More

    ಸಿಳ್ಳೆಕ್ಯಾತ ಎಂದು ಸುಳ್ಳೇ ಹೇಳಿದ್ದ ನಗರಸಭೆ ಸದಸ್ಯೆಯ ಬಂಧನ

    ರಾಯಚೂರು: ನಗರಸಭೆ ಸದಸ್ಯೆಯೊಬ್ಬರು ಸುಳ್ಳು ಹೇಳಿ ಜಾತಿಯ ಕುರಿತಂತೆ ನಕಲಿ ಪ್ರಮಾಣಪತ್ರ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಬಂಧಿಸಿದ್ದಾರೆ. ರೇಣುಕಮ್ಮ ಬಂಧನಕ್ಕೆ ಒಳಗಾಗಿರುವ ನಗರಸಭೆ ಸದಸ್ಯೆ.

    ರೇಣುಕಮ್ಮ ಬಂಧನಕ್ಕೊಳಗಾದ ವಾರ್ಡ ನಂ 31 ರ ನಗರಸಭೆ ಸದಸ್ಯೆ ಜಾತಿಯ ಕುರಿತು ನಕಲಿ ಪ್ರಮಾಣಪತ್ರ ಪಡೆದಿದ್ದರು. ರೇಣುಕಮ್ಮ ಕಿಳ್ಳೆಕ್ಯಾತ ಜಾತಿಯವರಿದ್ದು, ಸಿಳ್ಳೆಕ್ಯಾತ ಜಾತಿ ಎಂದು ನಕಲಿ ಪ್ರಮಾಣ ಪಡೆದು‌ ನಗರಸಭೆಗೆ ಆಯ್ಕೆ ಆಗಿದ್ದರು.

    ವಾರ್ಡ್​ ನಂ. 31 ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಕಿಳ್ಳೆಕ್ಯಾತರು 2 ಎ ಗ್ರೂಪ್​ಗೆ ಸೇರಿದರೆ, ಸಿಳ್ಳೆಕ್ಯಾತರು ಪರಿಶಿಷ್ಟ ಜಾತಿಗೆ ಸೇರುತ್ತಾರೆ. ಹೀಗಾಗಿ ಈಕೆ ಸುಳ್ಳು ಹೇಳಿ ಜಾತಿ ಸರ್ಟಿಫಿಕೇಟ್ ಪಡೆದಿದ್ದರು. ಈ ಬಗ್ಗೆ ರವೀಂದ್ರ ಪಟ್ಟಿ ಸೇರಿ ಇತರ ಮೂವರು ದೂರು ನೀಡಿದ್ದರು. ಅಧ್ಯಕ್ಷರ ಆಯ್ಕೆಗೆ ಮತದಾನ ಮುಗಿದ ಬೆನ್ನಿಗೇ ರೇಣುಕಮ್ಮ ಅವರನ್ನು ಕಲಬುರಗಿಯ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದವರು ಬಂಧಿಸಿದ್ದಾರೆ.

    ಪೊಲೀಸರ ಸಮ್ಮುಖದಲ್ಲೇ ಪ್ರೇಮಿಗಳನ್ನು ಬೇರೆ ಮಾಡಿದ ಸಂಬಂಧಿಕರು: ಮದ್ವೆಯಾಗಿದ್ರೂ ಬಿಡಲಿಲ್ಲ…

    ಆನ್​​ಲೈನ್​ನಲ್ಲಿ ವೈನ್ ಆರ್ಡರ್ ಮಾಡಿದ ಯುವತಿ; ಡೆಲಿವರಿ ಕೊಡಲು ಬರುತ್ತಿದ್ದೇನೆ ಎಂದವ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts