More

    ಸ್ವರ ಮಾತ್ರಿಕ ಸಂಗೀತಗಾರ ಪದ್ಮಭೂಷಣ ಪಂಡಿತ ಜಸ್​ರಾಜ್​ ಇನ್ನಿಲ್ಲ

    ನವದೆಹಲಿ: ನವದೆಹಲಿ: ಪದ್ಮಭೂಷಣ ಪುರಸ್ಕೃತ, ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಜಸ್​ರಾಜ್ ಅಮೆರಿಕದ ನ್ಯೂ ಜರ್ಸಿಯಲ್ಲಿ ಸೋಮವಾರ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.

    ಹರಿಯಾಣದ ಹಿಸ್ಸಾರ್​ನಲ್ಲಿ 1930 ಜನವರಿ 30ರಂದು ಜನಿಸಿದ್ದ ಜಸ್​ರಾಜ್​, ಅಖಂಡ 80 ವರ್ಷಗಳ ಕಾಲ ವೃತ್ತಿಜೀವನ ನಡೆಸಿದ್ದರು. ಶ್ರೀಯುತರಿಗೆ ಪದ್ಮಶ್ರೀ(1975), ಪದ್ಮಭೂಷಣ(1990) ಹಾಗೂ ಪದ್ಮವಿಭೂಷಣ(2000) ಪ್ರಶಸ್ತಿಗಳು ಸಂದಿದ್ದವು. ಇದಲ್ಲದೇ, ಸಂಗೀತ ನಾಟಕ ಅಕಾಡೆಮಿ ಗೌರವ ಕಾಳಿದಾಸ ಸಮ್ಮಾನ್ ಸೇರಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಂದ ಸಮ್ಮಾನಿತರಾಗಿದ್ದರು.

    ಜಸರಾಜ್ ಮೇವಾಟಿ ಘರಾಣದ ಪ್ರಮುಖ ಗಾಯಕರಾಗಿದ್ದರು. ತಂದೆಯಿಂದ ಸಂಗೀತವನ್ನು ಬಳುವಳಿಯಾಗಿ ಪಡೆದಿದ್ದರು. ಹಿರಿಯ ಸಹೋದರ ಪಂಡಿತ್ ಪ್ರತಾಪ್ ನಾರಾಯಣ್ ಮೂಲಕ ತಬಲಾ ತರಬೇತಿ ಪಡೆದರು.

    ಸಂಜೀವ ಅಭ್ಯಂಕರ್, ಹಿಂದಿ ಚಿತ್ರರಂಗದ ಸಾಧನಾ ಸರ್ಗಮ್​ ಮೊದಲಾದ ಕ್ಯಾತನಾಮರು ಅವರ ಶಿಷ್ಯಗಣದಲ್ಲಿ ಸೇರಿದ್ದಾರೆ.
    ಪ್ರಧಾನಿ ಮೋದಿ ಸಂತಾಪ: ಪಂಡಿತ್ ಜಸ್​ರಾಜ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts