More

    ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಹೊಸದೇನಲ್ಲ: ದೇವೇಗೌಡ

    ತುಮಕೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ 3 ವರ್ಷಗಳಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಇದೆ. ಇದು ಹೊಸದೇನಲ್ಲ. ಇದರಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂಬುದಿಲ್ಲ. ಇದರ ಬದಲಾಗಿ ಎರಡು ಪಕ್ಷಗಳಿಗೂ ಒಂದು ಕಮಿಟ್ಮೆಂಟ್ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದರು.

    ಹೊನ್ನೇನಹಳ್ಳಿ ಗ್ರಾಮದಲ್ಲಿ ಇಂದು ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಮೈಸೂರು ಪಾಲಿಕೆಯಲ್ಲಿ ಮೂರು ಪಕ್ಷಗಳಿಗೂ ಸ್ಪಷ್ಟಬಹುಮತ ಸಿಗಲಿಲ್ಲ. ಕಾಂಗ್ರೆಸ್ 18, ಜೆಡಿಎಸ್ 25, ಬಿಜೆಪಿ 26 ಸದಸ್ಯ ಬಲ ಹೊಂದಿದ್ದು, ಸಿದ್ದರಾಮಯ್ಯ ಒಬ್ಬ ಪಕ್ಷೇತರನನ್ನು ಸೆಳೆದುಕೊಂಡಿದ್ದು, ಕಾಂಗ್ರೆಸ್ ಬಲ 19 ಆಯ್ತು. ನಾನು ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಮೊದಲ ವರ್ಷ ನಾನು ನಮ್ಮ ಪಕ್ಷದ ಮುಖಂಡರಿಗೆ ಸಿದ್ದರಾಮಯ್ಯಗೆ ಮೇಯರ್ ಮಾಡೋ ಆಸೆ ಇದೆ ಬಿಟ್ಟುಬಿಡಿ ಅಂತಾ ಹೇಳಿದ್ದೆ. ಅದರಂತೆ ಕಾಂಗ್ರೆಸ್ ಅವರೇ ಆದರು. ಎರಡನೇ ಅವಧಿಗೆ ಅವರೇ ನಮಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟರು ಎಂದರು. ಇದನ್ನೂ ಓದಿರಿ ಮೈಸೂರಿನ ಹುಲಿ ಎಂದು ಅಬ್ಬರಿಸುತ್ತಿದ್ದ ಸಿದ್ದರಾಮಯ್ಯರನ್ನ ಹಿಡಿದು ಬೋನಿಗೆ ಹಾಕಿದ ಎಚ್​ಡಿಕೆ…

    ಆದರೆ, ಈ ಭಾರಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಮೇಯರ್-ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಸ್ಪರ್ಧಿಸಿದ್ದರು. ನಮ್ಮ ಪಕ್ಷದಿಂದಲೂ ಸ್ಪರ್ಧಿಸಿದ್ದರು. ಕೊನೇ ಘಳಿಗೆಯಲ್ಲಿ ಕಾಂಗ್ರೆಸ್ ತನ್ನ ಬೆಂಬಲವನ್ನ ವ್ಯಕ್ತಪಡಿಸಿದ್ದು, ಜೆಡಿಎಸ್​ಗೆ ಮೇಯರ್ ಸ್ಥಾನ ದೊರೆತಿದೆ. ಕುಮಾರಸ್ವಾಮಿ ನಿನ್ನೆಯಿಂದಲೂ ಅಲ್ಲೇ ಇದ್ದು ಚುನಾವಣೆಯಲ್ಲಿ ಹೆಚ್ಚುಕಡಿಮೆ ಆಗದಂತೆ‌ ನಿಗಾವಹಿಸಿದ್ದರು. ಕಾಂಗ್ರೆಸ್ ಉಪಮೇಯರ್ ಹುದ್ದೆ ತೆಗೆದುಕೊಂಡಿದ್ದಾರೆ. ಕುಮಾರಸ್ವಾಮಿ ಜತೆ ಕಾಂಗ್ರೆಸ್ ಮುಖಂಡರು ಯಾರು ಮಾತನಾಡಿದ್ದಾರೊ ಗೊತ್ತಿಲ್ಲ ಎಂದು ದೇವೇಗೌಡರು ಹೇಳಿದರು.

    ರಾಜಕೀಯವಾಗಿ, ಸಾಮಾಜಿಕವಾಗಿ ಹಿಂದುಳಿದ ಸಮುದಾಯದವರನ್ನ ಮೇಲೆತ್ತುವ ಸಲುವಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದರು.

    ಅಂದು ಪೊಲೀಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರು, ಆಗ ಸಹಾಯಕ್ಕೆ ನಾನೇ ಬಂದೆ… ಇದನ್ನ ದರ್ಶನ್​ ನೆನೆಯಲಿ

    ರಾಜ್ಯದಲ್ಲಿ ಈ ಭಾರಿ 110 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!

    ನಾಟಕ ಪ್ರದರ್ಶನದಲ್ಲಿ ಮೈಮೇಲೆ ಬಂದ ಚಾಮುಂಡಿ ದೇವಿ! ವಿಡಿಯೋ ವೈರಲ್​

    ವಿವಾಹಿತೆ ಜತೆ ಯುವಕನ ಸಲ್ಲಾಪ, ತಡರಾತ್ರಿ ಸಿಕ್ಕಿಬಿದ್ದ ಜೋಡಿಯನ್ನ ಟ್ರ್ಯಾಕ್ಟರ್​ಗೆ ಕಟ್ಟಿಹಾಕಿದ ಗ್ರಾಮಸ್ಥರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts