More

    ಮುಂಗಾರು ಪೂರ್ವ ಸಿದ್ಧತೆಗೆ ಪುರಸಭೆ ಆದ್ಯತೆ

    ಹಾನಗಲ್ಲ: ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ರೋಗಗಳ ಹರಡುವಿಕೆಯ ಕಾಲ ಆರಂಭಗೊಳ್ಳುತ್ತದೆ. ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪುರಸಭೆ ನೀರು-ನೈರ್ಮಲ್ಯ ನಿರ್ವಹಣೆಗೆ ಮುಂದಾಗಿದ್ದು, ಪೂರ್ವ ಸಿದ್ಧತೆಯಲ್ಲಿ ತೊಡಗಿಕೊಂಡಿದೆ.

    ಹಾನಗಲ್ಲ ಪಟ್ಟಣ ಸುಮಾರು 35 ಸಾವಿರ ಜನಸಂಖ್ಯೆ ಹೊಂದಿದ್ದು, ಕೋವಿಡ್ ಸಾಂಕ್ರಾಮಿಕ ರೋಗದ ನಿರ್ವಹಣೆ ಮಧ್ಯೆಯೂ ಮುಂಗಾರು ಪೂರ್ವ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದುದು ಅಗತ್ಯವಾಗಿದೆ.

    ಬೇಸಿಗೆ ಸಮಯದಲ್ಲಿ ಆಗಿದ್ದ ಮಳೆಗಳ ಸಂದರ್ಭದಲ್ಲಿ ಕೆಲವು ಬಡಾವಣೆಗಳ ಗಟಾರಗಳು ಕಟ್ಟಿಕೊಂಡು ರಸ್ತೆಯಲ್ಲಿಯೇ ಮಲೀನ ನೀರು ಹರಿಯಲಾರಂಭಿಸಿತ್ತು. ಪುರಸಭೆ ಅಧಿಕಾರಿಗಳು ಅಂಥ ಪ್ರದೇಶಗಳಿಗೆ ಆದ್ಯತೆ ನೀಡಿ ಸರಿಪಡಿಸಿದ್ದು, ಇನ್ನೂ ಕೆಲ ಪ್ರದೇಶಗಳಲ್ಲಿನ ಗಟಾರ ಸಮಸ್ಯೆಗಳನ್ನು ಸರಿಪಡಿಸಬೇಕಿದೆ.

    ಸಾಂಕ್ರಾಮಿಕ ರೋಗಗಳು ಹರಡದಂತೆ ಕೋವಿಡ್ 2ನೇ ಅಲೆ ಆರಂಭವಾದಾಗಿನಿಂದಲೇ ಫಾಗಿಂಗ್ ಹಾಗೂ ಮೆಲಾಥಿಯಾನ್ ಪೌಡರ್ ಸಿಂಪಡಣೆ ಕಾರ್ಯ ನಡೆಯುತ್ತಿದೆ.

    ಮಳೆಗಾಲಕ್ಕೆ ವಿಶೇಷ ತಂಡ: ಮಳೆಗಾಲದಲ್ಲಿ ಮಳೆ-ಗಾಳಿಗೆ ಗಿಡ-ಮರಗಳು ನೆಲಕ್ಕುರುಳುವುದು ಸಾಮಾನ್ಯ ಸಂಗತಿ. ಇಂಥ ಪರಿಸ್ಥಿತಿಯನ್ನೆದುರಿಸಲು 8 ಜನ ಸಿಬ್ಬಂದಿ ವಿಶೇಷ ತಂಡವನ್ನು ಪೂರ್ವಭಾವಿಯಾಗಿ ಪುರಸಭೆ ರಚಿಸಿದೆ. ತೆರವು ಕಾರ್ಯಾಚರಣೆಗಾಗಿ ಅಗತ್ಯವಿರುವ ಸಾಮಗ್ರಿಗಳನ್ನೂ ಮತ್ತು ಪ್ರತ್ಯೇಕ ವಾಹನವನ್ನೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇಂಥ ಘಟನೆಗಳು ಜರುಗಿದಾಗ ಅಗತ್ಯ ಸೇವೆಗಾಗಿ ಸಾರ್ವಜನಿಕರು ಪುರಸಭೆಯ ಸಹಾಯವಾಣಿಗೆ (08379 262274) ಸಂರ್ಪಸಲು ಮನವಿ ಮಾಡಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಕೆಲವು ಹೊಂಡಗಳಲ್ಲಿ ನೀರು ತುಂಬಿ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದ್ದು, ನೀರು ತೆರವುಗೊಳಿಸಲು ಯಂತ್ರದ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ಎಚ್.ಎನ್.ಭಜಕ್ಕನವರ ತಿಳಿಸಿದ್ದಾರೆ.

    ಕೋವಿಡ್ ಕಾರ್ಯಾಚರಣೆ: ಕೋವಿಡ್ ಸೋಂಕು ಹರಡುವಿಕೆ ಇನ್ನೂ ಮುಂದುವರಿದಿದ್ದು, ಕೋವಿಡ್ ನಿಯಮದಂತೆ ಸೋಂಕಿತರ ಮನೆಗಳನ್ನು ಸ್ಯಾನಿಟೈಸರ್ ಮಾಡುವುದು, ಉಚಿತವಾಗಿ ಮಾಸ್ಕ ವಿತರಿಸುವುದು, ಅವರ ಬೀದಿಯನ್ನು 10 ದಿನ ಸೀಲ್​ಡೌನ್ ಮಾಡಲಾಗುತ್ತಿದೆ. ಪಟ್ಟಣದಲ್ಲಿ ಹಂದಿ, ನಾಯಿ, ಜಾನುವಾರುಗಳು ಮೃತಪಟ್ಟ ಸಂದರ್ಭದಲ್ಲಿ ಅವುಗಳನ್ನು ತ್ಯಾಜ್ಯ ವಿಲೇವಾರಿ ಘಟಕದ ಪ್ರತ್ಯೇಕ ಸ್ಥಳದಲ್ಲಿ ಹೂಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪರಿಸರ ಇಂಜಿನಿಯರ ಅಮೂಲ್ಯಾ ಹೆಬ್ಬಾರೆ ಮಾಹಿತಿ ನೀಡಿದ್ದಾರೆ.

    ಆನೆಕೆರೆ ಶುದ್ಧೀಕರಣಕ್ಕೆ ಚಾಲನೆ

    ಪಟ್ಟಣದ 35 ಸಾವಿರ ಜನತೆಗೆ ಕುಡಿಯುವ ನೀರನ್ನೊದಗಿಸುವ 115 ಎಕರೆ ವಿಸ್ತಾರದ ಆನೆಕೆರೆಯಲ್ಲಿನ ನೀರು ಕಳೆದ ವರ್ಷದಿಂದ ಫಂಗಸ್ ಬೆಳೆದು ಶುದ್ಧೀಕರಣಕ್ಕೆ ಸಮಸ್ಯೆ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಆನೆಕೆರೆಯ ನೀರನ್ನೆಲ್ಲ ತೆರವುಗೊಳಿಸಲಾಗುತ್ತಿದೆ. ಧರ್ವ ಜಲಾಶಯದ ನೀರು ಆನೆಕೆರೆಯಲ್ಲಿನ ನೀರಿಗೆ ಸೇರಿಕೊಳ್ಳದಂತೆ ಪ್ರತ್ಯೇಕವಾಗಿ ರಚಿಸಿರುವ ಕಾಲುವೆ ಮೂಲಕ ಶುದ್ಧೀಕರಣ ಘಟಕಕ್ಕೆ ರವಾನಿಸಲಾಗುತ್ತಿದೆ. ಫಂಗಸ್ ನಿವಾರಣೆಗಾಗಿ ಆನೆಕೆರೆಯ ಒಳಪ್ರದೇಶದಲ್ಲಿ ಸುಣ್ಣದ ಪುಡಿ ಹರಡಲಾಗುತ್ತಿದೆ. ಮಳೆಗಾಲ ಆರಂಭವಾಗಿದ್ದರೂ ಆನೆಕೆರೆ ತುಂಬಲು ಆಗಸ್ಟ್ ಮಧ್ಯದವರೆಗೆ ಕಾಯಬೇಕಾಗುತ್ತದೆ. ಬೃಹತ್ ನೀರಾವರಿ ಇಲಾಖೆಯ ಸಹಯೋಗದಲ್ಲಿ ಧರ್ವ ಜಲಾಶಯದ ನೀರು ಧರ್ವ ನದಿಗೆ ತೆರಳದಂತೆ ಮರಳಿನ ಚೀಲಗಳನ್ನು ಮತ್ತು ಭತ್ತದ ಹುಲ್ಲಿನ ತಡೆಗೋಡೆ ನಿರ್ವಿುಸಲಾಗುತ್ತಿದೆ. ಧರ್ವ ಕಾಲುವೆ ಮೂಲಕ ಆನೆಕೆರೆಗೆ ಹರಿಸಿಕೊಳ್ಳಲು ಕಾರ್ವಿುಕರ ಮೂಲಕ ಕಾಮಗಾರಿ ಆರಂಭಿಸಲಾಗಿದೆ. ಸದ್ಯ ಇನ್ನೆರಡು ತಿಂಗಳು ಜಲಾಶಯದಿಂದಲೇ ನೀರನ್ನು ಬಳಸಿಕೊಳ್ಳುವ ಅನಿವಾರ್ಯತೆಯಿದೆ. ಆದರೆ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಕಾಳಜಿ ವಹಿಸಲಾಗುತ್ತದೆ ಎಂದು ಪುರಸಭೆ ಇಂಜಿನಿಯರ ನಾಗರಾಜ ಮಿರ್ಜಿ ತಿಳಿಸಿದ್ದಾರೆ.

    ಪಟ್ಟಣದಲ್ಲಿ ಮಳೆಗಾಲದಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯ ನಿರ್ವಹಣೆಗೆ ಯಾವುದೇ ಸಮಸ್ಯೆ ಎದುರಾಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತ್ಯೇಕ ಕಾರ್ವಿುಕರ ತಂಡಗಳು ಕಾರ್ಯ ನಿರ್ವಹಿಸುವ ವ್ಯವಸ್ಥೆ ಮಾಡಲಾಗಿದೆ. ಪುರಪಿತೃಗಳು ತುರ್ತು ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ, ನಾಗರಿಕರಿಗೆ ಸಮಸ್ಯೆಯಾಗದಂತೆ ಸೂಚನೆ ನೀಡುತ್ತಿದ್ದಾರೆ.

    | ಎಚ್.ಎನ್.ಭಜಕ್ಕನವರ, ಮುಖ್ಯಾಧಿಕಾರಿ, ಪುರಸಭೆ ಹಾನಗಲ್ಲ

    ಕಳೆದ ವರ್ಷದ ಮಳೆಗಾಲದಲ್ಲಿ ಉಂಟಾಗಿದ್ದ ಸಮಸ್ಯೆಗಳನ್ನು ಗಮನಿಸಿ ಅಂಥ ರಸ್ತೆ, ಗಟಾರಗಳನ್ನು ದುರಸ್ತಿಗೊಳಿಸಲಾಗಿದೆ. ಕಸ ನಿರ್ವಹಣೆ ಮತ್ತು ಗಟಾರಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಸಮಸ್ಯೆಗಳಿದ್ದಲ್ಲಿ ತಕ್ಷಣ ಪುರಸಭೆಯ ಸಹಾಯವಾಣಿ ಸಂರ್ಪಸಲು ಸೂಚಿಸಲಾಗಿದೆ.

    | ಖುರ್ಷಿದ್​ಅಹ್ಮದ್ ಹುಲ್ಲತ್ತಿ, ಪುರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts