More

    ಹೋರಾಟಕ್ಕೆ ಸುದೀರ್ಘವಾದ ಇತಿಹಾಸ

    ಹಟ್ಟಿಚಿನ್ನದಗಣಿ: ಕಂಪನಿ ಕಾರ್ಮಿಕರ ಹೋರಾಟಕ್ಕೆ ಸುದೀರ್ಘವಾದ ಇತಿಹಾಸವಿದೆ ಎಂದು ಗಣಿ ಕಂಪನಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಅಧ್ಯಕ್ಷ ಎಸ್.ಎಂ ಶಫಿ ಹೇಳಿದರು.

    ಪಟ್ಟಣದ ಕೋಠಾ ಕ್ರಾಸ್ ಬಳಿಯಿರುವ ಕಾರ್ಮಿಕ ಸಂಘದ ಕಚೇರಿ ಪೈಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕ ದಿನಾಚರಣೆಯ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಸೋಮವಾರ ಮಾತನಾಡಿದರು. ಗಣಿ ಕಾರ್ಮಿಕರ ಪರಿಶ್ರಮದಿಂದ ಇಂದು ಕಂಪನಿ ಲಾಭದಾಯಕದಲ್ಲಿದೆ. ಕಾರ್ಮಿಕರ ಸಮಸ್ಯೆಗಳಿಗೆ ಪೂರಕವಾಗಿ ಐಐಟಿಯುಸಿ ನೇತೃತ್ವದ ಕಾರ್ಮಿಕ ಸಂಘ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

    ವಿಧಾನಸಭಾ ಚುನಾವಣೆ ನಿಮಿತ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಸರಳವಾಗಿ ಕಾರ್ಯಕ್ರಮ ಮಾಡಲಾಗಿದೆ. ಚುನಾವಣೆ ನಂತರ ಕಾರ್ಮಿಕರ ದಿನಾಚರಣೆಯನ್ನು ವಿಜೃಂಭಣೆಯಿಂದ ಮಾಡಲಾಗುವುದು ಹೇಳಿದರು. ಧ್ವಜಾರೋಹಣ ಪೂರ್ವದಲ್ಲಿ ಪೈಭವನದ ಆವರಣದಲ್ಲಿರುವ ಮಾಜಿ ಕಾರ್ಮಿಕ ನೇತಾರರಾದ ಎಜಿವಿ ಪೈ ಹಾಗೂ ಅರವಿಂದ ಮಾಳೆಬೆನ್ನೂರ್ ವಕೀಲರ ಸಮಾಧಿ ಹಾಗೂ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ಸಂಗಯ್ಯ ಸ್ವಾಮಿ, ವೆಂಕೋಬ್ ಮಿಯ್ಯಪೂರ್, ಸಂಗಯ್ಯಸ್ವಾಮಿ, ಪಾಷಾ ಅವರು ಕ್ರಾಂತಿಗೀತೆಗಳ ಮೂಲಕ ನಮನ ಸಲ್ಲಿಸಿದರು.

    ಐಐಟಿಯುಸಿ ನೇತೃತ್ವದ ಕಾರ್ಮಿಕ ಸಂಘದ ಚುನಾಯಿತ ಪ್ರತಿನಿಧಿಗಳಾದ ಶಾಂತಪ್ಪ ಆನ್ವರಿ, ತಿಪ್ಪಣ್ಣ, ಸಿದ್ಧಪ್ಪ ಮುಂಡರಗಿ, ನಾಗರೆಡ್ಡಿ ಜೇರಬಂಡಿ, ಚಂದ್ರು, ಕನಕರಾಜ್‌ಗೌಡ ಗುರಿಕಾರ್, ಹನುಮಂತಗೌಡ ಗುರೀಕಾರ್, ಸೋಮಣ್ಣ, ಪ್ರಶಾಂತ್, ರಾಮಣ್ಣ ವಂದಲಿ, ದುರುಗಪ್ಪ ಚಿಕ್ಕನಗನೂರು ಹಾಜಿ ಮಲಂಗ್, ಅಬ್ರಾಹಂ, ಯಮುನಪ್ಪ, ಕುಟ್ಟಿಮಾ, ಮೌಲಾಸಾಬ್, ಸಲೀಂ, ಪಾಮಣ್ಣ, ಕಿರಣ್ ಕುಲಕರ್ಣಿ, ಬಾಬೂ ಭೂಪೂರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts