More

    ಬ್ಯಾಗ್​ನಲ್ಲಿ ಪರ್ಸ್ ಇಟ್ಟು ಕ್ರಿಕೆಟ್​ ಆಡಲು ಹೋದವನಿಗೆ ಕಾದಿತ್ತು ಬಿಗ್​ ಶಾಕ್​! 6.7 ಲಕ್ಷ ರೂ. ಎಗರಿಸಿದ ಖದೀಮರು

    ಮುಂಬೈ: ಪರ್ಸ್​ ಬದಿಗಿಟ್ಟು ಕ್ರಿಕೆಟ್​ ಆಡಿದ ಪರಿಣಾಮ ಚಾರ್ಟೆಡ್​ ಅಕೌಂಟೆಂಟ್​ ಓರ್ವ 6.7 ಲಕ್ಷ ರೂ. ಕಳೆದುಕೊಂಡಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

    ದೂರಿನ ಆಧಾರದ ಮೇಲೆ ಮಾರ್ಚ್ 30ರಂದು ಆಜಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ದೂರುದಾರ ವಿವೇಕ್ ದಾವೆ ದಕ್ಷಿಣ ಮುಂಬೈನಲ್ಲಿರುವ ಕ್ರಾಸ್ ಮೈದಾನದಲ್ಲಿ ಕ್ರಿಕೆಟ್ ಆಡಲು ಬಂದಿದ್ದರು. ತನ್ನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಿದ್ದ ಪರ್ಸ್​, ಮೊಬೈಲ್ ಫೋನ್ ಸೇರಿದಂತೆ ಅನೇಕ ಸಾಮಾನುಗಳನ್ನು ಬ್ಯಾಗ್‌ನಲ್ಲಿ ಇಟ್ಟು ಹೋಗಿದ್ದರು.

    ಆಟವನ್ನು ಮುಗಿಸಿ ಬೋರಿವಲಿಗೆ ರೈಲಿನಲ್ಲಿ ಮನೆಗೆ ಹೋಗುತ್ತಿದ್ದಾಗ, ದಾವೆ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಬ್ಯಾಂಕ್ ವಹಿವಾಟು ಮೆಸೇಜ್​ಗಳನ್ನು ಗಮನಿಸಿದ್ದಾರೆ. ಅದರ ಪ್ರಕಾರ ಅವರ ಬ್ಯಾಂಕ್ ಖಾತೆಯಿಂದ ಸುಮಾರು 1 ಲಕ್ಷ ರೂ. ಡೆಬಿಟ್ ಆಗಿದೆ ಮತ್ತು ಅವರ ಕ್ರೆಡಿಟ್ ಕಾರ್ಡ್ ಬಳಸಿ 5 ಲಕ್ಷ ರೂ. ಅಧಿಕ ಖರೀದಿ ಮಾಡಲಾಗಿದೆ. , ಅಧಿಕಾರಿ ಹೇಳಿದರು.

    ಪ್ರಥಮ ಮಾಹಿತಿ ವರದಿ ಪ್ರಕಾರ, ದೂರುದಾರರು ಮೂರು ಗಂಟೆಗಳಿಗೂ ಅಧಿಕ ಸಮಯ ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ದುಷ್ಕರ್ಮಿಗಳು, ದಾವೆ ಅವರ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಕದ್ದು, ಎಟಿಎಂನಿಂದ 1 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ನಾಲ್ಕು ಆಭರಣ ಮಳಿಗೆಗಳಲ್ಲಿ ಶಾಪಿಂಗ್‌ ಮಾಡಿದ್ದಾರೆ.

    ತಮ್ಮ ಕಾರ್ಡ್ ಬಳಸಿ ಆಭರಣಗಳನ್ನು ಖರೀದಿಸಿದ ಅಂಗಡಿಗಳಲ್ಲಿ ಒಂದನ್ನು ದಾವೆ ಅವರು ಸಂಪರ್ಕಿಸಿ, ಅಂಗಡಿ ಮಾಲೀಕರಿಂದ ಆರೋಪಿಯ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸನಾರನ್ನು ಮದ್ವೆಯಾಗೋ ಮುಂಚೆ ಶೋಯಿಬ್​ ಇಂಥಾ ನೀಚ ಕೆಲ್ಸ ಮಾಡಿದ್ರಾ? ಶಾಕಿಂಗ್ ಸಂಗತಿ ಬಿಚ್ಚಿಟ್ಟ ಪಾಕ್​ ನಟಿ

    ಆಸಿಸ್​ ತಂಡದಲ್ಲಿ ಶುರುವಾಯ್ತು ನಡುಕ! ಟೀಮ್​ ಇಂಡಿಯಾಗೆ ರಣಬೇಟೆಗಾರನ ಎಂಟ್ರಿ ಫಿಕ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts