More

    ಬಿಬಿಎಂಪಿ ಕಮಿಷನರ್ ಟ್ವಿಟರ್​ ಖಾತೆ ಹ್ಯಾಕ್!

    ಬೆಂಗಳೂರು : ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಮಿಷನರ್​ ಗೌರವ್ ಗುಪ್ತ ಅವರ ಅಧಿಕೃತ ಟ್ವಿಟರ್ ಖಾತೆಯು ಇಂದು ಬೆಳಿಗ್ಗೆ ಕೆಲವು ಗಂಟೆಗಳು ಹ್ಯಾಕ್​ ಆಗಿತ್ತು ಎಂದು ತಿಳಿದುಬಂದಿದೆ. ಹ್ಯಾಕರ್​ಗಳು ‘ಗೌರವ್ ಗುಪ್ತ’ ಎಂಬ ಹೆಸರಿನ ಬದಲಿಗೆ ‘ಟೆಸ್ಲಾ’ ಎಂದು ನಮೂದಿಸಿ ಕ್ರಿಪ್ಟೊಕರೆನ್ಸಿಯ ಬಗ್ಗೆ ಕೆಲವು ಟ್ವೀಟ್​ಗಳನ್ನು ಮಾಡಿದರು ಎನ್ನಲಾಗಿದೆ.

    ಕಮಿಷನರ್​ ಅವರ ಖಾತೆ ಹ್ಯಾಕ್​ ಆದ ಬಗ್ಗೆ ಬಿಬಿಎಂಪಿ ಮೂಲಗಳು ಇಂಡಿಯನ್​​​ಎಕ್ಸ್​ಪ್ರೆಸ್​.ಕಾಮ್​ಗೆ ತಿಳಿಸಿದ್ದು, ಖಾತೆಯ ನಿಯಂತ್ರಣವನ್ನು ಹಿಂಪಡೆಯುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಈ ಅಧಿಕೃತ ಖಾತೆಯನ್ನು ನಿರ್ವಹಿಸುವ ಬಾಹ್ಯ ಏಜೆನ್ಸಿಯು ಸಮಸ್ಯೆಯನ್ನು ಸರಿಪಡಿಸುತ್ತಿದ್ದು, ಕಮಿಷನರ್​ ಗೌರವ್​ ಗುಪ್ತ ಅವರಿಗೂ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ.

    ಬಿಟ್​ಕಾಯಿನ್​ಗಳನ್ನು ಪಡೆಯುವ ಅವಕಾಶವಿರುವ ಈವೆಂಟ್​ ಬಗ್ಗೆ ಸುದೀರ್ಘ ಪೋಸ್ಟ್​ ಮಾಡಿದ್ದರು ಎನ್ನಲಾಗಿದ್ದು, ಇದೀಗ ಹ್ಯಾಕರ್​ನ ಆ ಟ್ವೀಟ್​ಗಳನ್ನು ತೆಗೆದುಹಾಕಲಾಗಿದೆ. ಆದರೆ ಬಿಬಿಎಂಪಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಸಂದೇಶ ಬಂದಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)

    ಜಿರಳೆಯನ್ನು ಪಶು ಆಸ್ಪತ್ರೆಗೆ ಕರೆದುತಂದ ಮಹಾನುಭಾವ!

    ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಎಲ್ಲರೂ ಪಾಸ್, ಯಾರೂ ಫೇಲ್​ ಇಲ್ಲ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts