರವ ಸಿಗುತ್ತದೆ ಎಂದರು. ಶ್ರೀರಕ್ಷೆ ಸ್ವ-ಸಹಾಯ ಸಂಘದ ಅಧ್ಯಕ್ಷೆ ಶರಾವತಿ ಕುಂಬಾರ ಮಾತನಾಡಿದರು. ಚಿಕ್ಕೋಡಿ ಶಾರದಾದೇವಿ ಸೇವಾಶ್ರಮದ ಅಧ್ಯಕ್ಷೆ ಮಾತಾಜಿ ಭಕ್ತಿಮಯಿ, ಚಿಕ್ಕೋಡಿ ಪುರಸಭೆ ಸದಸ್ಯೆ ರಂಜನಾ ಕಾಮಗೌಡ, ಗ್ರಾಪಂ ಉಪಾಧ್ಯಕ್ಷೆ ದುಂಡವ್ವ ಪಾಟೀಲ, ತಾಪಂ ಸದಸ್ಯ ಬಾಳವ್ವ ಹಾಲಟ್ಟಿ, ಶ್ರೀದೇವಿ ಈಟಿ, ಸುನೀತಾ ಪಾಟೀಲ, ದಾನಪ್ಪ ಕೊಟಬಾಗಿ, ಸಿದ್ದಪ್ಪ ಮರ‌್ಯಾಯಿ, ವಿನಾಯಕ ಕುಂಬಾರ, ಅನಸೂಯಾ ಕುಂಬಾರ, ಶಿವಾನಂದ ಮರ‌್ಯಾಯಿ, ಕಲಾವತಿ ಕುಂಬಾರ, ಸಂಗೀತಾ ಗಿರಮಲಣ್ಣವರ, ಸರೋಜನಿ ಮಸರಗುಪ್ಪಿ, ಲಕ್ಷ್ಮೀಸಾಗರ ಈಟಿ, ಪ್ರಭಾಕರ ಡಬ್ಬಣ್ಣವರ, ಶಂಕರ ನೇರ್ಲಿ, ಎಂ.ಬಿ.ಆಲೂರೆ, ಲಕ್ಷ್ಮಣ ಪೂಜೇರಿ, ಆಶಾ ಮನಗೂಳಿ, ಚಂದ್ರಶೇಖರ ಅರಬಾವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts