More

    ಪ್ರವಾಸಿಗರೆ ಆತಂಕ ಬೇಡ ಮೈಸೂರು ಮೃಗಾಲಯದ ಪಕ್ಷಿಗಳಲ್ಲಿ ಹಕ್ಕಿಜ್ವರ ಇಲ್ಲ

    ಮೈಸೂರು: ರಾಜ್ಯದ ಹೆಸರಾಂತ ಜಯಚಾಮರಾಜೇಂದ್ರ ಒಡೆಯರ್ ಮೃಗಾಲಯದ ಪಕ್ಷಿಗಳಲ್ಲಿ ಹಕ್ಕಿಜ್ವರದ ವೈರಾಣುಗಳು ಪತ್ತೆಯಾಗಿಲ್ಲ. ಹೀಗಾಗಿ ಪ್ರವಾಸಿಗರು ಆತಂಕಪಡುವುದು ಬೇಡ ಎಂದು ಮೃಗಾಲಯದ ಕಾರ್ಯಕಾರಿ ನಿರ್ದೇಶಕ ಅಜಿತ್​ ಹೇಳಿದ್ದಾರೆ.

    ನೆರೆ ರಾಜ್ಯದ ಕೇರಳದಲ್ಲಿ ವ್ಯಕ್ತಿಗಳಲ್ಲಿ ಕರೊನಾ ವೈರಸ್​ ಹಾಗೂ ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆ ಮತ್ತು ಮೈಸೂರಿನಲ್ಲಿ ಕೊಕ್ಕರೆಗಳ ಸಾವಿನ ಹಿನ್ನೆಲೆಯಲ್ಲಿ ಮೃಗಾಲಯದ ಪಕ್ಷಿಗಳಲ್ಲೂ ಹಕ್ಕಿಜ್ವರದ ವೈರಾಣು ಹರಡಿರಬಹುದು ಎನ್ನುವ ಭೀತಿ ಎಲ್ಲರಲ್ಲೂ ಎದುರಾಗಿತ್ತು. ಆದರೆ ಯಾರು ಭಯಪಡುವುದು ಬೇಡ. ಪರೀಕ್ಷಾ ವರದಿಯಲ್ಲಿ ಮೃಗಾಲಯದ ಪಕ್ಷಿಗಳಲ್ಲಿ ಹಕ್ಕಿಜ್ವರದ ವೈರಾಣುಗಳು ಪತ್ತೆಯಾಗಿಲ್ಲ ಎಂದು ಹೇಳಿದರು.

    ಮೃಗಾಲಯದ ಎಲ್ಲ ಪ್ರಾಣಿಗಳ ಮಲ ಹಾಗೂ ಪಕ್ಷಿಗಳ ಹಿಕ್ಕೆಯನ್ನು ಸಂಗ್ರಹಿಸಿ 15 ದಿನಕ್ಕೊಮ್ಮೆ ಮಧ್ಯ ಪ್ರದೇಶದ ಭೂಪಾಲ್​ನಲ್ಲಿರುವ ಪ್ರಯೋಗಾಲುಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಪರೀಕ್ಷೆ ಮಾಡಿ ವರದಿ ನೀಡುತ್ತಾರೆ. ವರದಿ ಇಂದು ಕೈಸೇರಿದ್ದು ಹಕ್ಕಿಜ್ವರದ ಸೋಂಕು ಪತ್ತೆಯಾಗಿಲ್ಲ ಎಂದು ಅವರು ಹೇಳಿದರು.

    ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯ ಆಗಿರುವುದರಿಂದ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕುಸಿದಿದೆ. ಏಪ್ರಿಲ್​ ಹಾಗೂ ಮೇನಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತದೆ. ಮೃಗಾಲಯದಲ್ಲಿ ಹಕ್ಕಿಜ್ವರದ ಬಗ್ಗೆ ಪಶು ವೈದ್ಯ ಇಲಾಖೆ ಸಿಬ್ಬಂದಿ ಅರಿವು ಮೂಡಿಸುತ್ತಿದ್ದಾರೆ ಎಂದು ಅವರು ಹೇಳಿದರು. (ದಿಗ್ವಿಜಯ ನ್ಯೂಸ್​)

    ಕೊಕ್ಕರೆಗಳ ಸಾವಿನ ಬಗ್ಗೆ ಆತಂಕಭರಿತ ಅನುಮಾನ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts