More

    ಅಯೋಧ್ಯೆ ರಾಮಮಂದಿರಕ್ಕಾಗಿ ಶ್ರೀರಾಮನ ವಿಗ್ರಹ ಕೆತ್ತಿದ ಇಬ್ಬರು ಮುಸ್ಲಿಂ ಶಿಲ್ಪಿಗಳು!

    ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿರುವ ರಾಮಮಂದಿರದ ಮಹಾ ಉದ್ಘಾಟನೆ ಮುಂಬರುವ ಜನವರಿಯಲ್ಲಿ ನಡೆಯಲಿದ್ದು, ಇದಕ್ಕಾಗಿ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಇಬ್ಬರು ಮುಸ್ಲಿಂ ಶಿಲ್ಪಿಗಳು ಶ್ರೀರಾಮನ ವಿಗ್ರವನ್ನು ಕೆತ್ತನೆ ಮಾಡಿದ್ದಾರೆ.

    ಮೊಹಮ್ಮದ್​ ಜಮಾಲುದ್ದೀನ್​ ಮತ್ತು ಆತನ ಪುತ್ರ ಬಿಟ್ಟು, ದೇವಸ್ಥಾನದ ಸಂಕೀರ್ಣವನ್ನು ಅಲಂಕರಿಸುವ ಈ ಭವ್ಯವಾದ ಪ್ರತಿಮೆಯನ್ನು ರಚಿಸಿದ್ದಾರೆ. ತಂದೆ ಮತ್ತು ಮಗನ ಅಮೋಘ ಕೆಲಸವನ್ನು ಆನ್‌ಲೈನ್ ಮೂಲಕ ತಿಳಿದುಕೊಂಡ ಬಳಿಕ, ರಾಮನ ಮೂರ್ತಿ ರಚನೆಗೆ ಅಯೋಧ್ಯೆಯಿಂದ ಆದೇಶ ನೀಡಲಾಯಿತು.

    ಜೇಡಿಮಣ್ಣಿಗೆ ಹೋಲಿಸಿದರೆ ಫೈಬರ್ ಪ್ರತಿಮೆಗಳಿಗೆ ಹೆಚ್ಚಿನ ವೆಚ್ಚ ತಗುಲಿದರೂ, ಅವುಗಳ ಬಾಳಿಕೆ ಮತ್ತು ಯಾವುದೇ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದರಿಂದ ದೇವಾಲಯದ ಹೊರಾಂಗಣ ಸ್ಥಾಪನೆಗಳಿಗೆ ಇದು ಮೊದಲ ಆಯ್ಕೆಯಾಗಿದೆ ಎಂದು ಜಮಾಲುದ್ದೀನ್ ಹೇಳಿದರು. ಸಾಮಾನ್ಯ ಗಾತ್ರ ಒಂದು ವಿಗ್ರಹವು ಸುಮಾರು 2.8 ಲಕ್ಷ ರೂಪಾಯಿಗಳಷ್ಟು ವೆಚ್ಚವಾಗಬಹುದು. ಆದರೆ, ವಿಗ್ರಹದಲ್ಲಿ ಅಡಕವಾಗಿರುವ ನಿಖರವಾದ ಕರಕುಶಲತೆಯು ಬೆಲೆಯನ್ನು ಸಮರ್ಥಿಸುತ್ತದೆ ಎಂದು ಹೇಳಿದ್ದಾರೆ.

    Rama

    ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಬಗ್ಗೆ ನಿಮ್ಮಲ್ಲಿ ಗೊಂದಲವಿತ್ತೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಜಮಾಲುದ್ದೀನ್, ಧರ್ಮವು ವೈಯಕ್ತಿಕ ವಿಷಯವಾಗಿದೆ. ನಾವು ದೇಶದಲ್ಲಿ ವಿವಿಧ ಧರ್ಮಗಳ ಜನರನ್ನು ಹೊಂದಿದ್ದೇವೆ. ಇಲ್ಲಿ ಸಂದೇಶವು ಸರಳವಾಗಿದೆ. ಅದೇನೆಂದರೆ, ಕೋಮುವಾದದ ಸಮಯದಲ್ಲಿ ನಾವೆಲ್ಲರೂ ಒಟ್ಟಿಗೆ ಇರಬೇಕು. ಭಗವಾನ್ ರಾಮನ ಪ್ರತಿಮೆಯನ್ನು ಮಾಡಲು ನನಗೆ ಸಂತೋಷವಾಯಿತು. ಈ ಸಹೋದರತ್ವದ ಸಂಸ್ಕೃತಿಯು ಕಲಾವಿದನಾಗಿ ನನ್ನ ಸಂದೇಶವಾಗಿದೆ ಎಂದು ಹೇಳಿದರು.

    ರಾಮನ ವಿಗ್ರಹ ಮಾತ್ರವಲ್ಲದೆ, ದುರ್ಗಾ ಮಾತೆ ಮತ್ತು ಜಗಧಾತ್ರಿಯ ಬೃಹತ್ ಶಿಲ್ಪಗಳನ್ನೂ ರಚಿಸಿದ್ದೇವೆ. ಇದರಿಂದ ನಮಗೆ ಸಾಕಷ್ಟು ಖ್ಯಾತಿ ಬಂದಿದೆ ಎಂದ ಜಮಾಲುದ್ದೀನ್​, ಅನೇಕ ವರ್ಷಗಳಿಂದ ವಿವಿಧ ಹಿಂದು ದೇವತೆಗಳ ಫೈಬರ್ ಶಿಲ್ಪಗಳನ್ನು ತಯಾರಿಸುತ್ತಿರುವುದಕ್ಕೆ ಹೆಮ್ಮೆ ಇದೆ ಮತ್ತು ಸಾಂಸ್ಕೃತಿಕ ಸಾಮರಸ್ಯವನ್ನು ಹೀಗೆ ಪಾಲಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​)

    ಎಲ್ಲೆಂದರಲ್ಲಿ ನಿಮ್ಮ ಪತ್ನಿಯನ್ನು ಮುಟ್ಟಲು… ಅನಿಮಲ್​ ನಿರ್ದೇಶಕನ ಸ್ಫೋಟಕ ಹೇಳಿಕೆ ವೈರಲ್​!

    ಉಫ್… ಕಪ್ಪು ಡ್ರೆಸ್​​​ನಲ್ಲಿ ಗ್ಲಾಮರ್ ಡೋಸ್ ಹೆಚ್ಚಿಸಿದ ಶ್ರುತಿ ಹಾಸನ್, ಇಲ್ಲಿವೆ ವೈರಲ್‌ ಫೋಟೋಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts