More

    ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹ

    ಮುಂಡರಗಿ: ನೀರಾವರಿ ಪಂಪ್‌ಸೆಟ್‌ಗಳಿಗೆ ನಿರಂತರ 7 ತಾಸು ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಸ್ಥಳೀಯ ವಿದ್ಯುತ್ ಪ್ರಸರಣ ಘಟಕ ಎದುರು ಅರಭಾವಿ-ಚೆಳ್ಳಕೇರಿ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡಿ ಮಂಗಳವಾರ ಪ್ರತಿಭಟನೆ ನಡೆಸಿದರು.
    ರೈತ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, ಪಟ್ಟಣ ಸೇರಿ ತಾಲೂಕಿನ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಬಂದ್ ಮಾಡಿದ್ದರಿಂದ ಹೆಸ್ಕಾಂ ಕಚೇರಿ ಎದುರು ಶನಿವಾರ ಪ್ರತಿಭಟನೆ ಮಾಡಿದ್ದೇವು. ಆಗ ಹೆಸ್ಕಾಂ ಅಧಿಕಾರಿಗಳು ಬಂದು ನಿತ್ಯ ಮೂರ್ನಾಲ್ಕು ತಾಸು ತ್ರಿಫೇಸ್ ವಿದ್ಯುತ್ ನೀಡಲಾಗುತ್ತದೆ. ಅ. 9ರಿಂದ ನಿರಂತರವಾಗಿ 7 ತಾಸು ತ್ರಿಫೇಸ್ ವಿದ್ಯುತ್ ಪೂರೈಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಈಗ ಮಾತು ತಪ್ಪಿದ್ದಾರೆ ಎಂದು ದೂರಿದರು.
    ಅ. 10ರಂದು ಬೆಳಗ್ಗೆ 1 ತಾಸು ತ್ರಿಫೇಸ್ ನೀಡಿ ಮತ್ತೆ ಬಂದ್ ಮಾಡಿದ್ದಾರೆ. ಸಮರ್ಪಕ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಯಾವುದೇ ಕಾರಣ ಹೇಳದೇ ನೀರಾವರಿ ಪಂಪ್‌ಸೆಟ್‌ಗಳಿಗೆ 7 ತಾಸು ನಿರಂತರ ತ್ರಿಫೇಸ್ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.
    ಹೆಸ್ಕಾಂ ಎಂಡಿ ಅವರು ಸ್ಥಳಕ್ಕೆ ಬಂದು ನಮಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುವ ಬಗ್ಗೆ ಭರವಸೆ ನೀಡಬೇಕು ಎಂದು ರೈತರು ಪಟ್ಟು ಹಿಡಿದರು.
    ಪ್ರತಿಭಟನೆ ಸ್ಥಳಕ್ಕೆ ಹೆಸ್ಕಾಂ ಎಸ್‌ಇ ಶರಣಮ್ಮ ಜಂಗೀನ್, ಇಇ ರಾಜೇಶ ಕಲ್ಯಾಣಶೆಟ್ಟರ್, ಪ್ರಭಾರ ಎಇಇ ಚನ್ನಪ್ಪ ಲಮಾಣಿ ಇತರರು ಭೇಟಿ ನೀಡಿ ಚರ್ಚಿಸಿದರು.
    ಬಳಿಕ ಹೆಸ್ಕಾಂ ಎಂಡಿ ಮಹ್ಮದ್‌ರೋಷನ್ ಅವರು ರೈತರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಉಡುಪಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ (ಯುಪಿಸಿಎಲ್) ವಿದ್ಯುತ್ ಉತ್ಪಾದನೆ ಕಡಿತವಾಗಿತ್ತು. ಇದರಿಂದ ವಿದ್ಯುತ್ ಪೂರೈಕೆಗೆ ತೊಂದರೆಯಾಗಿದೆ. ಅಲ್ಲಿ ವಿದ್ಯುತ್ ಉತ್ಪಾದನೆ ಮತ್ತೆ ಉತ್ಪಾದನೆ ಪ್ರಾರಂಭಗೊಂಡಿದೆ. ಸದ್ಯ 5 ತಾಸು ತ್ರಿಫೇಸ್ ನೀಡುತ್ತೇವೆ. ಅ. 12ರಿಂದ ನಿರಂತರ 7 ತಾಸು ತ್ರಿಫೇಸ್ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದರು. ಎಂಡಿ ಅವರ ಭರವಸೆ ನಂತರ ರೈತರು ಪ್ರತಿಭಟನೆ ಕೈಬಿಟ್ಟರು.
    ರೈತ ಸಂಘದ ತಾಲೂಕಾಧ್ಯಕ್ಷ ಶರಣಪ್ಪ ಕಂಬಳಿ, ಡಿ.ಡಿ. ಮೋರನಾಳ, ಚಂದ್ರಕಾಂತ ಉಳ್ಳಾಗಡ್ಡಿ, ಅಶ್ವಿನಿ ಗೌಡರ, ಪ್ರಕಾಶ ಸಜ್ಜನರ, ರವಿ ಕೊಳಲು, ಶರಣಪ್ಪ ಚೆನ್ನಳ್ಳಿ, ದೇವಪ್ಪ ಡೊಣ್ಣಿ, ದೇವಪ್ಪ ಚಿಕ್ಕಣ್ಣವರ, ಪ್ರವೀಣ ಹಂಚಿನಾಳ, ಅಂದಪ್ಪ ಕುರಿ, ಸಿದ್ದಪ್ಪ ಪೂಜಾರ, ಫಕೀರಪ್ಪ ಬಳ್ಳಾರಿ, ಕಿಟ್ಟಪ್ಪ ಮೋರನಾಳ, ಕನಕಪ್ಪ ಕುರಿ, ಬಸವರಾಜ ತಳವಾರ, ಮಲ್ಲಿಕಾರ್ಜುನ ಸಜ್ಜನರ, ದೇವಪ್ಪ ಕೋವಿ, ಮಂಜುನಾಥ ಹುಯಿಲಗೋಳ, ಬಸಪ್ಪ ಕುಂಬಾರ, ಈರಣ್ಣ ಕವಲೂರ, ಬಾಬುಜೀ ಮದ್ಯಪಾಟಿ, ಈರಣ್ಣ ಶೀರಿ, ತಿಪ್ಪಣ್ಣ ಮಸಾಲಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts