More

    ಮತ ಹಾಕಲು ಬಂದ ರಾಹುಲ್​ ದ್ರಾವಿಡ್​ ನೋಡಿ ‘ಜಂಟಲ್‌ಮ್ಯಾನ್’ ಎಂದ್ರು ಸಾರ್ವಜನಿಕರು! ಮತಗಟ್ಟೆಯಲ್ಲಿ ಕೋಚ್ ಮಿಂಚಿಂಗ್

    ಬೆಂಗಳೂರು: ಮೂಲತಃ ಕನ್ನಡಿಗರಾದ ಟೀಂ ಇಂಡಿಯಾದ ಮಾಜಿ ಆಟಗಾರ, ಪ್ರಸ್ತುತ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಇಂದು ತಮ್ಮ ತವರಿನಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳ ಪರ ಮತ ಚಲಾಯಿಸಲು ಮತಗಟ್ಟೆಗೆ ಬಹಳ ಸಿಂಪಲ್ ಆಗಿ ಬಂದಿದ್ದು, ಸ್ಥಳೀಯರ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ಸದ್ಯ ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಇದನ್ನೂ ಓದಿ: ಲೋಕ ಸಮರ 2024: ಮತದಾನ ಕುರಿತು ತೇಜಸ್ವಿ ಸೂರ್ಯ ಅಸಮಾಧಾನ! ಬೆಂಬಲಿಗರಿಗೆ ಕೊಟ್ಟ ಸಂದೇಶವಿದು…

    ಇಂದು ಬೆಂಗಳೂರಿನಲ್ಲಿ ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸಿದ ರಾಹುಲ್ ದ್ರಾವಿಡ್, ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಸರಳ ಉಡುಗೆಯನ್ನು ತೊಟ್ಟು, ಲೋಕಸಭೆ ಚುನಾವಣೆಯ ಮತ ಚಲಾಯಿಸುವ ಅವಕಾಶವನ್ನು ತಪ್ಪಿಸದೆ, ಸಾಮಾನ್ಯ ಜನರಂತೆ ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಇದಲ್ಲದೆ, ಮತ ಹಾಕಿದ ಬಳಿಕ ಸುತ್ತಮುತ್ತಲಿನ ಜನರಿಗೆ ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದರು.

    ಮತದಾನ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್ ದ್ರಾವಿಡ್, “ಎಲ್ಲರೂ ಹೊರ ಬಂದು ಮತದಾನ ಮಾಡಬೇಕು. ಇದು ಪ್ರಜಾಪ್ರಭುತ್ವದಲ್ಲಿ ನಮಗೆ ಸಿಕ್ಕಿರುವ ದೊಡ್ಡ ಅವಕಾಶ” ಎಂದರು. ಟೀಂ ಇಂಡಿಯಾದ ಮುಖ್ಯ ಕೋಚ್ ಆದ ರಾಹುಲ್​ ಅವರು, ಕ್ರಿಕೆಟ್ ಲೋಕದ ದಂತಕಥೆ. ಆದರೂ ಸಹ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ವೋಟ್ ಹಾಕಿರುವುದು ಅವರ ಸರಳತೆಗೆ ಹಿಡಿದ ಕನ್ನಡಿ. ‘ಹೀ ಇಸ್​ ಎ ಜಂಟಲ್​ಮ್ಯಾನ್’ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

    ನಿಮಗೆ ಏನೂ ಗೊತ್ತಿಲ್ಲ… RCB ಪ್ಲೇಆಫ್ ಕನಸು ಇನ್ನೂ ಜೀವಂತ: ವಿಲ್​ ಜ್ಯಾಕ್ಸ್​ ಬಿಚ್ಚಿಟ್ರು ಶಾಕಿಂಗ್ ಸಂಗತಿ

    ಲೋಕ ಸಮರ 2024: ಮತದಾನ ಕುರಿತು ತೇಜಸ್ವಿ ಸೂರ್ಯ ಅಸಮಾಧಾನ! ಬೆಂಬಲಿಗರಿಗೆ ಕೊಟ್ಟ ಸಂದೇಶವಿದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts