More

    ಮುರ್ಡೆಶ್ವರ ರಥೋತ್ಸವ ರದ್ದು

    ಭಟ್ಕಳ: ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಯಂತೆ ಜ. 20ರಂದು ನಡೆಯುವ ಮುರ್ಡೆಶ್ವರ ರಥೋತ್ಸವಕ್ಕೆ ಈ ಬಾರಿ ಅವಕಾಶವಿಲ್ಲ ಎಂದು ಉಪ ವಿಭಾಗಾಧಿಕಾರಿ ಮಮತಾದೇವಿ ಎಸ್. ಹೇಳಿದರು.

    ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

    ಜಿಲ್ಲಾಧಿಕಾರಿ ಜ. 13ರಂದು ನೀಡಿದ ನಿರ್ದೇಶನದಂತೆ ಮುಂದಿನ ಆದೇಶ ಬರುವವರೆಗೂ ತಾಲೂಕಿನಲ್ಲಿ ಯಾವುದೇ ಜಾತ್ರೆ, ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ. ಜ 20ರಂದು ಮುರ್ಡೆಶ್ವರ ರಥೋತ್ಸವ ನಡೆಸದಂತೆ ಸೂಚಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಧಾರ್ವಿುಕ ವಿಧಿ-ವಿಧಾನಗಳನ್ನು ನಡೆಸಲು ಮಾತ್ರ ಅವಕಾಶ ನೀಡಲಾಗಿದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

    ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಶನ್ ಆಗದ ಶೆ. 95ರಷ್ಟು ಜನರು ಬರುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಧಾರ್ವಿುಕ ಅನುಷ್ಠಾನಗಳು ನಡೆಯುವ ಸಂದರ್ಭದಲ್ಲಿ ಅಲ್ಲಿ ತೆರಳುವ ಜನರಿಗೆ 2ನೇ ಡೋಸ್ ಮುಗಿದಿರಬೇಕು. ಅಲ್ಲಿಯೂ ನೂಕು-ನುಗ್ಗಲು ಉಂಟಾಗದಂತೆ ಒಂದು ಬಾರಿಗೆ 50 ಜನರಿಗೆ ಬ್ಯಾಚ್ ಮೂಲಕ ತೆರಳಲು ಅವಕಾಶ ನೀಡಲಾಗಿದೆ. ಒಳಾಂಗಣದಲ್ಲಿ ನಡೆಯುವ ಪೂಜೆ, ಕೈಂಕರ್ಯಗಳಿಗೆ ಅಡ್ಡಿಯಿಲ್ಲ. ಆದರೆ, ರಥ ಎಳೆಯುವುದನ್ನು ಸಂಪೂರ್ಣ ನೀಷೇಧಿಸಲಾಗಿದೆ ಎಂದರು.

    ‘ಜಾತ್ರೆ ನಡೆಸಲು ಸಿದ್ಧತೆ ನಡೆಸುತ್ತಿರುವ ಮಾವಳ್ಳಿ ಪಂಚಾಯಿತಿ ಸದಸ್ಯರು ಈ ಹಿಂದೆ ಉಪ ವಿಭಾಗಾಧಿಕಾರಿಗಳು ಜಾತ್ರೆಯನ್ನು ಸೀಮಿತ ಜನರೊಂದಿಗೆ ನಡೆಸಲು ಒಪ್ಪಿಗೆ ನೀಡಿದ್ದರು. ಆದರೆ, ಅಂಗಡಿ, ಮಳಿಗೆಗಳಿಗೆ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಭೆ ಸೇರಿದ ಮಾವಳ್ಳಿ 1, ಮಾವಳ್ಳಿ 2 ಸದಸ್ಯರು ನಾವು ಈ ಬಾರಿ ಅಂಗಡಿಗಳನ್ನು ಇಡುತ್ತೇವೆ. ನಾವು 44 ಸದಸ್ಯರಿದ್ದು ಪ್ರತಿಯೊಬ್ಬರೂ 2 ಅಂಗಡಿಗಳನ್ನು ಇಟ್ಟಕೊಳ್ಳುತ್ತೇವೆ. ಅಲ್ಲದೆ, ಜಾತ್ರೆ ವಿಷಯಕ್ಕೆ ಒಂದು ಪೈಸೆ ಕೂಡ ನಮ್ಮ ಪಂಚಾಯಿತಿಯಿಂದ ಖರ್ಚು ಮಾಡಲು ಬಿಡುವುದಿಲ್ಲ. ರ್ಪಾಂಗ್ ಮಾಡಲು ಪಂಚಾಯಿತಿ ಸ್ಥಳ ನೀಡುವುದಿಲ್ಲ ಎಂದು ಠರಾವು ಮಾಡಿದ್ದಾರೆ’ ಎಂದು ಮಾವಳ್ಳಿ ಪಂಚಾಯಿತಿ ಪಿಡಿಒ ಕುಮಾರ ಮೊಗೇರ ಅಸಹಾಯಕತೆ ವ್ಯಕ್ತಪಡಿಸಿದರು.

    ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲು ತಾಲೂಕಾಡಳಿತ ಸಶಕ್ತವಿದೆ. ಪೊಲೀಸ್ ಇಲಾಖೆಗೂ ಶಾಂತಿ-ಸುವ್ಯವಸ್ಥೆ ಕಾಪಾಡಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಮಮತಾ ದೇವಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts