More

    ಭ್ರಷ್ಟಾಚಾರ ಪ್ರಕರಣ; ಮ್ಯಾನ್ಮಾರ್‌ ಪದಚ್ಯುತ ನಾಯಕಿ ಸೂಕಿಗೆ ಮತ್ತೆ ಜೈಲು ಶಿಕ್ಷೆ

    ಮ್ಯಾನ್ಮಾರ್‌: ದೇಶದ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿಗೆ ಇಲ್ಲಿನ ಮಿಲಿಟರಿ ಕೋರ್ಟ್‌ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈಗಾಗಲೇ ಸೂಕಿ ಅವರಿಗೆ 11 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಲಾಗಿದ್ದು, ಅವರು ಜೈಲಿನಲ್ಲಿದ್ದಾರೆ.

    77 ವರ್ಷ ವಯಸ್ಸಿನ ನೊಬೆಲ್ ಪ್ರಶಸ್ತಿ ವಿಜೇತೆ ಮತ್ತು ಮ್ಯಾನ್ಮಾರ್‌ನ ಮಿಲಿಟರಿ ಆಡಳಿತ ವಿರೋಧಿಯಾದ ಸೂಕಿ ವಿರುದ್ಧ ಚುನಾವಣಾ ನಿಮಯಗಳ ಉಲ್ಲಂಘನೆ ಸೇರಿದಂತೆ 19 ವಿವಿಧ ರೀತಿಯ ಆರೋಪಗಳನ್ನು ಹೊರಿಸಲಾಗಿದೆ. ಈ ಆರೋಪಗಳು ಸುಮಾರು 190 ವರ್ಷಗಳ ಗರಿಷ್ಠ ಜೈಲು ಶಿಕ್ಷೆ ಒಳಗೊಂಡಿವೆ. ಆದರೆ, ತಮ್ಮ ವಿರುದ್ಧ ಮಾಡಲಾದ ಎಲ್ಲ ಆರೋಪಗಳನ್ನು ಅಸಂಬದ್ಧ ಎಂದು ಸೂಕಿ ಈಗಾಗಲೇ ಅಲ್ಲಗಳೆದಿದ್ದಾರೆ.

    ನೈಪಿಟಾವ್‌ನ ಜೈಲಿನಲ್ಲಿರುವ ಸೂಕಿ ವಿರುದ್ಧ ಹಣ ದುರುಪಯೋಗ ಸೇರಿ ನಾಲ್ಕು ಹೊಸ ಆರೋಪಗಳನ್ನು ಮಾಡಲಾಗಿದೆ. ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅವರು ಸ್ಥಾಪಿಸಿದ ಸಂಸ್ಥೆಯಾದ ದಾವ್ ಖಿನ್ ಕಿ ಫೌಂಡೇಶನ್‌ನಿಂದ ಅವ್ಯವಹಾರ ನಡೆದಿದೆ. ಮನೆ ನಿರ್ಮಿಸಲು ಮತ್ತು ಸರ್ಕಾರಿ ಸ್ವಾಮ್ಯದ ಭೂಮಿಯನ್ನು ರಿಯಾಯಿತಿ ದರದಲ್ಲಿ ಪಡೆದಿರುವ ಪ್ರಕರಣದಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯ ಇದೀಗ ಘೋಷಿಸಿದೆ ಎಂದು ವರದಿಯಾಗಿದೆ.

    ನಿಷೇಧಾಜ್ಞೆ ನಡುವೆಯೂ ಶಿವಮೊಗ್ಗದಲ್ಲಿ ನಿಲ್ಲದ ಹಿಂಸಾಚಾರ: ಮತ್ತೋರ್ವ ಹಿಂದೂ ಯುವಕನಿಗೆ ಚಾಕು ಇರಿತ

    ಮತ್ತೆ ಭುಗಿಲೆದ್ದ ಫೋಟೋ ವಿವಾದ: ಶಿವಮೊಗ್ಗದಲ್ಲಿ ಹಿಂದೂ ಯುವಕನಿಗೆ ಚಾಕು ಇರಿತ- ನಿಷೇಧಾಜ್ಞೆ ಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts