More

    ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಕಸ ನೀಡಿದರೆ 500 ರೂ. ದಂಡ : ಮರುಬಳಕೆ ಬುಟ್ಟಿಯಲ್ಲಿ ಕಸ ನೀಡಿ

    ಬೆಂಗಳೂರು : ನಗರದಲ್ಲಿ ಮನೆಯಿಂದ ಪೌರಕಾರ್ಮಿಕರಿಗೆ ಕಸ ನೀಡಲು ಕಡ್ಡಾಯವಾಗಿ ಮರುಬಳಕೆ ಬುಟ್ಟಿಗಳನ್ನು ಬಳಸಬೇಕು. ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಕಸ ನೀಡಿದರೆ, ಮೊದಲ ಬಾರಿಗೆ 500 ರೂ. ಪುನರಾವರ್ತನೆಯಾದರೆ 1 ಸಾವಿರ ರೂ. ದಂಡ ವಿಧಿಸಲು ಪಾಲಿಕೆ ಮುಂದಾಗಿದೆ.

    ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಹಸಿ, ಒಣ ಮತ್ತು ಸ್ಯಾನಿಟರಿ ತ್ಯಾಜ್ಯ ವಿಂಗಡಿಸಿ ನೀಡುವ ನಿಯಮ ಜಾರಿಗೊಳಿಸಲಾಗಿದ್ದು, ಉಲ್ಲಂಸಿದಲ್ಲಿ 1 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಈಗ ಇದಕ್ಕೂ ಒಂದು ಹೆಜ್ಜೆ ಮುಂದಿಟ್ಟಿರುವ ಪಾಲಿಕೆ, ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಕಸ ನೀಡದೆ, ಮರುಬಳಕೆ ಮಾಡಬಹುದಾದ ಕಸದ ಬುಟ್ಟಿಯಿಂದ ಪೌರಕಾರ್ಮಿಕರಿಗೆ ವಿಭಜಿತ ತ್ಯಾಜ್ಯ ನೀಡುವಂತೆ ಸೂಚಿಸಿದೆ. ನಿಯಮ ಜಾರಿಗೂ ಮೊದಲು ಜಾಗೃತಿ ಮೂಡಿಸಲಿದ್ದು, ಜನವರಿಯಿಂದ ದಂಡ ಅನ್ವಯವಾಗುವ ಸಾಧ್ಯತೆಯಿದೆ.

    ನಗರದಲ್ಲಿ ಶೇ.100 ವಿಭಜಿತ ತ್ಯಾಜ್ಯ ಸಂಗ್ರಹಿಸುವ ಉದ್ದೇಶದಿಂದ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ತ್ಯಾಜ್ಯ ನೀಡುವುದನ್ನು ನಿಷೇಧಿಸಲಾಗಿದೆ. ಈಗಾಗಲೇ ಕೆಲವು ವಾರ್ಡ್‌ಗಳಲ್ಲಿ ಹಸಿ ಕಸಕ್ಕೆ ಹಸಿರು ಬುಟ್ಟಿ ಮತ್ತು ಒಣ ಕಸಕ್ಕೆ ನೀಲಿ ಬಣ್ಣದ ಬುಟ್ಟಿಗಳನ್ನು ವಿತರಿಸಲಾಗಿದೆ. ಇನ್ನು ಸ್ಯಾನಿಟರಿ ತ್ಯಾಜ್ಯವನ್ನು ಪೇಪರ್‌ನಲ್ಲಿ ಸುತ್ತಿ ನೀಡುವಂತೆ ಸೂಚಿಸಲಾಗಿದೆ. ಈ ಕುರಿತು ಮೊದಲ ಹಂತದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ನಂತರ ಪ್ಲಾಸ್ಟಿಕ್‌ನಲ್ಲಿ ನೀಡುವ ಕಸ ಸ್ವೀಕಾರ ನಿಲ್ಲಿಸಲಾಗುತ್ತದೆ. ಆಗಲೂ ಎಚ್ಚೆತ್ತುಕೊಳ್ಳದಿದ್ದರೆ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts