More

    ಕೊಕ್ಕರೆಗಳ ಸಾವಿನ ಬಗ್ಗೆ ಆತಂಕಭರಿತ ಅನುಮಾನ…!

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸದೊಂದು ಆತಂಕ ಸೃಷ್ಟಿಯಾಗಿದೆ. ಕಳೆದ ಒಂದು ವಾರದಲ್ಲಿ 12 ಕೊಕ್ಕರೆಗಳು ಮೃತಪಟ್ಟ ಬೆನ್ನಲ್ಲೇ ಅನುಮಾನವೊಂದು ಕಾಡುತ್ತಿದೆ.

    ಮೂರ್ನಾಲ್ಕು ದಿನಗಳ ಹಿಂದೆ ಕೇರಳದ ಕೋಳಿಕ್ಕೋಡ್​ನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು ವರದಿಯಾಗಿತ್ತು. ಒಂದು ಕೋಳಿ ಫಾರ್ಮ್​ ಮತ್ತು ನರ್ಸರಿಯಲ್ಲಿ ಕೋಳಿಗಳಿಗೆ ಹಕ್ಕಿಜ್ವರ ತಗುಲಿದ್ದು ದೃಢಪಟ್ಟಿತ್ತು. ಈಗ ಆ ರೋಗ ಮೈಸೂರಿಗೂ ವಕ್ಕರಿಸಿದೆಯಾ? ಇದೇ ಕಾರಣಕ್ಕೆ ಕೊಕ್ಕರೆಗಳು ಹೀಗೆ ಸಾಯುತ್ತಿವೆಯಾ ಎಂಬ ಅನುಮಾನ ವ್ಯಕ್ತವಾಗಿದೆ.

    ಇದು ಹಕ್ಕಿಗಳ ವಲಸೆ ಸಮಯ. ಕೇರಳದಿಂದ ಮೈಸೂರಿಗೆ ಹಕ್ಕಿಗಳು ಬರುವುದು ತೀರ ಸಾಮಾನ್ಯವಾಗಿದ್ದ ಹಕ್ಕಿ ಜ್ವರ ಭೀತಿ ಕಾಡುತ್ತಿದೆ. ಮೃತ ಕೊಕ್ಕರೆಗಳ ರಕ್ತದ ಮಾದರಿಯನ್ನು ಲ್ಯಾಬೊರೇಟರಿಗಳಿಗೆ ಕಳಿಸಲಾಗಿದ್ದು, ವರದಿ ಬರಲು ಇನ್ನೂ ನಾಲ್ಕೈದು ದಿನಗಳು ಬೇಕು ಎನ್ನಲಾಗಿದೆ. ವರದಿ ಬಂದ ಬಳಿಕವಷ್ಟೇ ಹಕ್ಕಿಜ್ವರ ಇತ್ತಾ ಎಂಬುದು ಗೊತ್ತಾಗಲಿದೆ.

    ಆದರೆ ಕೊಕ್ಕರೆಗಳ ಸಾವಿನ ಬೆನ್ನಲ್ಲೇ ಮೃಗಾಲಯ, ಕುಕ್ಕರಹಳ್ಳಿ, ಕಾರಂಜಿಕೆರೆ ಹಾಗೂ ಕೆಲವು ಜನನಿಬಿಡ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಸ್ಪೆಶಲ್​ ವಾರ್ಡ್​​ ವ್ಯವಸ್ಥೆಯನ್ನೂ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

    ಮೋದಿ, ಷಾ ಭೇಟಿ ಬಳಿಕ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಜ್ಯೋತಿರಾದಿತ್ಯ ಸಿಂಧ್ಯಾ; ಸೋನಿಯಾ ಗಾಂಧಿಗೆ ಪತ್ರ ರವಾನೆ

    ಹಿಂದೂ ಸಮುದಾಯಕ್ಕೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ರಿಂದ ಹೋಳಿ ಶುಭಾಶಯ; ಶಾಂತಿಯಿಂದ ಹಬ್ಬ ಆಚರಿಸುವಂತೆ ಟ್ವೀಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts