More

    ‘ಒಂದು ವರ್ಷದ ಅಂತರ’ದಲ್ಲಿ ಅವಳಿ ಮಕ್ಕಳ ಜನನ!; 20 ಲಕ್ಷ ಹೆರಿಗೆಗಳಿಗೊಮ್ಮೆ ಹೀಗಾಗೋ ಸಾಧ್ಯತೆ..

    ನವದೆಹಲಿ: ಸಾಮಾನ್ಯವಾಗಿ ಅವಳಿ ಮಕ್ಕಳು ಜನಿಸಿದರೆ ಇಬ್ಬರ ಜನ್ಮದಿನಾಂಕ ಒಂದೇ ಆಗಿರುತ್ತದೆ. ಆದರೆ ಇಲ್ಲೊಂದು ಅಚ್ಚರಿ ಅನಿಸುವಂಥ ವಿದ್ಯಮಾನ ಜರುಗಿದೆ. ಈಕೆ ಜನ್ಮಕೊಟ್ಟಿದ್ದು ಅವಳಿ ಮಕ್ಕಳಿಗಾದರೂ ಈ ಶಿಶುಗಳ ಜನ್ಮದಿನಾಂಕದಲ್ಲಿ ಒಂದು ವರ್ಷ ವ್ಯತ್ಯಾಸ ಉಂಟಾಗಿದೆ.

    ಹೌದು.. ಕ್ಯಾಲಿಫೋರ್ನಿಯಾದ ನೇಟಿವಿಡಾಡ್ ಮೆಡಿಕಲ್ ಸೆಂಟರ್​ನ ಆಸ್ಪತ್ರೆಯಲ್ಲಿ ಇಂಥದ್ದೊಂದು ಜನನವಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಈ ಥರದ ಜನನ ಸಾಮಾನ್ಯವಾಗಿ 20 ಲಕ್ಷ ಹೆರಿಗೆಗಳಿಗೊಮ್ಮೆ ಆಗುವ ಸಾಧ್ಯತೆ ಇರುತ್ತದೆ. ಅಂಥ ಒಂದು ವಿಶೇಷವಾದ ಹೆರಿಗೆ ಈ ಸಲ ನಮ್ಮ ಆಸ್ಪತ್ರೆಯಲ್ಲಿ ಆಗಿದೆ ಎಂದು ಅಲ್ಲಿನ ವೈದ್ಯರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಹುಡುಗಿ ಮದ್ವೆ ವಯಸ್ಸು ಕನಿಷ್ಠ 21; ಮಸೂದೆ ಪರಿಶೀಲಿಸಬೇಕಾದ 31 ಸದಸ್ಯರ ಸಂಸದೀಯ ಸಮಿತಿಯಲ್ಲಿ ಏಕೈಕ ಸ್ತ್ರೀ!

    ಫಾತಿಮಾ ಮ್ಯಾಡ್ರಿಗಲ್​ ಎಂಬಾಕೆಯೇ ಇಂಥದ್ದೊಂದು ಅಪರೂಪದ ಮಕ್ಕಳಿಗೆ ಜನ್ಮ ನೀಡಿದ ತಾಯಿ. ಈಕೆಯ ಅವಳಿ ಮಕ್ಕಳ ಪೈಕಿ ಮೊದಲಿಗೆ ಗಂಡು ಮಗುವಿನ ಜನನವಾಗಿದ್ದು, ನಂತರ ಹೆಣ್ಣು ಮಗು ಹುಟ್ಟಿದೆ. ಗಂಡು ಮಗು ಅಲ್ಫ್ರೆಡೊ 2020ರ ಡಿಸೆಂಬರ್ 31ರ ರಾತ್ರಿ 11.45ಕ್ಕೆ ಜನಿಸಿದರೆ, ಆತನ ಅವಳಿ 15 ನಿಮಿಷಗಳ ಬಳಿಕ ಜನಿಸಿದ್ದಾಳೆ. ಹೀಗಾಗಿ ಇವರಿಬ್ಬರು ಹದಿನೈದೇ ನಿಮಿಷಗಳ ಅಂತರದಲ್ಲಿ ಹುಟ್ಟಿದ ಅವಳಿಗಳಾದರೂ ಇಬ್ಬರ ಜನ್ಮದಿನಾಂಕದಲ್ಲಿ ಒಂದು ವರ್ಷ ವ್ಯತ್ಯಾಸ ಉಂಟಾದಂತಾಗಿದೆ. ಫಾತಿಮಾ ಮ್ಯಾಡ್ರಿಗಲ್​-ರಾಬರ್ಟ್​ ಟ್ರುಜಿಲೊ ದಂಪತಿ ಈ ಅವಳಿ ಮಕ್ಕಳ ಹೊರತಾಗಿ ಇನ್ನಿಬ್ಬರು ಹೆಣ್ಣು ಹಾಗೂ ಒಂದು ಗಂಡು ಮಗುವನ್ನು ಹೊಂದಿದ್ದಾರೆ.

    ಇದನ್ನೂ ಓದಿ: ಸಾವಿರಾರು ಜನರ ಖಾತೆಗೆ ಬಂದು ಬಿತ್ತು ಭಾರಿ ಹಣ!; 75 ಸಾವಿರ ಖಾತೆಗಳಿಗೆ ಒಟ್ಟು 1,310 ಕೋಟಿ ರೂ. ಜಮೆ…

    2019 ಮತ್ತು 2020ರಲ್ಲೂ ಇಂಥದ್ದೇ ಅವಳಿ ಹೆರಿಗೆ ಸಂಭವಿಸಿದೆ. 2019ರ ಡಿ. 31ರ 11.37ರ ಸುಮಾರಿಗೆ ಮೊದಲ ಹಾಗೂ 2020ರ ಜ.1ರ 12.07ರ ಸುಮಾರಿಗೆ ಎರಡನೇ ಮಗು ಜನಿಸಿತ್ತು. ಈ ಹೆರಿಗೆ ಇಂಡಿಯಾನಾ ಕಾರ್ಮೆಲ್​ನ ಸೇಂಟ್​ ವಿನ್ಸೆಂಟ್ ಹಾಸ್ಪಿಟಲ್​ನಲ್ಲಿ ಈ ಹೆರಿಗೆ ಸಂಭವಿಸಿತ್ತು ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ.

    ತಗ್ಗದ ಕುಗ್ಗದ ಅಪ್ಪು ಅಭಿಮಾನ; ಪುನೀತ್ ಪುಣ್ಯಭೂಮಿ ಬಳಿ 2 ತಿಂಗಳ ಬಳಿಕವೂ ಜಮಾಯಿಸುತ್ತಿರುವ ಜನರು!

    ಹೆಜ್ಜೇನು ನೊಣಗಳ ಕಡಿತಕ್ಕೆ ನಿವೃತ್ತ ಅಧಿಕಾರಿ ಬಲಿ; ವಾಹನ ಪೂಜೆ ಮಾಡುತ್ತಿದ್ದಾಗ ದಾಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts