More

    ನಾಗರಹೊಳೆಯಲ್ಲಿ ಏಳು ತಿಂಗಳಿಂದ ಸ್ಥಗಿತಗೊಂಡಿದ್ದ ಸಫಾರಿ ಪುನರಾರಂಭ

    ಹನಗೋಡು: ಕರೊನಾದಿಂದ 7 ತಿಂಗಳಿಂದ ಸ್ಥಗಿತಗೊಂಡಿದ್ದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಫಾರಿಗೆ ಮತ್ತೆ ಅ. 11 ರಿಂದ ಅಧಿಕೃತವಾಗಿ ಚಾಲನೆ ಸಿಗಲಿದೆ. ಈಗಾಗಲೇ ನಾಗರಹೊಳೆ ಕೇಂದ್ರ ಸ್ಥಾನದಿಂದ ಸಫಾರಿಯನ್ನು ಐದು ದಿನಗಳಿಂದ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.

    ಉದ್ಯಾನದಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಮೇಲೆ ಒತ್ತಡ ಕಡಿಮೆ ಮಾಡಲು ಹಾಗೂ ಸಫಾರಿ ನೆಪದಲ್ಲಿ ಕೆಲ ಪ್ರವಾಸಿಗರು ಕಾಡಿನಲ್ಲೇ ಅಡ್ಡಾಡುವ ಪ್ರವೃತ್ತಿಗೆ ಕಡಿವಾಣ ಹಾಕಲು 3 ವರ್ಷದ ಹಿಂದೆ ವೀರನಹೊಸಹಳ್ಳಿ ಹಾಗೂ ನಾಣಚ್ಚಿಗೇಟ್‌ನಿಂದ ಸಫಾರಿ ಆರಂಭಿಸಲಾಗಿತ್ತು. ಆದರೆ, ಮಾರ್ಚ್ ತಿಂಗಳಲ್ಲಿ ಕರೊನಾ ಹಿನ್ನೆಲೆಯಲ್ಲಿ ನಾಗರಹೊಳೆ ಸೇರಿದಂತೆ ಎಲ್ಲ ಕಡೆ ಸಫಾರಿ ನಿಲ್ಲಿಸಲಾಗಿತ್ತು. ಇದೀಗ ಸರ್ಕಾರ ಕೋವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸಿದ್ದರಿಂದ ಸಫಾರಿಗೆ ನಾಗರಹೊಳೆ ಕೇಂದ್ರ ಸ್ಥಾನದಿಂದ ಚಾಲನೆ ದೊರೆಯಲಿದೆ. ಎಂದಿನಂತೆ ಟಿಕೆಟ್ ಬುಕ್ಕಿಂಗ್ ಸಂಪೂರ್ಣ ಗಣಕೀಕೃತಗೊಳಿಸಲಾಗಿದೆ.

    ಇದನ್ನೂ ಓದಿ: ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆಯೇ ವೇದನೆಯೊಂದಿಗೆ ಕುಸಿದ ಚಿರಾಗ್​ ಪಾಸ್ವಾನ್​

    ಸಫಾರಿ ಸಮಯ: ದಿನ ಬೆಳಗ್ಗೆ 6ರಿಂದ 7.30 ಹಾಗೂ ಮಧ್ಯಾಹ್ನ 2ರಿಂದ 3.30ರವರೆಗೆ ಮಾತ್ರ ಟಿಕೆಟ್ ನೀಡಲಾಗುವುದು, ಸಫಾರಿ ಮೊದಲ ಟ್ರಿಪ್ ಬೆಳಗ್ಗೆ 6ರಿಂದ 7.30 ಗಂಟೆ, ಎರಡನೇ ಟ್ರಿಪ್ 7.30ರಿಂದ 9ಗಂಟೆ, ಮೂರನೇ ಟ್ರಿಪ್ ಮಧ್ಯಾಹ್ನ 2ರಿಂದ 4 ಗಂಟೆ, ನಾಲ್ಕನೇ ಟ್ರಿಪ್ ಸಂಜೆ 4ರಿಂದ 5.30ರವರೆಗೆ ಸಫಾರಿ ಆಯೋಜಿಸಲಾಗಿದೆ. ಒಂದು ಟ್ರಿಪ್‌ಗೆ 25 ಪ್ರವಾಸಿಗರಿಗೆ ಅವಕಾಶ ಇರಲಿದೆ. ಆನ್‌ಲೈನ್‌ನಲ್ಲಿ 12 ಹಾಗೂ ಆಫ್‌ಲೈನ್‌ನಲ್ಲಿ 13 ಪ್ರವಾಸಿಗರಿಗೆ ಟಿಕಟ್ ವಿತರಣೆ ಮಾಡಲಾಗುವುದು. ನಿತ್ಯ 4 ಟ್ರಿಪ್ ಇರಲಿದ್ದು, ಪ್ರತಿದಿನ ಒಟ್ಟು 100 ಪ್ರವಾಸಿಗರಿಗೆ ಅವಕಾಶ ಇರಲಿದೆ. ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಕೋವಿಡ್ ನಿಯಮಗಳನ್ನು ಕಡ್ಡಾಯ ಮಾಡಲಾಗಿದೆ. ಪರಸ್ಪರ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸ್ಯಾನಿಟೈಸರ್ ಬಳಸಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ.

    ಅಮೆರಿಕಕ್ಕೆ 18 ಲಕ್ಷ ಮಾಸ್ಕ್‌ಗಳನ್ನು ದಾನ ಮಾಡಿದ ಭಾರತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts