More

    ನಾಗಲಿಂಗೇಶ್ವರ ಜಾತ್ರಾ ಮಹೋತ್ಸವ ರದ್ದು

    ಚಿಕ್ಕೋಡಿ : ಆ.10 ರಿಂದ 12ರವರೆಗೆ ನಡೆಯಬೇಕಾಗಿದ್ದ ಚಿಕ್ಕೋಡಿ ಪಟ್ಟಣದ ಪರಟಿ ನಾಗಲಿಂಗೇಶ್ವರ ಜಾತ್ರೆಯನ್ನು ಕರೊನಾ ವೈರಸ್ ಹರಡುವುದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಪ್ರಕಾಶ ಮುಸಂಡಿ ಹೇಳಿದ್ದಾರೆ.

    ಪಟ್ಟಣದಲ್ಲಿರುವ ಪರಟಿ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚು ಜನ ಸೇರುವ ಜಾತ್ರೆ, ಸಭೆ, ಸಮಾರಂಭಗಳನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ. ಅದನ್ನು ಪಾಲಿಸುವ ಉದ್ದೇಶದಿಂದ ಜಾತ್ರಾ ಮಹೋತ್ಸವ ಮತ್ತು ಸಾಮೂಹಿಕ ಪಲ್ಲಕ್ಕಿ ಉತ್ಸವ ಮಹಾಪ್ರಸಾದ, ಕುಸ್ತಿ ಸ್ಪರ್ಧೆ ರದ್ದು ಪಡಿಸಲಾಗಿದೆ. ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಪರಟಿ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾ, ಅಭಿಷೇಕಗಳು, ಪಲ್ಲಕ್ಕಿ ಪೂಜೆಯು ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಮಾತ್ರ ನೆರವೇರಲಿದ್ದು, ಭಕ್ತರು ಮನೆಯಲ್ಲಿಯೇ ಇದ್ದು ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸುವ ಮೂಲಕ ಸಹಕರಿಸಬೇಕು ಎಂದು ಭಕ್ತರಲ್ಲಿ ಮನವಿ ಮಾಡಿದರು. ಬಸವರಾಜ ಸಮ್ಮತಶೆಟ್ಟಿ, ಸಂಜಯ ಬೋಸಲೆ, ಬಸವರಾಜ ಮುಸ್ಸಂಡಿ, ದೇವಸ್ಥಾನದ ಅರ್ಚಕ ಓಂಕಾರೇಶ್ವರ ಹಿರೇಮಠ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts