More

    ಧಾರ್ಮಿಕ ಕಾರಣದಿಂದಾಗಿ ಬಾಡಿಗೆ ಮನೆ ಕೊಡ್ತಿಲ್ಲ; ಬೇಸರ ವ್ಯಕ್ತಪಡಿಸಿದ ಅನ್ಯಕೋಮಿನ ವ್ಯಕ್ತಿ

    ಪುಣೆ: ಬೆಂಗಳೂರು, ಮುಂಬೈ, ಪುಣೆಗಳಂದ ಬೃಹತ್​ ನಗರಗಳಲ್ಲಿ ಬಾಡಿಗೆ ಮನೆ ಹುಡುಕುವುದು ಒಂದು ದೊಡ್ಡ ಸವಾಲಿ ಕೆಲಸವಾಗಿದೆ. ನಾವು ಮನೆ ಮಾಲೀಕರು ಕೇಳುವಷ್ಟು ಬಾಡಿಗೆ ಕೊಡಲು ಸಿದ್ಧವಾಗಿದ್ದರು ಮನೆ ಓನರ್​ಗಳ ಅಗ್ರಿಮೆಂಟ್​​ ರೂಲ್ಸ್​ಗಳು ಇವೆಲ್ಲವನ್ನು ತಲೆಕೆಳಗೆ ಮಾಡುತ್ತದೆ. ಹೀಗೆ ಇಲ್ಲೊಬ್ಬ ವ್ಯಕ್ತಿ ಪುಣೆಯಲ್ಲಿ ಬಾಡಿಗೆ ಮನೆ ಹುಡುಕಲು ತಾನು ಪಟ್ಟಿರುವ ಕಷ್ಟದ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

    ಧಾರ್ಮಿಕ ಪರಿಗಣನೆಯ ಕಾರಣದಿಂದಾಗಿ ಪುಣೆಯಲ್ಲಿ ಮನೆ ಹುಡುಕಲು ಹೆಣಗಾಡುತ್ತಿರುವ ಮುಸ್ಲಿಂ ವ್ಯಕ್ತಿ ರಿಜ್ವಾನ್ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಧರ್ಮದ ಆಧಾರವಾಗಿ ಇರುವ ಗುತ್ತಿಗೆ ಒಪ್ಪಂದಗಳನ್ನು ಅವರು ಟೀಕಿಸಿದರು, ಇದು ಸೂಕ್ತವಾದ ವಾಸಸ್ಥಳ ಹುಡುಕಾಟಕ್ಕೆ ಅಡ್ಡಿಯಾಗಿದೆ ಎಂದಿದ್ದಾರೆ.

    ನಾನು ಪುಣೆಯಲ್ಲಿ ಬಾಡಿಗೆ ಮನೆ ಮಾಡಬೇಕು ಎನ್ನುವ ನಿರ್ಧಾರವನ್ನು ಕೈ ಬಿಟ್ಟಿದ್ದೇನೆ. ಪುಣೆಯ ತುಂಬೆಲ್ಲಾ ಹುಡುಕಾಡಿದ್ದೇನೆ…ಬಾಡಿಗೆ ಮನೆ ಮಾಲೀಕರು ನೋಈಡುವ ಅಗ್ರಿಮೆಂಟ್​ ಧರ್ಮದ ಆಧಾರದ ಮೇಳೆ ಮಾಡಲಾಡುತ್ತಿದೆ. ನಾನು ಒಂದನ್ನು ಪಡೆದರೂ ಜನರು ನನ್ನನ್ನು ಕೆಲವು ತಿಂಗಳುಗಳಲ್ಲಿ ಹೊರಹಾಕುತ್ತಾರೆ ಎಂದು ಹೇಳುತ್ತಾರೆ. ನಾನು ಭಾರತವನ್ನು ತುಂಬಾ ನಂಬಿದ್ದೇನೆ ಎಂದು ಟ್ವೀಟ್​​ ಮಾಡಿ ಬೇಸರ ಹೊರ ಹಾಕಿದ್ದಾರೆ.

    ಧಾರ್ಮಿಕ ಕಾರಣದಿಂದಾಗಿ ಬಾಡಿಗೆ ಮನೆ ಕೊಡ್ತಿಲ್ಲ; ಬೇಸರ ವ್ಯಕ್ತಪಡಿಸಿದ ಅನ್ಯಕೋಮಿನ ವ್ಯಕ್ತಿ

    “ನಾನು ಈ ದೇಶವನ್ನು ತೊರೆಯುವುದಿಲ್ಲ ಎಂದು ಪ್ರಜ್ಞಾಪೂರ್ವಕವಾಗಿ ನಿರ್ಧರಿಸಿದ್ದೇನೆ. ಇಲ್ಲಿ ಇತಂಹ ಸ್ಟಾರ್ಟ್ಅಪ್ ಸಂಸ್ಕೃತಿ ಈಗಷ್ಟೇ ಶುರುವಾಗಿದೆ. ಆದರೆ ಪ್ರತಿ ಬಾರಿ ಈ ಮೂರ್ಖತನ ಸಂಭವಿಸುತ್ತದೆ ಮತ್ತು ಭಾರತವನ್ನು ತೊರೆದ ಯಾರನ್ನೂ ನಾನು ದೂಷಿಸುವುದಿಲ್ಲ ಎಂದಿದ್ದಾರೆ.
    ಪೋಸ್ಟ್ ವೈರಲ್​​ ಆಗಿದ್ದು, ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.

    “ಹೇ ಗೆಳೆಯ ಕ್ಷಮಿಸು… ಇಡೀ ದೇಶವನ್ನು ಒಂದೇ ಬ್ರಷ್‌ನಿಂದ ಬಣ್ಣಿಸಬೇಡ. ಭಾರತದ ನಗರಗಳು ಕೆಲವೊಮ್ಮೆ ಸ್ವಲ್ಪ ಕಠಿಣವಾಗಿ ಕಾಣಿಸಬಹುದು. ಇದು ಆಶ್ಚರ್ಯಕರವಾಗಿದೆ. ಬಾಡಿಗೆ ಮನೆ ಹುಡುಕುವಾಗ ಪ್ರತಿಯೊಬ್ಬರೂ ಒಂದು ರೀತಿಯ ಅನುಭವವನ್ನು ಹೊಂದಿರುತ್ತಾರೆ. ಮದುವೆ ಆಗಿದ್ಯಾ? ಯಾರ್ಯಾರು ಮನೆಲಿ ಇರುತ್ತೀರಾ? ಬಾಡಿಗೆ ಜಾಸ್ತಿ ಕೊಡಬೇಕು ಎನ್ನುವ ಕಂಡೀಶನ್ ಹಾಕುತ್ತಾರೆ ಹಾಗೆ ನಿಮಗೂ ಈ ಅನುಭವ ಆಗಿದೆ ಎಂದಿದ್ದಾರೆ.

    Muslim Mans Rant on Not Getting Home in Pune Due to Religious Agreements Goes Viral

    ಮೂರನೆಯ ವ್ಯಕ್ತಿಯು ವಿಭಿನ್ನ ದೃಷ್ಟಿಕೋನವನ್ನು ಸೂಚಿಸಿ, “ಭಾರತದಲ್ಲಿ ಎಲ್ಲಿಯಾದರೂ ಬಾಡಿಗೆ ಮನೆಯನ್ನು ಪಡೆಯುವಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ಭಾವಿಸುತ್ತೇನೆ. ವಿಷಯವೆಂದರೆ ಜನರು ನಿಮ್ಮ ಬಗ್ಗೆ ವಿಚಾರಿಸುತ್ತಾರೆ ಮತ್ತು ಹಾಗೆ ಮಾಡಲು ಅವರಿಗೆ ಹಕ್ಕಿದೆ. ಅವರನ್ನು ಯಾಕೆ ದೂಷಿಸುತ್ತಿದ್ದೀರಿ ಎಂದು ಕೆಲವರು ಕಾಮೆಂಟ್​ ಮಾಡುತ್ತಿದ್ದಾರೆ. ಈ ಪೋಸ್ಟ್​ ಸಖತ್​ ವೈರಲ್​​ ಆಗಿದೆ.

    ಐಟಿ ಉದ್ಯೋಗಿ ಗಿಂತ ಹೆಚ್ಚು ಸಂಪಾದನೆ ಮಾಡ್ತಾನೆ ಈ ಪಾನಿಪುರಿ ಬಯ್ಯಾ!; ಈತನ ದಿನದ ಆದಾಯ ತಿಳಿದರೆ ಶಾಕ್ ಆಗುತ್ತೀರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts