More

    ಒಂದು ಕೆಜಿ ತೊಂಡೆಕಾಯಿಗೆ 900 ರೂ.; ಬೆಲೆ ಕಂಡು ನಿಬ್ಬೆರಗಾದ ಗ್ರಾಹಕ!

    ಲಂಡನ್​: ವಿದೇಶದಲ್ಲಿ ವಾಸಿಸುವುದು ತನ್ನದೇ ಆದ ಅನುಕೂಲ ಹಾಗೂ ಅನಾನುಕೂಲಗಳನ್ನು ಹೊಂದಿರುತ್ತದೆ. ನಮ್ಮಗೆ ಅನ್ವೇಷಿಸಲು ಸಾಕಷ್ಟು ಅವಕಾಶಗಳು ಸಿಗುತ್ತಿರುವಾಗ ನಾವು ಕೆಲವೊಮ್ಮೆ ಹಿಂದುಳಿದು ಬಿಡುತ್ತೇವೆ.

    ಅಂತಹ ಸಮಯದಲ್ಲಿ ನಾವು ಹೆಚ್ಚಾಗಿ ಮನೆಯಲ್ಲಿ ಕಾಲ ಕಳೆಯುತ್ತೇವೆ ಮತ್ತು ವಿನೂತನವಾದ ಪ್ರಯೋಗಗಳನ್ನು ಮಾಡುವ ಮೂಲಕ ನಮ್ಮಲ್ಲಿರುವ ಪ್ರತಿಭೆಯನ್ನು ಹೊರತರಲು ಯತ್ನಿಸುತ್ತೇವೆ.

    ಏನಿರಬಹುದು?

    ಇನ್ನು ಭಾರತೀಯ ಆಹಾರಗಳು ಈಗ ವಿಶ್ವದೆಲ್ಲೆಡೆ ಚಿರಪರಿಚಿತವಾಗಿದ್ದು ಹುಡುಕಾಡುವುದು ಏನು ಕಷ್ಟಕಾರವಾದ ಕೆಲಸ ಅಲ್ಲ. ಆದರೆ, ಕೆಲವೊಮ್ಮೆ ಬೆಲೆಗಳು ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

    ಲಂಡನ್​ನಲ್ಲಿ ವಾಸಿಸುತ್ತಿರುವ ಭಾರತೀಯರೊಬ್ಬರು ಇತ್ತೀಚಿಗೆ ತರಕಾರಿ ಹಾಗೂ ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ಹೋದಾಗ ಬೆಲೆನೋಡಿ ಶಾಕ್​ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

    ಬೆಲೆ ಕಂಡು ಶಾಕ್​

    ಇತ್ತೀಚಿಗೆ ಟ್ವಿಟರ್​ ಬಳಕೆದಾರರೊಬ್ಬರು ಲಂಡನ್​ನ ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೋ, ಬೆಂಡೆಕಾಯಿ, ಹಾಗಲಕಾಯಿ, ಹಸಿ ಮೆಣಸಿನಕಾಯಿ, ತೊಂಡೆಕಾಯಿಯ ಫೋಟೋಳನ್ನು ಪೋಸ್ಟ್​ ಮಾಡಿದ್ದಾರೆ.

    ಇದನ್ನೂ ಓದಿ: ಮಹಿಳೆಗೆ ಬೆದರಿಕೆ; ಬಾಲಿವುಡ್​ ನಟನ ವಿರುದ್ಧ ಪ್ರಕರಣ ದಾಖಲು

    ಇದರಲ್ಲೇನು ವಿಶೇಷ ಎಂದು ಕೇಳಬಹುದು ಇದರಲ್ಲಿ ತೊಂಡೆಕಾಯಿಯ ಬೆಲೆ ಸುಮಾರು 8.99 ಪೌಂಡ್ಸ್​ ಎಂದು ನಮೂದಿಸಲಾಗಿದೆ ಅಂದರೆ, ಪ್ರತಿ ಕೆಜಿಗೆ 900 ರೂಪಾಯಿ ಎಂದು ಹೇಳಲಾಗಿದೆ.

    ಸಖತ್​ ಸದ್ದು ಮಾಡುತ್ತಿದೆ ತೊಂಡೇಕಾಯಿ

    ಇನ್ನು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಈ ಪೋಟೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಡಿದಾದ ತರಕಾರಿಯ ಬೆಲೆಯನ್ನು ಕಂಡು ಶಾಕ್​ ಆಗಿದ್ದು ತಮ್ಮದೇ ಆಧ ಅಭಿಪ್ರಾಯಗಳನ್ನು ಹಂಚಿಕೊಂಡಿದ್ಧಾರೆ.

    ನಮ್ಮಗೆ ನಿಮ್ಮ ನೋವು ತಿಳಿಯುತ್ತದೆ ಇಂತಹ ದುಬಾರಿ ತರಕಾರಿಗಳನ್ನು ಸೇವಿಸಿದ ಮೇಲೆ ಬಿಪಿ ಟ್ಯಾಬ್ಲೆಟ್​ಗಳನ್ನು ತೆಗೆದುಕೊಳ್ಳಬೇಕು. ಇದನ್ನು ಸೇವಿಸುವ ಬದಲು ಭಾರತದಿಂದ ಅಮದು ಮಾಡಿಕೊಂಡು ಮಾರಾಟ ಮಾಡುವುದು ಉತ್ತಮ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts