More

    ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಹುಲಿ ಸಫಾರಿ!

    ಬೆಳಗಾವಿ: ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಹುಲಿ ಸಫಾರಿಗೆ ಭರದ ಸಿದ್ಧತೆ ನಡೆದಿದ್ದು, 20 ದಿನದಲ್ಲಿ ಆರಂಭವಾಗಲಿದೆ. ರಾಷ್ಟ್ರೀಯ ಉದ್ಯಾನವನ ಹೊರತುಪಡಿಸಿ ಬನ್ನೇರುಘಟ್ಟ, ಶಿವಮೊಗ್ಗ ಹಾಗೂ ಹಂಪಿ ಮೃಗಾಲಯದಲ್ಲಿ ಹುಲಿ ಸಾರಿ ಇದೆ. ಇದೀಗ ಬೆಳಗಾವಿಯಲ್ಲೂ ಆರಂಭಿಸುತ್ತಿರುವುದು ವಿಶೇಷ.
    ಸಫಾರಿ ಆರಂಭಿಸುವ ಹಿನ್ನೆಲೆಯಲ್ಲಿ ಈಗಾಗಲೇ ಈ ಕಿರು ಮೃಗಾಲಯಕ್ಕೆ ಮೂರು ಹುಲಿಗಳನ್ನು ತರಲಾಗಿದೆ.

    ಹುಲಿ ಸಫಾರಿ ಗೇಟ್ ಅಳವಡಿಕೆಯ ಕಾರ್ಯ ಪೂರ್ಣಗೊಂಡಿದೆ. ಹೋಲ್ಡಿಂಗ್ ರೂಂ ನಿರ್ಮಿಸಲಾಗಿದೆ. ಸಫಾರಿಗಾಗಿ 1.5 ಕಿ.ಮೀ. ವ್ಯಾಪ್ತಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಸಿಸಿ ರಸ್ತೆ ಕಾಮಗಾರಿಯನ್ನು ಜಿಪಂ ಅನುದಾನದಲ್ಲಿ ಕೈಗೊಳ್ಳಲಾಗುತ್ತಿದೆ. ಡಿಸ್ಟ್ರಿಕ್ಟ್ ಮಿನಿರಲ್ ಫಂಡ್‌ನಿಂದ ಸಫಾರಿ ಗೇಟ್ ಹಾಗೂ ಹೋಲ್ಡಿಂಗ್ ರೂಂ ನಿರ್ಮಿಸಲಾಗಿದೆ.

    ಹಂಪಿಯಿಂದ ವಾಹನ: ಕೇವಲ 20 ದಿನಗಳ ಅಂತರದಲ್ಲಿ ಬೆಳಗಾವಿ ಕಿರು ಮೃಗಾಲಯದಲ್ಲಿ ಹುಲಿ ಸಫಾರಿ ಆರಂಭಿಸಲು ಸಕಲ ವ್ಯವಸ್ಥೆ ಮಾಡಲಾಗಿದ್ದು, ಹಂಪಿಯ ಮೃಗಾಲಯದಿಂದ ಸಫಾರಿ ವಾಹನ ತರಿಸಿಕೊಳ್ಳಲಾಗುತ್ತಿದೆ. ಸದ್ಯಕ್ಕೆ ಅನುದಾನದ ಕೊರತೆ ಇರುವ ಹಿನ್ನೆಲೆಯಲ್ಲಿ ಬೇರೆ ಕಡೆಯಿಂದ ವಾಹನ ಎರವಲು ಪಡೆದುಕೊಳ್ಳಲಾಗುತ್ತಿದೆ. ಹುಲಿ ಸಫಾರಿಗೆ ಇನ್ನೂ ದರ ನಿಗದಿ ಮಾಡಿಲ್ಲ. ರಾಷ್ಟ್ರೀಯ ಮೃಗಾಲಯ ಪ್ರಾಧಿಕಾರವೇ ದರ ನಿಗದಿ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೇಂದ್ರದ ಒಪ್ಪಿಗೆ: ಬೆಳಗಾವಿಯ ಕಿರು ಮೃಗಾಲಯ ನಿರ್ಮಾಣ ಮಾಡಲು 2018ರಲೇ ಮಾಸ್ಟರ್ ಪ್ಲಾೃನ್ ಮಾಡಲಾಗಿತ್ತು. ಆ ವೇಳೆಯೇ ಹುಲಿ ಸಫಾರಿಯನ್ನು ಯೋಜನೆಗೆ ಸೇರಿಸಲಾಗಿತ್ತು. ಅಂದಿನಿಂದ ಕೆಲಸ ಆರಂಭಗೊಂಡಿದ್ದು, ಕಾಮಗಾರಿ ಅಂತಿಮಗೊಳ್ಳುತ್ತಿದೆ. ಹುಲಿ ಸಾರಿ ಆರಂಭವಾಗುತ್ತಿರುವುದು ಈ ಭಾಗದ ಜನರಿಗೂ ಖುಷಿ ತಂದಿದೆ.

    ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಹುಲಿ ಸಾರಿಗೆ ಅಂತಿಮ ಹಂತದ ಸಿದ್ಧತೆ ನಡೆದಿದೆ. ಹುಲಿ ಸಾರಿಗೆ ಸಾರ್ವಜನಿಕರು ಸಹಕರಿಸಬೇಕು. ಸಾರಿ ವೇಳೆ ಹುಲಿಗಳನ್ನು ಚುಡಾಯಿಸುವುದಾಗಲೀ, ವಾಹನದ ಕಿಟಕಿಯಿಂದ ಕೈ ಹೊರಗೆ ಹಾಕುವು ದಾಗಲೀ, ಅವುಗಳಿಗೆ ತಿಂಡಿ-ತಿನಿಸು ನೀಡುವುದಾಗಲಿ ಮಾಡಬಾರದು.
    | ರಾಕೇಶ್ ಅರ್ಜುನವಾಡ. ವಲಯ ಅರಣ್ಯಾಧಿಕಾರಿ, ಬೆಳಗಾವಿ ಮೃಗಾಲಯ

    ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಭೂತರಾಮನಹಟ್ಟಿಯ ಕಿರು ಮೃಗಾಲಯದಲ್ಲಿ ಹುಲಿ ಸಾರಿಗೆ ಸಿಸಿ ರಸ್ತೆ ನಿರ್ಮಿಸಲಾಗಿದೆ. ಅಲ್ಲದೆ, ಸಣ್ಣ ಕೆರೆಗಳು, ನಾಲಾ ನಿರ್ಮಾಣ ಕಾರ್ಯ ಮಾಡಲಾಗಿದೆ.
    | ಎಚ್.ವಿ. ದರ್ಶನ ಜಿಪಂ ಸಿಇಒ, ಬೆಳಗಾವಿ

    ಹುಲಿ ಸಫಾರಿ ನೋಡಲು ಮಕ್ಕಳನ್ನು ಬೇರೆಡೆ ಕರೆದುಕೊಂಡು ಹೋಗಬೇಕಿತ್ತು. ಈಗ ಬೆಳಗಾವಿಯಲ್ಲೇ ಮಕ್ಕಳು ಹುಲಿ ಸಫಾರಿ ಕಣ್ತುಂಬಿಕೊಳ್ಳುವ ಕಾಲ ಕೂಡಿ ಬಂದಿದೆ. ಜಿಲ್ಲೆಯ ಮಕ್ಕಳಿಗೆ ಇದು ಖುಷಿಯ ಸಂಗತಿ.
    | ಶಿವಾನಂದ ಭೈರಣ್ಣವರ, ಸ್ಥಳೀಯ ನಿವಾಸಿ

    | ಜಗದೀಶ ಹೊಂಬಳಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts