More

    2001ರಲ್ಲಿ ಚಿಕನ್​, ಮಟನ್​ ಬಿರಿಯಾನಿ ಬೆಲೆ ಎಷ್ಟಿತ್ತು ಗೊತ್ತಾ? ರೆಸ್ಟೋರೆಂಟ್ ಮೆನು ಕಾರ್ಡ್​ ನೋಡಿದ್ರೆ ಹುಬ್ಬೇರೋದು ಖಚಿತ!

    ನವದೆಹಲಿ: ಪಾಕೆಟ್​ ಸ್ನೇಹಿ ಹಾಗೂ ತುಂಬಾ ಅಗ್ಗವಾಗಿ ಬಾಯಲ್ಲಿ ನೀರೂರಿಸುವಂತಹ ರುಚಿಕರ ಆಹಾರವನ್ನು ಸವಿಯುತ್ತಿದ್ದ ಕಾಲ ಎಂದೋ ಮುಗಿಯಿತು. ಇಂದು ಎಲ್ಲವು ದುಬಾರಿಯಾಗಿದೆ. ಏನಾದರೂ ತಿನ್ನಬೇಕು ಅನಿಸಿದರೂ ಮೊದಲು ಪಾಕೆಟ್​ ಚೆಕ್​ ಮಾಡಿಕೊಳ್ಳಬೇಕು. ಏಕೆಂದರೆ ಎಲ್ಲ ಬೆಲೆಗಳು ಜೇಬು ಸುಡುವಂತಿದೆ. ಅಂದಿನಿಂದ ಇಂದಿನವರೆಗೂ ಆಗಿರುವ ಬದಲಾವಣೆಯ ಬಗ್ಗೆ 90ರ ದಶಕದ ಜನರಿಗೆ ತುಂಬಾ ಅರಿವಿದೆ.

    ಕೀಪ್ಯಾಡ್​ ಮೊಬೈಲ್​ ಫೋನ್​ಗಳಿಂದ ಸ್ಮಾರ್ಟ್​ ಫೋನ್​ವರೆಗೆ ಮತ್ತು ಸಿಆರ್​ಟಿ ಟಿವಿಯಿಂದಿಡಿದು ಸ್ಮಾರ್ಟ್​ ಟಿವಿಯವರೆಗೂ ಆದ ಎಲ್ಲ ಬದಲಾವಣೆಗಳನ್ನು 90ರ ದಶಕದ ಮಕ್ಕಳಿಗೆ ತುಂಬಾ ಚೆನ್ನಾಗಿ ಗೊತ್ತಿದೆ. ಇತ್ತೀಚೆಗೆ ರೆಸ್ಟೋರೆಂಟ್​ ಒಂದರ 2001ನೇ ಇಸವಿಯ ಮೆನು ಕಾರ್ಡ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದನ್ನು ನೋಡಿದ ನೆಟ್ಟಿಗರು 90ರ ದಶಕದ ಕ್ಷಣಗಳನ್ನು ನೆನೆಯುತ್ತಿದ್ದಾರೆ.

    ವೈರಲ್​ ಆಗಿರುವ ಮೆನುವಿನಲ್ಲಿ ಅಂದಿನ ವಿವಿಧ ಬಗೆಯ ಆಹಾರ ಮತ್ತು ಅದಕ್ಕೆ ತಗಲುತ್ತಿದ್ದ ಖರ್ಚನ್ನು ಉಲ್ಲೇಖಿಸಲಾಗಿದೆ. ಅಚ್ಚರಿಯೇನೆಂದರೆ ಅಂದು ರೆಸ್ಟೋರೆಂಟ್​ನಲ್ಲಿ ಒಂದು ಪ್ಲೇಟ್​ ಚಿಕನ್​ ಬಿರಿಯಾನಿ ಬೆಲೆ ಕೇವಲ 30 ಇತ್ತು. ಅಲ್ಲದೆ, ಮಟನ್​ ಬಿರಿಯಾನಿಗೆ ಕೇವಲ 32 ರೂ. ಇತ್ತು. ರೆಸ್ಟೋರೆಂಟ್​ ಅಂದಮೇಲೆ ಕೇಳಬೇಕಾ ಸಾಮಾನ್ಯ ಹೋಟೆಲ್​ಗಿಂತ ರೆಸ್ಟೋರೆಂಟ್​ ತುಂಬಾ ದುಬಾರಿಯಾಗಿರುತ್ತವೆ. ಅಲ್ಲಿಗೆ ಜನ ಸಾಮಾನ್ಯರಂತೂ ಹೋಗುವುದಿಲ್ಲ. ರೆಸ್ಟೋರೆಂಟ್​ಗಳಿಗೆ ಹೋಗುವವರು ಬಹುತೇಕ ಹಣಕಾಸು ಸ್ಥಿತಿ ಉತ್ತಮವಾಗಿರುವವರು. ಆದರೆ, 2001ರಲ್ಲಿ ರೆಸ್ಟೋರೆಂಟ್​ನಲ್ಲಿ ಕೇವಲ 30 ರೂ. ಅಂದರೆ ನಿಜಕ್ಕೂ ಅಚ್ಚರಿಯ ಸಂಗತಿ.

    ಇಂದು ರೆಸ್ಟೋರೆಂಟ್​ಗಳಿಗೆ ಹೋದರೆ, ಒಂದು ಪ್ಲೇಟ್​ ಚಿಕನ್​ ಬಿರಿಯಾನಿ ಬೆಲೆ ಕನಿಷ್ಟ ಅಂದರೂ 150 ರಿಂದ 200 ರೂ. ಇರುತ್ತದೆ. ಇನ್ನು ಮಟನ್​ ಬಿರಿಯಾನಿ ಬೆಲೆಯಂತೂ 300 ರಿಂದ 350 ರೂ. ಇರುತ್ತದೆ. ಆದರೆ, 2001ರಲ್ಲಿ ಕೇವಲ 30 ಮತ್ತು 31 ರೂ. ಬಿಕನ್​ ಮತ್ತು ಮಟನ್​ ಬಿರಿಯಾನಿ ಸಿಗುತ್ತಿತ್ತು. ಉಳಿದಂತೆ ಎಗ್​ ರೋಲ್​, ಚಿಕನ್​ ರೋಲ್​, ಎಗ್​ ಚಿಕನ್​ ರೋಲ್​, ವಿಶೇಷ ಚಿಕನ್​ ರೋಲ್​ ಕ್ರಮವಾಗಿ 7, 10, 15 ಮತ್ತು 24 ರೂ.ಗೆ ಸಿಗುತ್ತಿತ್ತು.

    ಮೆನುವನ್ನು ಜಾಲತಾಣದಲ್ಲಿ ಪೋಸ್ಟ್​ ಮಾಡಿದಾಗಿನಿಮದ 3500ಕ್ಕೂ ಹೆಚ್ಚು ಮಂದಿ ಫೋಟೋಗೆ ಲೈಕ್​ ಮಾಡಿದ್ದಾರೆ. ಇವತ್ತೇನಿದ್ರೂ ಒಂದು ಮೆನು, ಒಂದೇ ಐಟಂ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. ಒಂದು ಎಗ್​ ರೋಲ್​ ಇವತ್ತು 70 ರೂ. ಆಗಿದೆ. ಆ ದಿನಗಳೇ ಸರಿಯಾಗಿದ್ದವು ಎಂದೆಲ್ಲ ಕಮೆಂಟಿಸುತ್ತಿದ್ದಾರೆ. ಈ ಮೆನು ನೋಡಿ ನಿಮಗೆ ಏನು ಅನಿಸಿತುಬ ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

    1959ರಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ನಿಮ್ಮ ಹುಬ್ಬೇರೋದು ಗ್ಯಾರೆಂಟಿ!

    ಅದಾನಿ ಗ್ರೂಪ್​ಗೆ 21 ಸಾವಿರ ಕೋಟಿ ರೂ. ಸಾಲ: ಚಿಂತಿಸುವ ಅಗತ್ಯವಿಲ್ಲ ಎಂದ SBI ಚೇರ್ಮನ್​

    ರಾಜ್ಯ ಸರ್ಕಾರಕ್ಕೆ ಸೇರಬೇಕಾದ 76 ಲಕ್ಷ ರೂ. ಗುಳುಂ! ಡಿ‌ ಗ್ರೂಪ್​ ನೌಕರನ ಕೈಚಳಕ, ಪತ್ನಿ, ನೆಂಟರ ಖಾತೆಗೆ ಹಣ ಜಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts