More

    ಶತಕೋಟಿವೀರನಾದರೂ ಶಾಸಕ ಎನ್​.ಎ. ಹ್ಯಾರಿಸ್​ ಬಳಿ ಸ್ವಂತ ಕಾರಿಲ್ಲ!

    ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಎನ್​.ಎ. ಹ್ಯಾರಿಸ್​ ತಮ್ಮ ಉಮೇದುವಾರಿಕೆಯನ್ನು ಬೃಹತ್​ ಬೈಕ್​ ರ್‍ಯಾಲಿ ಹಾಗೂ ಅಪಾರ ಬೆಂಬಲಿಗರೊಂದಿಗೆ ತೆರಳಿ ಸಲ್ಲಿಸಿದ್ದಾರೆ.

    ಇನ್ನು ಕರ್ನಾಟಕದಲ್ಲಿ ಸಿರಿವಂತ ರಾಜಕಾರಣಿಗಳ ಪೈಕಿ ಒಬ್ಬರಾಗಿರುವ ಎನ್​.ಎ, ಹ್ಯಾರಿಸ್​ ತಮ್ಮ ಹಾಗೂ ಕುಟುಂಬದವರ ಬಳಿ ಒಟ್ಟು 438 ಕೋಟಿ ರು. ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.

    248 ಕೋಟಿ ಹೆಚ್ಚಳ

    2018ರ ಚುನಾವಣೆಯಲ್ಲಿ ಅವರ ಆಸ್ತಿ ಮೌಲ್ಯವು 190.24 ಕೋಟಿ ರೂ ಎಂದು ಘೋಷಿಸಿದ್ದು. ಕಳೆದು ಐದು ವರ್ಷಗಳಲ್ಲಿ ಅವರ ಆಸ್ತ ಮೌಲ್ಯವು 248.76 ಕೋಟಿ ರೂ ಹೆಚ್ಚಳವಾಗಿದೆ.

    ಸ್ಥಿರಾಸ್ತಿ-ಚರಾಸ್ತಿ ಮೌಲ್ಯ

    ಶಾಸಕ ಹ್ಯಾರಿಸ್​ ನಲಪಾಡ್​ ಗ್ರೂಪ್​ ಆಫ್​ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ(MD) ಎಂದು ತಿಳಿಸಿದ್ದು ಅವರ ಬಳಿ 167.10 ಕೋಟಿ ರೂ ಚರಾಸ್ತಿ ಹಾಗೂ 271,02,09,184 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

    ದನ್ನೂ ಓದಿ: SCO ಸಭೆ; ಭಾರತಕ್ಕೆ ಭೇಟಿ ನೀಡಲಿರುವ ಪಾಕಿಸ್ತಾನ ವಿದೇಶಾಂಗ ಸಚಿವ

    ಪತ್ನಿ ತಾಹೀರಾ ಹ್ಯಾರಿಸ್​ ಹೆಸರಲ್ಲಿ 8.27 ಕೋಟಿ ರೂ ಮೌಲ್ಯದ ಚರಾಸ್ತಿ ಹಾಗೂ 41.82 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ತಮ್ಮ ನಾಮಪತ್ರದಲ್ಲಿ ತಿಳಿಸಿದ್ದಾರೆ.

    Haris Family

    ಸ್ವಂತ ಕಾರಿಲ್ಲ

    ಇಷ್ಟು ಪ್ರಮಾಣದ ಆಸ್ತಿ ಹೊಂದಿದ್ದರು ಸಹ ಶಾಸಕ ಎನ್.ಎ. ಹ್ಯಾರಿಸ್​ ಹಾಗೂ ಅವರ ಪತ್ನಿ ತಾಹಿರಾ ಬಳಿ ಸ್ವಂತ ಕಾರಿಲ್ಲ ಎಂದು ತಾವು ಸಲ್ಲಿಸಿರುವ ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹ್ಯಾರಿಸ್​ ಬಳಿ 4 ಕೆಜಿ ಚಿನ್ನ, 203 ಗ್ರಾಂ ರೂಬಿ ಮತ್ತು ವಜ್ರ ಹೊಂದಿರುವುದಾಗಿ ತಿಳಿಸಿದ್ದಾರೆ.

    ಸಾಲ

    ವಿವಿಧ ಸಂಸ್ಥೆಗಳಿಂದ 28,29,56,979 ರು. ಸಾಲ ಹಾಗೂ ಖಾಸಗಿ ವ್ಯಕ್ತಿಗಳಿಂದ 115.58 ಕೋಟಿ ಸಾಲ ಪಡೆದಿರುವುದಾಗಿ ಗೋಷಿಸಿದ್ದಾರೆ.

    ಶಾಸಕ ಹ್ಯಾರಿಸ್​ ಮಗಳಿಗೆ 1.35 ಕೋಟಿ ರೂ ಸಾಲ, ಮಗನಿಗೆ 1.17 ಕೋಟಿ ರೂ, ಪತ್ನಿ ತಾಹಿರಾಗೆ 13 ಲಕ್ಷ ಸಾಲ ನೀಡಿರುವುದಾಗಿ ತಮ್ಮ ನಾಮಪತ್ರದ ಜೊತೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts