More

    VIDEO| ವಿಜಯವಾಣಿ ಫೋನ್​ಇನ್​| ಬೆಂಗಳೂರಿಗರಿಗೆ ಅಭಯ ನೀಡಿದ ಬಿಬಿಎಂಪಿ ಕಮಿಷನರ್​

    ಬೆಂಗಳೂರು: ಮಹಾಮಾರಿ ಕರೊನಾ ವೈರಸ್​ ಜತೆಗೆ ಬೆಂಗಳೂರು ನಗರ ಪ್ರಸ್ತುತ ಎದುರಿಸುತ್ತಿರುವ ಅನೇಕ ಸಮಸ್ಯೆಗಳು ಹಾಗೂ ಪರಿಹಾರ ಯೋಜನೆ ಕುರಿತು ನಾಗರಿಕರು ಕೇಳಿದ ಪ್ರಶ್ನೆಗಳಿಗೆ ಬಿಬಿಎಂಪಿ ಕಮಿಷನರ್​ ಎನ್​. ಮಂಜುನಾಥ್​ಪ್ರಸಾದ್​ ವಿಜಯವಾಣಿ ಫೋನ್​ಇನ್​ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

    ಶನಿವಾರ ಮಧ್ಯಾಹ್ನ ಬೆಂಗಳೂರಿನ ವಿಜಯವಾಣಿ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮಕ್ಕೆ ಸಾಕಷ್ಟು ನಾಗರಿಕರು ಕರೆ ಮಾಡಿ ತಮ್ಮ ಸಮಸ್ಯೆಯನ್ನು ಕಮಿಷನರ್​ಗೆ ಹೇಳಿಕೊಂಡರು.

    ಪ್ರಮುಖವಾಗಿ ಪ್ರಸ್ತುತ ಜನರನ್ನು ಕರೊನಾ ಭಯ ಆವರಿಸಿದ್ದು, ಕರೊನಾ ಚಿಕಿತ್ಸಾ ಸಮಸ್ಯೆ, ಲಸಿಕೆ, ನಗರದಲ್ಲಿನ ಕರೊನಾ ಸ್ಥಿತಿಗತಿ ಕುರಿತು ನಾಗಕರಿಕರು ಪ್ರಶ್ನಿಸಿದರು. ಇದರೊಂದಿಗೆ ನಗರದ ಅಭಿವೃದ್ಧಿಯ ಯೋಜನೆಗಳು, ರಸ್ತೆ ಗುಂಡಿ ಸಮಸ್ಯೆಗಳು, ಕಾಮಗಾರಿ ವಿಳಂಬ ಸೇರಿದಂತೆ ಇನ್ನು ಅನೇಕ ಸಮಸ್ಯೆಗಳ ಕುರಿತು ಕಮಿಷನರ್​ಗೆ ಬೆಳಕು ಚಲ್ಲಿದರು.

    ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸುವುದಾಗಿ ಕಮಿಷನರ್​ ಭರವಸೆ ನೀಡಿದ್ದಲ್ಲದೆ, ಕರೊನಾ ಬಗ್ಗೆ ಜನರಿಗೆ ಧೈರ್ಯದ ಮಾತುಗಳನ್ನಾಡಿದರು. ಸಾಕಷ್ಟು ವಿಚಾರಗಳ ಬಗ್ಗೆ ಕಮಿಷನರ್​ ಮಾತನಾಡಿದ್ದು, ಸಮಗ್ರ ಮಾಹಿತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ನಿರೀಕ್ಷಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts