More

    VIDEO| ರೌಡಿಸಂ ಹಾದಿ ಹಿಡಿದವರಿಗೆ ಮಾಜಿ ಭೂಗತ ದೊರೆ ಮುತ್ತಪ್ಪ ರೈ ನೀಡಿದ್ದರು ಉಪಯುಕ್ತ ಸಲಹೆ!

    ಬೆಂಗಳೂರು: ಕ್ಯಾನ್ಸರ್​ನಿಂದ ಕೊನೆಯುಸಿರೆಳೆದ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅವರು ಈ ಹಿಂದೆ ದಿಗ್ವಿಜಯ 24X7 ನ್ಯೂಸ್​ಗೆ ನೀಡಿದ್ದ ಸಂದರ್ಶನದಲ್ಲಿ ರೌಡಿಸಂ ಹಾದಿ ಹಿಡಿಯುವವರಿಗೆ ಉಪಯುಕ್ತವಾದ ಸಲಹೆಗಳನ್ನು ನೀಡಿದ್ದರು.

    ಇದನ್ನೂ ಓದಿ: VIDEO| ಅಂಡರ್​ವರ್ಲ್ಡ್​ ಡಾನ್​ಗೆ ಲವ್ ಆಗಿದ್ಹೇಗೆ? ಪತ್ನಿ ಬಗ್ಗೆ ‘ರೈ’ ಅಂತರಾಳದ ಮಾತು!

    ಇಂದು ಯುವಕರು ಕೊಲೆ ಮಾಡಿ ರೌಡಿಶೀಟರ್​ ಆಗೋದು ಹಾಗೂ ಜೈಲಿಗೆ ಹೋಗೋದು ಸಾಮಾನ್ಯವಾಗಿದೆ. ಸಾಮಾಜಿಕ ದೃಷ್ಟಿಕೋನದಿಂದ ನೋಡಿದಾಗ ಇಂತಹ ವಿಚಾರಗಳು ಎಲ್ಲರ ಮನಸ್ಸನ್ನು ಕದಡುತ್ತದೆ. ಈ ಬಗ್ಗೆ ನೀವೇನು ಹೇಳುತ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ರೈ, ನಾನು ಸುಮಾರು 20 ವರ್ಷದಿಂದ ರೌಡಿಸಂನಿಂದ ದೂರ ಉಳಿದಿದ್ದೇನೆ ಎಂದಿದ್ದರು.

    ಇದನ್ನೂ ಓದಿ: PHOTOS| ಮಾಜಿ ಭೂಗತ ದೊರೆ ಹೀಗಿದ್ರು ನೋಡಿ…

    ಮುಂದುವರಿದು ಮಾತನಾಡಿ, ನಾನೀಗ ರೌಡಿಸಂ ಹಿನ್ನೆಲೆಯಿರುವ ಯಾರೋಬ್ಬರನ್ನು ನನ್ನ ಮನೆ ಕಾಂಪೌಂಡ್​ ಒಳಗೂ ಬಿಟ್ಟಿಕೊಳ್ಳುವುದಿಲ್ಲ. ರೌಡಿಸಂ ಅವಕಾಶ ಬಂದು ಅಂತವರು ಯಾರ ಜತೆಯಲ್ಲಾದರೂ ಬಂದು ನನ್ನನ್ನು ಭೇಟಿ ಮಾಡಿದರೆ ಬುದ್ಧಿವಾದ ಹೇಳಿ ಕಳುಹಿಸುತ್ತೇನೆ. ಜೀವನದಲ್ಲಿ ರೌಡಿಸಂನಿಂದ ಹೊರಗೆ ಬಂದು ಬದುಕುವುದು ತುಂಬಾ ಕಷ್ಟವೆಂದು ಮನದಟ್ಟು ಮಾಡಿಸುತ್ತೇನೆಂದು ಹೇಳಿದ್ದರು.

    ಇದನ್ನೂ ಓದಿ: ಭೂಗತ ಲೋಕದ ಮಾಜಿ ಡಾನ್​​ಗೆ ಮರುಜನ್ಮ ನೀಡಿದ ಬಿಡದಿ

    ಒಮ್ಮೆ ರೌಡಿಶೀಟರ್​ ಆದರೆ, ಪೊಲೀಸರು ಪರೇಡ್​ ಮಾಡಿಸುತ್ತಾರೆ. ಅದರಲ್ಲೂ ಹೊಸ ಆಫೀಸರ್​ ಬಂದರೆ ಮತ್ತೆ ಪರೇಡ್​ ಮಾಡುವುದು ಹಾಗೂ ಅವಮಾನಿಸುವುದು ಮಾಡುತ್ತಾರೆ. ನೀನು ಪ್ರಕರಣದಲ್ಲಿ ಭಾಗಿಯಾಗಿದೆಯೋ? ಇಲ್ಲವೋ? ಹಳೇ ರೌಡಿಗಳನ್ನು ಕರೆದು ಪರೇಡ್​ ಮಾಡಿಸಿ, ಅವಮಾನಿಸುತ್ತಾರೆ. ಇಂತಹದೆಲ್ಲ ಆಗಾಗ ನಡೆಯುತ್ತಿರುತ್ತದೆ. ಇದರಿಂದ ನೀವು ಹೊರಗೆ ಬರಬೇಕು. ರೌಡಿಸಂ ಕ್ಷೇತ್ರಕ್ಕೆ ಹೋಗಬಾರದು ಎಂದು ಸಲಹೆ ನೀಡುತ್ತೇನೆ ಎಂದಿದ್ದರು.

    ಇದನ್ನೂ ಓದಿ: ರೈ ಸಿನಿಮಾ ಫಸ್ಟ್​ ಲುಕ್​ಗೇ ನಿಲ್ಲೋದಕ್ಕೆ ಬಚ್​ಕನಾ ಎಂಟ್ರಿ ಕಾರಣವಾಯಿತಾ?

    ಇನ್ನು ಸಾಕಷ್ಟು ವಿಚಾರಗಳ ಬಗ್ಗೆ ಮುತ್ತಪ್ಪ ರೈ ಅವರು ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದರು. ಅದರ ಸಂಪೂರ್ಣ ವಿಡಿಯೋವನ್ನು ನೀವಿಲ್ಲಿ ನೋಡಬಹುದಾಗಿದೆ.

    ಮಾಜಿ ಭೂಗತ ಲೋಕದ ದೊರೆ, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ (68) ಇಂದು ಬೆಳಗ್ಗಿನ ಜಾವ 2 ಗಂಟೆಗೆ ಕೊನೆಯುಸಿರೆಳೆದರು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಬಿಡದಿ ನಿವಾಸದಲ್ಲಿಂದು ಅವರ ಅಂತ್ಯಕ್ರಿಯೆ ನೇರವೇರಲಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ರೈ – ದ ಗ್ರೇಟೆಸ್ಟ್ ಗ್ಯಾಂಗ್​ಸ್ಟರ್ ಎವರ್ – ಹೀಗೊಂದು ಫಿಲಂ ತೆರೆ ಕಾಣಬೇಕಿತ್ತು; ಆರ್​ಜಿವಿ ರಿಲೀಸ್ ಮಾಡಿದ್ದು ಫಸ್ಟ್​ ಲುಕ್ ಮಾತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts