More

    ಖ್ಯಾತ ಹಿಂದುಸ್ತಾನಿ ಸಂಗೀತಗಾರ ಡಾ. ಮೃತ್ಯುಂಜಯ ಶೆಟ್ಟರ್ ಒಬ್ಬ ಶ್ರೇಷ್ಠ ಗಾಯಕರು: ಪೂಜ್ಯಕಲ್ಲಯ್ಯ ನವರು

    ಗದಗ: ಸಂಗೀತ ಮಹಾವಿದ್ಯಾಲಯಕ್ಕೆ ನೇಮಕಗೊಂಡು ಕಳೆದ ಮೂರು ದಶಕಗಳಿಂದ ಹಿಂದುಸ್ತಾನಿ ಸಂಗೀತದ ಠುಮರಿ ವಿಭಾಗದ ಮುಖ್ಯಸ್ಥರಾಗಿ ಪ್ರಾಚಾರ್ಯರಾಗಿ ಹಿಂದುಸ್ತಾನಿ ಸಂಗೀತ ಕ್ಷೇತ್ರಕ್ಕೆ ಡಾ. ಮೃತ್ಯುಂಜಯ ಶೆಟ್ಟರ್ ಅವರ ಕೊಡುಗೆ ಅನನ್ಯ.  ಎಂದು ಪರಮಪೂಜ್ಯ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಶ್ರೀ ಕಲ್ಲಯ್ಯ ಅಜ್ಜನವರು ಹೇಳಿದರು.
    ಡಾ ಪಿ ಜಿ ಎ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ನಿವೃತ್ತರಾದ ಪ್ರಾಚಾರ್ಯ ಡಾ. ಮೃತ್ಯುಂಜಯ ಶೆಟ್ಟರ್ ಅವರಿಗೆ ಸನ್ಮಾನ ಮಾಡಿ ಮಾತನಾಡುತ್ತಾ ಪೂಜ್ಯ ಪುಟ್ಟರಾಜ ಕವಿ ಗವಾಯಿಗಳು ಸ್ಥಾಪಿಸಿದ ಸಂಗೀತ ಮಹಾವಿದ್ಯಾಲಯದಲ್ಲಿ ಅನೇಕ ಉತ್ತಮ ವಿದ್ಯಾರ್ಥಿಗಳು ಕಲಿತು ಪ್ರತಿ ವರ್ಷ ಹೊರ ಬರುತ್ತಿರುವುದು ಎಲ್ಲಾ ಉಪನ್ಯಾಸಕರ ಶ್ರಮದ ಫಲವಾಗಿದೆ ಎಂದು ಅವರು ಹೇಳಿದರು.
    ಸಮಿತಿಯ ನಿರ್ದೇಶಕರಾದ ಶ್ರೀ ವಿ ಎಸ್ ಮಳೆಕೊಪ್ಮಠ, ಆಡಳಿತ ಅಧಿಕಾರಿಗಳಾದ ಪಿ ಸಿ ಹಿರೇಮಠ್, ಕಾನೂನು ಸಲಹೆಗಾರ ಎಂ ಆರ್ ಹಿರೇಮಠ  ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ ಶ್ರೀಮತಿ ಸುಮಿತ್ರ ಹಿರೇಮಠ ಅವರನ್ನು ಸಂಗೀತ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ನೇಮಕ ಮಾಡಿ ಅವರನ್ನು ಸನ್ಮಾನಿಸಿದರು.

    ಡಾ. ನಾರಾಯಣ ಹಿರೇಕೊಳಿಕೆ, ಡಾ.  ಲತಾ ವೃತ್ತಿ ಕೊಪ್ಪ, ಡಾ, ಕೊಡಗಾನೂರ ಹನುಮಂತ್, ಪ್ರೊ ವಿ .ಎಂ. ಗುರುಮಠ, ಉಪನ್ಯಾಸಕ ಎನ್ ಎಂ ಶೇಕ್, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಸುಜಾತ ನಾಯಕ್, ಮೃತ್ಯುಂಜಯ ಮಠದ, ಶರಣಪ್ಪ ಕಲ್ಬುರ್ಗಿ, ವಾ ಯರ್ ಮೂಲಿಮನಿ, ವಿ ಎಂ ಪಟ್ಟದಕಲ್, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts