More

    ವಾಟ್ಸ್​ಆ್ಯಪ್​ನಲ್ಲಿ ಬಂದ ಲಿಂಕ್​ ಕ್ಲಿಕ್​ ಮಾಡಿ 9 ಲಕ್ಷ ರೂ. ಕಳ್ಕೊಂಡ ಮಹಿಳೆ! ಇದು ಪ್ರತಿಯೊಬ್ಬರು ಓದಲೇಬೇಕಾದ ಸುದ್ದಿ

    ಮುಂಬೈ: ದಿನದಿಂದ ದಿನಕ್ಕೆ ಸೈಬರ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಎಷ್ಟೇ ಚುರುಕಾಗಿ ಕೆಲಸ ಮಾಡಿದರೂ, ಎಲ್ಲೋ ಕೂತು ನಡೆಯುವ ಸೈಬರ್​ ವಂಚನೆಯನ್ನು ಭೇಧಿಸುವುದು ಮಾತ್ರ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

    ಫೋನ್ ಕರೆ ಮಾಡಿ ಒಟಿಪಿ ಹೇಳುವಂತೆ ಒತ್ತಾಯಿಸುವುದು, ಆನ್ಲೈನ್ ವಂಚನೆ, ಫೇಸ್​ಬುಕ್ ಹ್ಯಾಕ್ ಮಾಡಿ ಹಣ ಕೇಳುವುದು, ಬ್ಯಾಂಕ್​ನಿಂದ ಕರೆ ಮಾಡಿದ್ದೇವೆ ಎಂದು ಹೇಳಿ ಎಟಿಎಮ್​​ ಪಾಸ್​ವರ್ಡ್​ ಕೇಳುವುದು. ಕೆಲ ಲಿಂಕ್​ಗಳನ್ನು ಕಳುಹಿಸಿ ಕ್ಲಿಕ್​ ಮಾಡಿ ಎಂದು ಹೇಳುವುದು ಸೇರಿದಂತೆ ಖಾಸಗಿ ಮಾಹಿತಿಗಳನ್ನು ಪಡೆದುಕೊಂಡು ವಂಚನೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಮುಂಬೈ ಮಹಿಳೆಯೊಬ್ಬಳು ವಾಟ್ಸ್​ಆ್ಯಪ್​ನಲ್ಲಿ ಬಂದ ಲಿಂಕ್​ ಕ್ಲಿಕ್​ ಮಾಡುವ ಮೂಲಕ 9 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.

    ಹಣ ಕಳೆದುಕೊಂಡ ಮಹಿಳೆ ಮುಂಬೈ ಬ್ಯಾಂಕ್​ನ ನಿವೃತ್ತ ಉದ್ಯೋಗಿಯಾಗಿದ್ದು, ಮುಂಬೈ ಪೂರ್ವದಲ್ಲಿರುವ ಬಾರಿವಲಿಯಲ್ಲಿ ಈ ಘಟನೆ ನಡೆದಿದೆ. ಆನ್​ಲೈನ್​ ವಂಚನೆ ಬೆನ್ನಲ್ಲೇ ಸಂತ್ರಸ್ತ ಮಹಿಳೆ, ದಹಿಸರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419 ಮತ್ತು 420 ಹಾಗೂ ಐಟಿ ಕಾಯ್ದೆಯ ಸೆಕ್ಷನ್ 66(ಸಿ) ಮತ್ತು (ಡಿ)ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    ಸಂತ್ರಸ್ತ ಮಹಿಳೆ ಪುಷ್ಪಲತಾ ಪ್ರದೀಪ್​, ತಾನು ಉಳಿಸಿಕೊಂಡಿದ್ದ ಭವಿಷ್ಯ ನಿಧಿಯನ್ನು ನಿಶ್ಚಿತ ಠೇವಣಿ ಇಟ್ಟಿದ್ದರು. ಈ ಹಿಂದೆ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಪುಷ್ಪಲತಾ, ತಮ್ಮ ನಿಶ್ಚಿತ ಠೇವಣಿಯಲ್ಲಿ ಕೆಲವು ಸಮಸ್ಯೆಗಳನ್ನು ಅನುಭವಿಸಿದ ನಂತರ ಬ್ಯಾಂಕ್‌ಗೆ ಆನ್‌ಲೈನ್‌ನಲ್ಲಿ ದೂರು ನೀಡಲು ನಿರ್ಧರಿಸಿದರು. ಯೂನಿಯನ್ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸುವಾಗ ಸಂತ್ರಸ್ತೆ ತನ್ನ ಫೋನ್ ಸಂಖ್ಯೆಯನ್ನು ನಮೂದಿಸಿದ್ದರು.

    ಇದಾದ ಬಳಿಕ ಪುಷ್ಪಲತಾ ಅವರ ಮೊಬೈಲ್​ ಫೋನ್​ಗೆ ಕರೆಬಂದಿತು. ಬ್ಯಾಂಕ್​ನ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ಆನ್​ಲೈನ್​ ವಂಚಕರು, ನಿಮ್ಮ ವಾಟ್ಸ್​ಆ್ಯಪ್ ಸಂಖ್ಯೆಗೆ ಒಂದು ಲಿಂಕ್ ಕಳುಹಿಸಿದ್ದೇವೆ. ನೀವು ದೂರು ನೀಡುವ ಮುನ್ನ ಆ ಲಿಂಕ್​ ಮೇಲೆ ಕ್ಲಿಕ್​ ಮಾಡಿ, ಅಪ್ಲಿಕೇಶನ್​ ಡೌನ್​ಲೋಡ್​ ಮಾಡಿಕೊಳ್ಳಿ ಎಂದಿದ್ದಾರೆ. ಇದಾದ ಬಳಿಕ ಸಂತ್ರಸ್ತೆ ವಾಟ್ಸ್​ಆ್ಯಪ್​ನಲ್ಲಿ ಮತ್ತೊಂದು ಲಿಂಕ್ ಸ್ವೀಕರಿಸಿದ್ದಾರೆ. ಅಲ್ಲಿ ಅವರು ತನ್ನ ಇಂಟರ್ನೆಟ್ ಬ್ಯಾಂಕಿಂಗ್ ಮಾಹಿತಿಯನ್ನು ಭರ್ತಿ ಮಾಡಿದ್ದಾರೆ.

    ಬ್ಯಾಂಕ್ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಸೇರಿದಂತೆ ಖಾಸಗಿ ಮಾಹಿತಿಯನ್ನು ನೀಡಿದ್ದಾರೆ. ಬಳಿಕ ಆ್ಯಪ್ ಡೌನ್‌ಲೋಡ್ ಮಾಡುವುದು ಹೇಗೆ ಎಂದು ಪುಷ್ಪಲತಾ ಅವರು ಬ್ಯಾಂಕ್​ ಅಧಿಕಾರಿಗಳ ಸೋಗಿನಲ್ಲಿದ್ದ ವಂಚಕರನ್ನು ವಿಚಾರಿಸಿದ್ದಾರೆ. ಆದರೆ, ವಂಚಕರು ತಮ್ಮ ಮಾತಿನ ಮೂಲಕ ಪುಷ್ಪಲತಾ ಅವರ ಗಮನವನ್ನು ಬೇರೆಡೆಗೆ ತಿರುಗಿಸಿ, ಆಕೆಯ ಬ್ಯಾಂಕ್​ ಖಾತೆಗೆ ಪ್ರವೇಶಿಸಿ 9 ಲಕ್ಷ ರೂಪಾಯಿ ಹಣವನ್ನು ಎಗರಿಸಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಪುಷ್ಪಲತಾ, ನಾನು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದೆ. ಅದರಲ್ಲಿ ಒಂದು ಅರ್ಜಿ ಇತ್ತು. ಅದನ್ನು ಯೂಸರ್ ಐಡಿ ಮತ್ತು ಇಂಟರ್ನೆಟ್ ಬ್ಯಾಂಕಿಂಗ್‌ಗಾಗಿ ಪಾಸ್‌ವರ್ಡ್‌ನೊಂದಿಗೆ ಭರ್ತಿ ಮಾಡಿದೆ. ನಾನು ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಿದ ತಕ್ಷಣ ನನಗೆ ಈಗಾಗಲೇ ಹಣ ಡೆಬಿಟ್ ಆಗಿದೆ ಎಂಬ ಸಂದೇಶ ಬಂದಿತು. ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ತಿಳಿದ ತಕ್ಷಣ ಫೋನ್ ಸ್ವಿಚ್​ ಆಫ್​ ಮಾಡಿ, ವಂಚನೆಯ ಬಗ್ಗೆ ವರದಿ ಮಾಡಲು ಬೇರೆ ಫೋನ್‌ನಿಂದ ಯೂನಿಯನ್ ಬ್ಯಾಂಕ್ ಕಾಲ್ ಸೆಂಟರ್‌ಗೆ ಕರೆ ಮಾಡಿ ದೂರು ನೀಡಿದ್ದಾರೆ. ಅದರೊದಿಗೆ ಪೊಲೀಸ್​ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್​)

    ಗೂಗಲ್​ ಪೇನಲ್ಲಿ 2 ರೂ. ಪಾವತಿಸಿ 45 ಸಾವಿರ ಕಳ್ಕೊಂಡ ಉದ್ಯೋಗಿ! ಸೈಬರ್ ಕಳ್ಳರ ಹೊಸ ಟೆಕ್ನಿಕ್​ ಕಂಡು ಪೊಲೀಸರೇ ಶಾಕ್​​

    ಸಿನಿಮಾ ಹಾಡಿಗೆ ಸಖತ್​ ಹಾಟ್​ ಆಗಿ ಸೊಂಟ ಬಳುಕಿಸಿದ ಲೇಡಿ ಕಾನ್ಸ್​ಟೇಬಲ್ಸ್​ಗೆ ಎದುರಾಯ್ತು ಸಂಕಷ್ಟ!​

    ನನ್ನ ಗುರಿ ಏನಿದ್ರು ರೆಸ್ಟ್ ಆಫ್ ದಿ ವರ್ಲ್ಡ್ ಎಂದು ಗುಡುಗಿದ ರಾಕಿ ಭಾಯ್​: ಜಗತ್ತು ಗೆಲ್ಲಲು ಹೊರಟ ಯಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts