More

    ಸಚಿವ ಮುರುಗೇಶ್ ನಿರಾಣಿಯವರ 57ನೇ ಹುಟ್ಟುಹಬ್ಬ: ಎಂಆರ್​ಎನ್ ಫೌಂಡೇಷನ್ ವತಿಯಿಂದ ಸಮಾಜಮುಖಿ ಕಾರ್ಯಕ್ರಮ

    ಬೆಂಗಳೂರು: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿಯವರ 57ನೇ ಹುಟ್ಟುಹಬ್ಬದ ಪ್ರಯುಕ್ತ ಎಂಆರ್‍ಎಂ (ನಿರಾಣಿ ಫೌಂಡೇಷನ್ ) ವತಿಯಿಂದ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

    ಬಾಗಲಕೋಟೆ ಜಿಲ್ಲೆ ಬಿಳಗಿ ಮತ್ತು ಮುಧೋಳದಲ್ಲಿ ಮುರುಗೇಶ್ ನಿರಾಣಿಯವರ 57ನೇ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ, ಉಚಿತ ನೇತ್ರ ತಪಾಸಣೆ, ಉಚಿತ ಯೋಗಾಶಿಬಿರ, ತೆರಬಂಡಿ ಸ್ಪರ್ಧೆ, ಮಹಾವೃಕ್ಷ ಅಭಿಯಾನ, ಪಶು ಚಿಕಿತ್ಸೆ, ಕೃಷಿ ಅಭಿವೃದ್ಧಿ ಸಂಕಿರಣ, ಕಬ್ಬು ಅಭಿವೃದ್ಧಿ ಕಾರ್ಯಾಗಾರ, ಕೌಶಲ್ಯ ಅಭಿವೃದ್ಧಿ ತರಬೇತಿ ಸೇರಿದಂತೆ ಹತ್ತು ಹಲವು ಕಾರ್ಯಕ್ರಮವನ್ನು ಆಯೋಜಿಸಿದೆ.
    ನಿರಾಣಿಯವರ ಅಭಿಮಾನಿಗಳು ಬಿಳಗಿ 500 ದೇವಸ್ಥಾನಗಳಲ್ಲಿ ವಿಶೇಷ ಮಹಾಪೂಜೆ, ದುರ್ಗ ಸಪ್ತಶದಿ ಹೋಮ, ಗೋಶಾಲೆಗಳಲ್ಲಿ ಗೋಪೂಜೆ, ಮೇವು ವಿತರಣೆ, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಲ್ಲಿ ಹಣ್ಣುಹಂಪಲು ವಿತರಣೆ, ಅನಾಥಶ್ರಮ, ವೃದ್ಧಾಶ್ರಮಗಳಲ್ಲಿ ಹಣ್ಣು ಹಂಪಲು ಸಿಹಿ ವಿತರಣೆ ಮಾಡಿದರು.

    ಮುಧೋಳದ ಮಹಾಲಿಂಗಪುರ ರಸ್ತೆಯಲ್ಲಿ ತೇರಬಂಡಿ ಸ್ಪರ್ಧೆ, ಮುದೋಳದ ನಿರಾಣಿ ಶುಗರ್ಸ್, ಶ್ರೀ ಸಾಯಿಪ್ರಿಯ ಶುಗರ್ಸ್-ಮೈಗೂರ, ಎಂಆರ್‍ಎನ್ ಕೇನ್ ಪವರ್, ಕಲ್ಲಾಪುರ ಎಸ್‍ಕೆ, ಕೆರಕಲಮಟ್ಟಿಯ ಕೇದರನಾಥ ಶುಗರ್ಸ್‍, ಬಾದಾಮಿ ಶುಗರ್ಸ್, ಪಾಂಡವಪುರದ ಎಂಆರ್‍ಎನ್ ಬಯೋ ರಿಪೇನೈರಿಸ್ ಯಾದವಾಡದ ರತ್ನ ಸಿಮೆಂಟ್ಸ್ ನಲ್ಲಿ ಮಹಾವೃಕ್ಷ ಅಭಿಯಾನವನ್ನು ಆಯೋಜಿಸಲಾಯಿತು.

    ರಕ್ತದಾನ ಮಾಡಿದ ಶ್ರೀಗಳು; ಸಚಿವ ಮುರುಗೇಶ್ ನಿರಾಣಿ ಅವರ 57 ನೇ ಹುಟ್ಟು ಹಬ್ಬದ ಪ್ರಯುಕ್ತ ಜಮಖಂಡಿ ಬಳಿಯ ಆಲಗೂರು ಗ್ರಾಮದಲ್ಲಿರುವ ಪಂಚಮಸಾಲಿ ಮೂರನೇ ಪೀಠದ ಆಲಗೂರು ಪೀಠಾಧಿಪತಿ ಮಹದೇವ ಶಿವಾಚಾರ್ಯ, ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಉಪಾಧ್ಯಕ್ಷ ಬೆಂಡವಾಡ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಕುಂಚನೂರು ಮಠದ ಸಿದ್ದಲಿಂಗದೇವರು, ನವಲಗುಂದ ಅಮರಗೋಳ ಮಠದ ಬಸವಾನಂದ ಸ್ವಾಮೀಜಿ,ಮಹೇಶ್ ಮತ್ಯಾ ಸ್ವಾಮೀಜಿ ಸೇರಿದಂತೆ ಹದಿನೈದು ಜನ ಸ್ವಾಮೀಜಿಗಳು ಹಾಗೂ ಮುರುಗೇಶ್ ನಿರಾಣಿ ಅಭಿಮಾನಿಗಳಿಂದಲೂ ರಕ್ತದಾನ ಮಾಡಲಾಯಿತು. ಜಮಖಂಡಿ ತಾಲ್ಲೂಕಿನ ಎಪಿಎಂಸಿ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು.

    ರಾಮನಗೌಡ ಆಸ್ಪತ್ರೆಯ ರಕ್ತನಿಧಿ ಕೇಂದ್ರದ‌ ಮೂಲಕ ರಕ್ತದಾನ ಮಾಡಿ ಹುಟ್ಟು ಹಬ್ಬವನ್ನು ವಿಶಿಷ್ಠವಾಗಿ ಆಚರಿಸಲಾಯಿತು. ಪಂಚಮಸಾಲಿ ಮೂರನೇ ಪೀಠ ಸ್ಥಾಪನೆಯಾಗುವುದರಲ್ಲಿ ಸಚಿವ ನಿರಾಣಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಮಠದ ಶ್ರೀಗಳು ರಕ್ತದಾನ ಮಾಡಿ ಶುಭ ಹಾರೈಸಿದರು.

    ಜೋಡೆತ್ತಿನ ಗಾಡಿ ಸ್ಪರ್ಧೆಯ ‘ಕಿಂಗ್ ಸೂರ್ಯ’ ಅನಾರೋಗ್ಯದಿಂದ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts