More

    ಸೈಬರ್​ ವಂಚಕನಿಗೆ ತಿರುಗೇಟು ಕೊಟ್ಟಿದ್ದು ಹೀಗೆ..ಮಹಿಳೆ ವೀಡಿಯೋ ವೈರಲ್​

    ಮುಂಬೈ: ಹಣ ಕಬಳಿಕೆಗೆ ಸೈಬರ್​ ವಂಚಕನೊಬ್ಬ ಮಾಡಿದ ಪ್ರಯತ್ನವನ್ನು ಮಹಿಳೆಯೊಬ್ಬರು ಚಾಕಚಕ್ಯತೆಯಿಂದ ತಡೆದಿದ್ದಾಳೆ. ಇಷ್ಟಕ್ಕೂ ವಂಚಕನ ಮಾಯಾಜಾಲದಿಂದ ಆಕೆ ತಪ್ಪಿಸಿಕೊಂಡಿದ್ದಾದರೂ ಹೇಗೆ? ವಿವರ ಇಲ್ಲಿದೆ..

    ಇದನ್ನೂ ಓದಿ: ಆಶ್ರಯ ಧಾಮದಲ್ಲಿದ್ದ 26 ಹುಡುಗಿಯರು ನಾಪತ್ತೆ : ಮಿಷನರಿ ಮೇಲೆ ಕೇಸು ದಾಖಲಿಸಿದ್ದೇಕೆ?
    ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ವಿವರವಾದ ಟಿಪ್ಪಣಿಯನ್ನು ಹಂಚಿಕೊಂಡ ಮಹಿಳೆ, ಸ್ಕ್ಯಾಮರ್‌ಗಳು ಬಳಸುವ ತಂತ್ರಗಳ ಬಗ್ಗೆ ಇತರರನ್ನು ಎಚ್ಚರಿಸಲು ತನಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. “ಓ ಹುಡುಗರೇ, ಇತ್ತೀಚೆಗೆ ಅಪರಿಚಿತನೊಬ್ಬ ಯುಪಿಐ ಮೂಲಕ ನನ್ನನ್ನು ವಂಚಿಸಲು ಪ್ರಯತ್ನಿಸಿದ” ಎಂದು ಮುಂಬೈಗೆ ಸೇರಿದ ಆ ಮಹಿಳೆ ಬರೆದುಕೊಂಡಿದ್ದಾರೆ.

    ಇತ್ತೀಚೆಗೆ ಒಬ್ಬ ವ್ಯಕ್ತಿ ನನ್ನನ್ನು ಮೋಸಗೊಳಿಸಲು ಯತ್ನಿಸಿದ. ನನ್ನ ತಂದೆ ಮನೆಯಲ್ಲಿ ಇಲ್ಲದ ಸಮಯದಲ್ಲಿ ನನಗೆ ಕರೆ ಬಂದಿತ್ತು. ನನ್ನ ಮೊಬೈಲ್​ ಸಂಖ್ಯೆಯನ್ನು ಸ್ವತಃ ನನ್ನ ತಂದೆಯೇ ಕೊಟ್ಟಿದ್ದಾಗಿ ತಿಳಿಸಿದ. ನನ್ನನ್ನು “ಬೇಟಾ” (ಮಗು) ಎಂದು ಸಂಬೋಧಿಸಿ, ನನ್ನ ತಂದೆಗೆ 25,000 ಎಲ್ಐಸಿ ಹಣವನ್ನು ವರ್ಗಾಯಿಸಬೇಕಿದ್ದು, ಅವರ ಗೂಗಲ್​ ಪೇ ಇಲ್ಲದ ಕಾರಣ ನನ್ನ ನಂಬರಿಗೆ ಕಳೂಹಿಸುವುದಾಗಿಯೂ ನನ್ನ ಗೂಗಲ್​ ಪೇ ಇರುವ ಮೊಬೈಲ್​ ಸಂಖ್ಯೆ ಕೊಡಬೇಕೆಂದು ಕೇಳಿದ.

    ನನ್ನ ತಂದೆಗೆ ನಿಜವಾಗಿಯೂ ಗೂಗಲ್​ ಪೇ ಇಲ್ಲದ ಕಾರಣ ಆತ ಹೇಳಿದ ಮಾತುಗಳನ್ನು ನಂಬಬೇಕಾಗಿ ಬಂದಿತು. ಹಾಗಾಗಿಯೇ ಅನುಮಾನಿಸದೆ ನನ್ನ ಸಂಖ್ಯೆಗೆ ಹಣ ಕಳೂಹಿಸಿ ಎಂದು ಹೇಳಿದೆ.

    ಕರೆ ಮುಂದುವರೆದಂತೆ, ವಂಚಕನು ನನ್ನ ಖಾತೆಗೆ 20 ಸಾವಿರ ಕಳೂಹಿಸಿದಂತೆ ಮೆಸೇಜ್​ ಕಳೂಹಿಸಿದ. ಆ ನಂತರ ಇನ್ನೂ 5ಸಾವಿರ ಕಳೂಹಿಸುವುದಾಗಿ ಹೇಳಿದ. ಆದರೆ ನನಗೆ ಮತ್ತೆ 5,000 ಬದಲಿಗೆ 50,000 ಸ್ವೀಕರಿಸಿದಂತೆ ಮೆಸೇಜ್​ ಬಂದಿತು.

    ಆಗ ಆ ವ್ಯಕ್ತಿ 45 ಸಾವಿರ ವಾಪಸ್​ ಕಳೂಹಿಸುವಂತೆ ಕೋರಿದ. ಆಗ ನನ್ನ ಅಕೌಂಟ್​ ಅನ್ನು ಪರಿಶೀಲಿಸಿ ನೋಡಿದರೆ 20 ಮತ್ತು 50ಸಾವಿರ ಜಮೆ ಯಾಗಿರಲಿಲ್ಲ. ಆದರೆ ಗೂಗಲ್​ ಆಪ್​ನಲ್ಲಿ ಹಣ ಜಮೆಯಾದಂತೆ ಮೆಸೆಜ್​ ತೋರಿಸಿತು. ಬ್ಯಾಂಕ್​ ಖಾತೆಗೆ ಹಣ ಬಾರದ ಕಾರಣ ಆತನಿಗೆ ವಿಷಯವನ್ನು ವಿವರಿಸಿದೆ. ಆದರೆ ಆತ 45,000 ಹಿಂತಿರುಗಿಸಲು ಒತ್ತಡ ಹಾಕಲು ಯತ್ನಿಸಿದ.

    ಆತ’ಅರೆ ಬೀಟಾ, ನಾನು 5ಸಾವಿರಕ್ಕೆ ಬದಲಿಗೆ 50ಸಾವಿರ ಕಳುಹಿಸಿದ್ದೇನೆ. ಚಿಂತೆಯಿಲ್ಲ. ನೀವು ನನಗೆ 45ಸಾವಿರ ಮರಳಿ ಕಳುಹಿಸಬಹುದೇ?’ಎಂದು ಕೇಳಿದ ಎಂದು X ನಲ್ಲಿ ವಿವರಿಸಿದ್ದಾರೆ.

    “ಆಗ ನಾನು ಗೂಗಲ್​ ಪೇನಲ್ಲಿ ಹಣವಿಲ್ಲ, ನಮ್ಮ ತಂದೆ ಬರಲಿ, ಅವರ ಖಾತೆಯಿಂದ ಹಣ ಕೊಡಿಸುತ್ತೇನೆ ಎಂದು ಹೇಳಿದೆ. ಕೂಡಲೇ ಆ ವ್ಯಕ್ತಿ ಕರೆ ಕಟ್​ ಮಾಡಿದ ಎಂದು ಆಕೆ ವಿವರಿಸಿದ್ದಾರೆ. ಈಗ ಆಕೆ ವಿವರಿಸಿರುವ ಪೋಸ್ಟ್​ ವೈರಲ್​ ಆಗಿದೆ.

    ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುತ್ತಿಲ್ಲವೇ? ಹಾಗಾದರೆ ಆರ್​ಬಿಐನ ಇತ್ತೀಚಿನ ನಿರ್ದೇಶನವನ್ನು ಪರಿಶೀಲಿಸಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts