More

    ರಹಸ್ಯ ನಿಧಿ ಹೆಸರಲ್ಲಿ 11 ಅಮಾಯಕರನ್ನು ಹತ್ಯೆಗೈದ ಸರಣಿ ಹಂತಕ ಅರೆಸ್ಟ್! ತನಿಖೆಯಲ್ಲಿ ಶಾಕಿಂಗ್​ ಸಂಗತಿ ಬಯಲು​

    ಹೈದರಾಬಾದ್​: ರಹಸ್ಯ ನಿಧಿಯ ಹೆಸರಲ್ಲಿ ಹನ್ನೊಂದು ಅಮಾಯಕರ ಕೊಲೆಗಳನ್ನು ಮಾಡಿರುವ ಸರಣಿ ಹಂತಕನನ್ನು ತೆಲಂಗಾಣ ಪೊಲೀಸರು ಬಂಧನ ಮಾಡಿದ್ದಾರೆ.

    ಬಂಧಿತನನ್ನು ಸತ್ಯನಾರಾಯಣ ಎಂದು ಗುರುತಿಸಲಾಗಿದೆ. ಈತ ತೆಲುಗು ರಾಜ್ಯಗಳು ಮತ್ತು ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ 11 ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ನಾಗರ್‌ಕರ್ನೂಲ್ ಪೊಲೀಸರು ಆತನನ್ನು ಕಂಬಿ ಹಿಂದೆ ತಳ್ಳಿದ್ದಾರೆ.

    ಇತ್ತೀಚೆಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆ ನೀಡಿ ವ್ಯಕ್ತಿಯೊಬ್ಬನಿಂದ ಹಣ ಪಡೆದು ಆತನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಸತ್ಯನಾರಾಯಣನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ರಹಸ್ಯ ನಿಧಿಯ ಶಾಕಿಂಗ್​ ಸಂಗತಿ ಬಯಲಿಗೆ ಬಂದಿದೆ. ಸರಣಿ ಹಂತಕನಿಂದ ವಿಷದ ಬಾಟೆಲ್ ಮತ್ತು ಮೃತರ ಮೊಬೈಲ್​ ಫೋನ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಡಿಐಜಿ ಚೌಹಾಣ್​ ಅವರು ಮಾಧ್ಯಮಗಳ ಎದುರು ಬಿಚ್ಚಿಟ್ಟಿದ್ದಾರೆ. ತನ್ನ ಪಾಲಕರಿಂದ ಆರೋಪಿ ಸತ್ಯನಾರಾಯಣ, ಗಿಡಮೂಲಿಕೆಗಳ ಔಷಧಿಯ ಬಗ್ಗೆ ತಿಳಿದುಕೊಂಡಿದ್ದನು. ರಹಸ್ಯ ನಿಧಿಯನ್ನು ಬಯಲಿಗೆಳೆಯುತ್ತೇನೆ ಎಂದು ನಂಬಿಸಿ ಜನರಿಂದ ಹಣ ಮತ್ತು ಆಸ್ತಿಯನ್ನು ಪಡೆದು ವಂಚಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದನು. ಇತ್ತೀಚೆಗೆ ಓರ್ವ ವ್ಯಕ್ತಿ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದಾಗ ಉಳಿದ ಸಂಗತಿಗಳು ಬಯಲಾಗಿವೆ. ಇತ್ತೀಚೆಗೆ ತೀರ್ಥಯಾತ್ರೆ ಮಾಡಿದ್ದೇ ಎಂದು ಹೇಳಿ ತೀರ್ಥದ ರೂಪದಲ್ಲಿ ವಿಷ ನೀಡಿ ಕೊಲೆ ಮಾಡುತ್ತಿದ್ದ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

    ಆರೋಪಿಗೆ ಅತಿಯಾದ ಸೈಕೋ ಮನಸ್ಥಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ತರಕಾರಿ ಕತ್ತರಿಸುವಷ್ಟು ಸುಲಭವಾಗಿ ಕೊಲೆ ಮಾಡುತ್ತಿದ್ದ. ಯಾವುದೇ ಪಶ್ಚಾತಾಪ ಆತನಿಗೆ ಇರಲಿಲ್ಲ. ಆರೋಪಿ ಸತ್ಯನಾರಾಯಣ ಒಬ್ಬರಿಂದ 9 ಲಕ್ಷ ಹಾಗೂ ಕೆಲವರಿಂದ ನಿವೇಶನ ಮತ್ತು ಜಮೀನು ಪಡೆದಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಅಲ್ಲದೇ ಕರ್ನಾಟಕದಲ್ಲಿ ರಹಸ್ಯ ನಿಧಿ ಹೆಸರಿನಲ್ಲಿ ಮೂರೂವರೆ ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿರುವುದು ಪತ್ತೆಯಾಗಿದೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವು ನಾಗರ್​ಕರ್ನೂಲ್​ ಪೊಲೀಸರು ತನಿಖೆ ಮುಂದುವರಿಸಿದ್ದು, ಇನ್ನಷ್ಟು ಸತ್ಯಾಂಶ ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ರಹಸ್ಯ ನಿಧಿ ಹೆಸರಿನಲ್ಲಿ ವಂಚಿಸುವ ವಂಚಕರ ಮಾತುಗಳಿಗೆ ಮರಳಾಗಬೇಡಿ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ರಾಜಸ್ಥಾನ ನೂತನ ಉಪಮುಖ್ಯಮಂತ್ರಿ ದಿಯಾ ಕುಮಾರಿ: ಯಾರೀ ರಾಜಕುಮಾರಿ?

    ಕೇರಳ ರಾಜ್ಯಪಾಲರ ವಾಹನದ ಮೇಲೆ ದಾಳಿ: ಕಮ್ಯುನಿಸ್ಟ್ ಆಡಳಿತದ ವಿರುದ್ಧ ಶಶಿ ತರೂರ್ ವಾಗ್ದಾಳಿ -‘ಇಂಡಿಯಾ’ದಲ್ಲಿ ಮತ್ತೆ ಒಡಕು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts