ಕೊಕ್ಕರೆಗಳ ಸಾವಿನ ಬಗ್ಗೆ ಆತಂಕಭರಿತ ಅನುಮಾನ…!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸದೊಂದು ಆತಂಕ ಸೃಷ್ಟಿಯಾಗಿದೆ. ಕಳೆದ ಒಂದು ವಾರದಲ್ಲಿ 12 ಕೊಕ್ಕರೆಗಳು ಮೃತಪಟ್ಟ ಬೆನ್ನಲ್ಲೇ ಅನುಮಾನವೊಂದು ಕಾಡುತ್ತಿದೆ. ಮೂರ್ನಾಲ್ಕು ದಿನಗಳ ಹಿಂದೆ ಕೇರಳದ ಕೋಳಿಕ್ಕೋಡ್​ನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು ವರದಿಯಾಗಿತ್ತು. ಒಂದು ಕೋಳಿ ಫಾರ್ಮ್​ ಮತ್ತು ನರ್ಸರಿಯಲ್ಲಿ ಕೋಳಿಗಳಿಗೆ ಹಕ್ಕಿಜ್ವರ ತಗುಲಿದ್ದು ದೃಢಪಟ್ಟಿತ್ತು. ಈಗ ಆ ರೋಗ ಮೈಸೂರಿಗೂ ವಕ್ಕರಿಸಿದೆಯಾ? ಇದೇ ಕಾರಣಕ್ಕೆ ಕೊಕ್ಕರೆಗಳು ಹೀಗೆ ಸಾಯುತ್ತಿವೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ಇದು ಹಕ್ಕಿಗಳ ವಲಸೆ ಸಮಯ. ಕೇರಳದಿಂದ ಮೈಸೂರಿಗೆ ಹಕ್ಕಿಗಳು ಬರುವುದು ತೀರ … Continue reading ಕೊಕ್ಕರೆಗಳ ಸಾವಿನ ಬಗ್ಗೆ ಆತಂಕಭರಿತ ಅನುಮಾನ…!