More

    ಪ್ರೈಮ್​ ವೀಡಿಯೋದಲ್ಲಿ ‘ಮೈತ್ರಿ: ಫೀಮೇಲ್​ ಫಸ್ಟ್​ ಕಲೆಕ್ಟಿವ್​’ ಬಿಡುಗಡೆ

    ಮುಂಬೈ: ಭಾರತದ ಅತ್ಯಂತ ಪ್ರೀತಿಪಾತ್ರವಾದ ಮತ್ತು ಅತೀ ಹೆಚ್ಚು ವೀಕ್ಷಣೆಯಾಗುವ ಓಟಿಟಿಯಾದ ಅಮೇಜಾನ್​ ಪ್ರೈಮ್​ ಇಂದು ಹೊಸ ಸೀರೀಸ್​ ಬಿಡುಗಡೆ ಮಾಡಿದೆ. ‘ಮೈತ್ರಿ: ಫೀಮೇಲ್​ ಫಸ್ಟ್​ ಕಲೆಕ್ಟಿವ್​’ ಎಂಬ ಮಹಿಳಾ ಪ್ರಧಾನವಾದ ಈ ಸೀರೀಸ್​ನಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಒಂಬತ್ತು ಮಹಿಳೆಯರು ಒಂದೇ ವೇದಿಕೆಯಲ್ಲಿ, ಈ ಕ್ಷೇತ್ರದಲ್ಲಿ ತಾವು ಎದುರಿಸಿದ ಸವಾಲುಗಳು, ಪಡೆದ ಯಶಸ್ಸುಗಳು ಸೇರಿದಂತೆ ಹಲವು ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಅಗತ್ಯವಿರುವವರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನೂ ಅವರು ನೀಡಲಿದ್ದಾರೆ.

    ಇದನ್ನೂ ಓದಿ: ‘ತೂತು ಮಡಿಕೆ’ ಆಯ್ತು; ಈಗ ಇನ್ನೊಂದು ಚಿತ್ರಕ್ಕೆ ಕೈಹಾಕಿದ ಅದೇ ತಂಡ

    ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಅಪರ್ಣಾ ಪುರೋಹಿತ್ (ಮೈತ್ರಿ ಮತ್ತು ಇಂಡಿಯಾ ಒರಿಜಿನಲ್ಸ್​ ಮುಖ್ಯಸ್ಥೆ), ಇಂಧು ವಿ.ಎಸ್​ (ಬರಹಗಾರ್ತಿ ಮತ್ತು ನಿರ್ದೇಶಕಿ), ರತೀನಾ ಪ್ಲತ್ತೋತ್ತಿಲ್​ (ಬರಹಗಾರ್ತಿ, ನಿರ್ದೇಶಕಿ ಮತ್ತು ನಿರ್ಮಾಪಕಿ), ಇಲಾಹೆ ಹಿಪ್ತೂಲ (ನಿರ್ಮಾಪಕಿ), ಪಾರ್ವತಿ ತಿರುವೋತ್ತು (ನಟಿ, ನಿರ್ದೇಶಕಿ) ರೀಮಾ ಕಲ್ಲಿಂಗಳ್​ (ನಟಿ ಮತ್ತು ನಿರ್ದೇಶಕಿ, ಶ್ರೇಯಾ ದೇವ್​ ದೂಬೆ (ನಿರ್ದೇಶಕಿ ಮತ್ತು ಛಾಯಾಗ್ರಾಹಕಿ) ಮತ್ತು ನೇಹಾ ಪಾರ್ತಿ ಮತಿಯಾನಿ (ಛಾಯಾಗ್ರಾಹಕಿ) ಈ ಸೀಸನ್​ನಲ್ಲಿ ಭಾಗವಹಿಸಲಿದ್ದಾರೆ. ಅವರನ್ನು ಕೂರಿಸಿ ಮಾತನಾಡಿಸುವುದರ ಜತೆಗೆ, ಅವರಿಂದ ಹಲವು ಮುಖ್ಯ ವಿಷಯಗಳನ್ನು ಹೊರ ತೆಗೆಯಲಿದ್ದಾರೆ ಮೈತ್ರಿಯ ಕ್ಯೂರೇಟರ್​ ಆದ ಸ್ಮೃತಿ ಕಿರಣ್.

    ಈ ಸೀರೀಸ್​ನಲ್ಲಿ ಮನರಂಜನಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಹೇಗೆ ಎಂಬುದರ ಜತೆಗೆ ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡುವುದು ಮತ್ತು ಅವರಿಗೆ ಭಯಮುಕ್ತ ವಾತಾವರಣವನ್ನು ನಿರ್ಮಿಸುವುದು ಹೇಗೆ ಎಂಬ ವಿಷಯಗಳನ್ನು ಚರ್ಚಿಸಲಾಗುತ್ತದೆ.

    ಇದನ್ನೂ ಓದಿ: ಯಾವುದೇ ಚಿತ್ರರಂಗವನ್ನೂ ಕೀಳಾಗಿ ನೋಡಬೇಡಿ … ಇದು ಯಶ್​ ಮನವಿ

    ಸೀಸನ್​ನಲ್ಲಿ ಭಾಗವಹಿಸಿರುವ ವೃತ್ತಿಪರ ಮಹಿಳೆಯರು, ಈ ವೃತ್ತಿಯಲ್ಲಿ ತಾವು ಎದುರಿಸುತ್ತಿರುವ ಸವಾಲುಗಳ ಜತೆಗೆ, ತಮ್ಮ ವೈಯಕ್ತಿಕ ಅನುಭವಗಳನ್ನು ಸಹ ಹಂಚಿಕೊಂಡಿದ್ದಾರೆ. ಕಷ್ಟದ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಮಾತನಾಡಿದ್ದಾರೆ. ಈ ಆಧುನಿಕ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುರುಷರಿಗೆ ಸಮನಾಗಿ ಮಹಿಳೆಯರು ಹೇಗೆ ಭಾಗವಹಿಸಬಹುದು ಎಂಬುದನ್ನು ಚರ್ಚಿಸಲಾಗಿದೆ.

    ‘ವೇದ’ ಚಿತ್ರ ವಿಮರ್ಶೆ: ದೌರ್ಜನ್ಯದ ವಿರುದ್ಧ ಅಪ್ಪ-ಮಗಳ ಹೋರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts