More

    ರಾಜ್ಯ ಸರ್ಕಾರಕ್ಕೆ ಸೇರಬೇಕಾದ 76 ಲಕ್ಷ ರೂ. ಗುಳುಂ! ಡಿ‌ ಗ್ರೂಪ್​ ನೌಕರನ ಕೈಚಳಕ, ಪತ್ನಿ, ನೆಂಟರ ಖಾತೆಗೆ ಹಣ ಜಮೆ

    ರಾಮನಗರ: ಅಧಿಕಾರಿಗಳ ನಕಲಿ ಡಿಜಿಟಲ್​​ ಸಹಿಯನ್ನು ದುರ್ಬಳಕೆ ಮಾಡಿಕೊಂಡು, ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಲಕ್ಷಾಂತರ ರೂಪಾಯಿ ಗುಳಂ ಮಾಡುತ್ತಿದ್ದ ರಾಮನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ ದರ್ಜೆಯ ​ನೌಕರ ಸೇರಿದಂತೆ ಒಟ್ಟು 8 ಮಂದಿಯ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

    ಆರೋಪಿಗಳು ಸುಮಾರು 76 ಲಕ್ಷ ರೂ. ಹಣ ದುರುಪಯೋಗ ಮಾಡಿದ್ದಾರೆ. ಅಧಿಕಾರಿಗಳ ನಕಲಿ ಸಹಿ ಹಾಗೂ ಖಜಾನೆ -2 ಡಿಎಸ್ ಡಿಜಿಟಲ್ ಕೀ ಬಳಸಿ ಹಣ ಕಬಳಿಸಿದ್ದಾರೆ. ವಂಚಿಸಿದ ಹಣವನ್ನು ತನ್ನ ಹೆಂಡತಿ, ಸಂಭಂದಿಕರ ಖಾತೆಗೆ ಮಂಜುನಾಥ್​ ಜಮಾವಣೆ ಮಾಡಿಕೊಂಡಿದ್ದ.

    ಅಂದಹಾಗೆ ಆರೋಪಿ ಮುಂಜುನಾಥ್​ ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್​​​ನಲ್ಲಿ ಡಿ ಗ್ರೂಪ್ ನೌಕರನಾಗಿದ್ದ. ಬಳಿಕ ಆತನನ್ನು ರಾಮನಗರ ತಾಲೂಕು ಕಚೇರಿಯಲ್ಲಿ ಡಿ-ದರ್ಜೆ ಸಿಬ್ಬಂದಿಯಾಗಿ ಖಜಾನೆ ಕೆಲಸಗಳನ್ನು ನೋಡಿಕೊಳ್ಳಲು ನೇಮಿಸಲಾಗಿತ್ತು. ಅಲ್ಲಿನ ವಿಚಾರಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದ ಮಂಜುನಾಥ್​, 2019 ರಿಂದ‌ 2022ರ ವರೆಗೂ ಹಣವನ್ನು ವಂಚಿಸಿದ್ದಾನೆ.

    ಕಳ್ಳತನ ಮಾಡಿದ ಹಣದಲ್ಲಿ ಮನೆ ಕಟ್ಟಿಕೊಂಡು ಇನ್ನುಳಿದ ಹಣವನ್ನು ಜೂಜಿನಲ್ಲಿ ಕಳೆದಿದ್ದಾನೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ನೀಡಿದ ದೂರಿನ ಮೇಲೆ ಎಫ್ಐಆರ್ ದಾಖಲಾಗಿದೆ. ಸದ್ಯ ಆರೋಪಿ ಮಂಜುನಾಥ್​ ಪೋಲಿಸರ ವಶದಲ್ಲಿದ್ದಾನೆ. (ದಿಗ್ವಿಜಯ ನ್ಯೂಸ್​)

    ಅದಾನಿ ಗ್ರೂಪ್​ಗೆ 21 ಸಾವಿರ ಕೋಟಿ ರೂ. ಸಾಲ: ಚಿಂತಿಸುವ ಅಗತ್ಯವಿಲ್ಲ ಎಂದ SBI ಚೇರ್ಮನ್​

    ರಾಯಲ್​ ಎನ್​ಫೀಲ್ಡ್​ಗೆ ಕೆಟಿಎಂ ಬೈಕ್​ಗೆ ಡಿಕ್ಕಿ: ಯುವತಿ ದುರಂತ ಸಾವು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘಟನೆ

    ವಿಮಾನ ಪ್ರಯಾಣ ಉಚಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts