More

    ವಿಮಾನ ಪ್ರಯಾಣ ಉಚಿತ!

    ಹಾಂಕಾಂಗ್: ಕರೊನಾ ಕಾರಣಕ್ಕೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದ ಹಾಂಕಾಂಗ್ ಈಗ ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಗಿದೆ. ಪ್ರಚಾರಾಂದೋಲನದ ಅಂಗವಾಗಿ 5 ಲಕ್ಷ ವಿಮಾನ ಪ್ರಯಾಣದ ಟಿಕೆಟ್​ಗಳನ್ನು ಪ್ರವಾಸಿಗರಿಗೆ ಉಚಿತವಾಗಿ ನೀಡಲಾಗುವುದು ಎಂದು ಅಲ್ಲಿನ ಆಡಳಿತ ಘೋಷಿಸಿದೆ.

    ‘ಹಲೋ, ಹಾಂಕಾಂಗ್’ ಹೆಸರಲ್ಲಿ ಸರ್ಕಾರ ಮರುಬ್ರಾ್ಯಂಡಿಂಗ್ ಅಭಿಯಾನ ಶುರುಮಾಡಿದೆ. ವಿಶ್ವದ ಪ್ರವಾಸಿಗರನ್ನು ಆಕರ್ಷಿಸುವುದು ಇದರ ಉದ್ದೇಶ. ವರ್ಷಗಳ ಕಾಲ ನಡೆದ ರಾಜಕೀಯ ದಮನ, ಸಾಂಕ್ರಾಮಿಕ ನಿರ್ಬಂಧ, ವ್ಯಾಪಾರ ದಿಗ್ಬಂಧನ ಇನ್ನಿತರ ಕಳಂಕದಿಂದ ಹೊರಬರಲು ಸರ್ಕಾರ ಯತ್ನಿಸುತ್ತಿದೆ. ಯಾವುದೇ ಪ್ರತ್ಯೇಕತೆ, ನಿರ್ಬಂಧಗಳಿಲ್ಲದೆ ಪ್ರವಾಸಿಗರು ಭೇಟಿ ನೀಡಬಹುದು. ಕೊಡುಗೆಯು ಮಾರ್ಚ್​ನಲ್ಲಿ ಆರಂಭವಾಗುತ್ತದೆ. ಸ್ಥಳೀಯ ಏರ್​ಲೈನ್ಸ್ ಕ್ಯಾಥೆ ಪೆಸಿಫಿಕ್, ಎಚ್​ಕೆ ಎಕ್ಸ್​ಪ್ರೆಸ್ ಮತ್ತು ಹಾಂಕಾಂಗ್ ಏರ್​ಲೈನ್ಸ್​ನಿಂದ ಉಚಿತ ಟಿಕೆಟ್ ವಿತರಿಸಲಾಗುತ್ತದೆ. ಬೇಸಿಗೆಯಲ್ಲಿ ಇನ್ನೂ 80,000 ಟಿಕೆಟ್​ಗಳನ್ನು ನೀಡಲಾಗುವುದು. ಪ್ರವಾಸಿಗರು ಗಮ್ಯಸ್ಥಾನಗಳನ್ನು ಮೊದಲೇ ಘೊಷಿಸಬೇಕಾಗುತ್ತದೆ.

    ಯೋಜನೆ ಘೋಷಣೆ ಏಕೆ?

    ಬೀಜಿಂಗ್​ನ ಶೂನ್ಯ ಕೋವಿಡ್ ನೀತಿ, ಕಠಿಣ ಕ್ವಾರಂಟೈನ್, ಬಂದ್ ಆಗಿದ್ದ ಗಡಿಗಳು, ಮಾರಣಾಂತಿಕ ಒಮಿಕ್ರಾನ್ ಪ್ರಕರಣ ಏರಿಕೆ ಕಾರಣ ಹಾಂಕಾಂಗ್ ತತ್ತರಿಸಿತ್ತು. ಪ್ರವಾಸಿಗರು ಬಾರದ ಕಾರಣ ಇಲ್ಲಿನ ಆರ್ಥಿಕ ವ್ಯವಸ್ಥೆಯೂ ಕುಸಿದಿದೆ. ಈಗ ಹಾಂಕಾಂಗ್ ಕರೊನಾಮುಕ್ತವಾಗಿದ್ದು, ಮತ್ತೆ ಪ್ರವಾಸಿಗಳನ್ನು ಸೆಳೆಯಲು ಮುಂದಾಗಿದೆ. ಹಾಂಕಾಂಗ್​ಗೆ 2022ರಲ್ಲಿ ಕೇವಲ 6 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. 2018 ರ ಅಂಕಿ-ಅಂಶಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts