More

    ಆಶ್ರಯ ಧಾಮದಲ್ಲಿದ್ದ 26 ಹುಡುಗಿಯರು ನಾಪತ್ತೆ : ಮಿಷನರಿ ಮೇಲೆ ಕೇಸು ದಾಖಲಿಸಿದ್ದೇಕೆ?

    some–have-gone–from-an-illegally-run–in-bhopal

    ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಶೆಲ್ಟರ್ ಹೋಮ್‌(ಆಶ್ರಯ ಧಾಮ)ನಲ್ಲಿ ವಾಸಿಸುತ್ತಿದ್ದ 26 ಹುಡುಗಿಯರು ನಾಪತ್ತೆಯಾಗಿದ್ದಾರೆ.

    ಇದನ್ನೂ ಓದಿ: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುತ್ತಿಲ್ಲವೇ? ಹಾಗಾದರೆ ಆರ್​ಬಿಐನ ಇತ್ತೀಚಿನ ನಿರ್ದೇಶನವನ್ನು ಪರಿಶೀಲಿಸಿ..
    ಮಧ್ಯಪ್ರದೇಶದ ಜತೆಗೆ ಗುಜರಾತ್, ಜಾರ್ಖಂಡ್, ರಾಜಸ್ಥಾನ ಸೇರಿ ವಿವಿಧ ರಾಜ್ಯಗಳಿಂದ ರಕ್ಷಿಸಲ್ಪಟ್ಟ ನಂತರ ಹುಡುಗಿಯರನ್ನು ಭೋಪಾಲ್‌ನ ಹೊರವಲಯದ ಪರ್ವಾಲಿಯಾ ಪ್ರದೇಶದಲ್ಲಿರುವ ಆಂಚಲ್ ಬಾಲಕಿಯರ ಹಾಸ್ಟೆಲ್‌ಗೆ ಕರೆತರಲಾಗಿತ್ತು.

    ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್ ಸಿಪಿಸಿಆರ್​) ಅಧ್ಯಕ್ಷ ಪ್ರಿಯಾಂಕ್ ಕನುಂಗೋ ಅವರು ದಿಢೀರ್ ಭೇಟಿ ನೀಡಿದ ನಂತರ ಈ ವಿಷಯ ಬಯಲಾಗಿದೆ.

    ಈ ಹೆಣ್ಣು ಮಕ್ಕಳ ಆಶ್ರಯ ಧಾಮದಲ್ಲಿ 68 ಹುಡುಗಿಯರು ಇರುವ ಬಗ್ಗೆ ನಮೂದಾಗಿತ್ತು. ಆದರೆ ಅವರಲ್ಲಿ 26 ಮಂದಿ ಕಾಣೆಯಾಗಿದ್ದರು ಎಂದು ತಪಾಸಣೆ ನಂತರ ಕನುಂಗೊ ಹೇಳಿದ್ದಾರೆ. ಕಾಣೆಯಾದ ಬಾಲಕಿಯರ ಕುರಿತು ಆಶ್ರಯಧಾಮದ ನಿರ್ದೇಶಕ ಅನಿಲ್ ಮ್ಯಾಥ್ಯೂ ಅವರನ್ನು ಪ್ರಶ್ನಿಸಿದಾಗ ಅವರು ತೃಪ್ತಿಕರ ಉತ್ತರ ನೀಡಲಿಲ್ಲ. ಹೀಗಾಗಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಕನುಂಗೊ ಸೇರಿಸಲಾಗಿದೆ.

    ಮಕ್ಕಳ ಮನೆಯನ್ನು ನಿರ್ವಹಿಸುತ್ತಿದ್ದ ಮಿಷನರಿಯೊಬ್ಬರು ದಿಕ್ಕಿಲ್ಲದ ಕೆಲವು ಮಕ್ಕಳನ್ನು ರಕ್ಷಿಸಿದ್ದಾರೆ. ಆದರೆ ಈ ರೀತಿ ಮಾಡಲು ಅವರಿಗೆ ಯಾವುದೇ ಪರವಾನಗಿ ಪಡೆದುಕೊಂಡಿಲ್ಲ. ಸರ್ಕಾರದ ಗಮನಕ್ಕೆ ತಾರದೆ ಆಶ್ರಯ ಧಾಮ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ರಕ್ಷಿಸಲ್ಪಟ್ಟವರನ್ನು ಮಕ್ಕಳ ಮನೆಯಲ್ಲಿ ರಹಸ್ಯವಾಗಿ ಇರಿಸಲಾಗಿದೆ. ಅಷ್ಟೇ ಅಲ್ಲ, ಕ್ರಿಶ್ಚಿಯನ್ ಧರ್ಮವನ್ನು ಆಚರಿಸುವಂತೆ ಮಾಡಲಾಗಿದೆ ಎಂದು ಎನ್‌ಸಿಪಿಸಿಆರ್ ಅಧ್ಯಕ್ಷರು ಆರೋಪಿಸಿದ್ದಾರೆ.

    6 ರಿಂದ 18 ವರ್ಷದೊಳಗಿನ ಹೆಚ್ಚಿನ ಹುಡುಗಿಯರು ಹಿಂದೂಗಳು. ಬಹಳ ತ್ರಾಸದಿಂದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ದುರದೃಷ್ಟವಶಾತ್ ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅಂತಹ ಎನ್‌ಜಿಒಗಳಿಂದ ಒಪ್ಪಂದದ ಮೇರೆಗೆ ಮಕ್ಕಳ ಸಹಾಯವಾಣಿಯನ್ನು ನಡೆಸಲು ಬಯಸುತ್ತಾರೆ ಎಂದು ಅವರು ಹೇಳಿದರು.

    ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಸರ್ಕಾರವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಹೇಳಿದ್ದಾರೆ.

    ರಾಮಮಂದಿರ ಉದ್ಘಾಟನೆಗೆ ಸಿಗದ ಆಮಂತ್ರಣ: ಉದ್ಧವ್​ ಠಾಕ್ರೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts