More

    ಹುಟ್ಟುಹಬ್ಬದ ಸಂಭ್ರಮದಲ್ಲಿ ಮುಂಬೈ ಇಂಡಿಯನ್ಸ್​ ವೇಗಿ ಲಸಿತ್​ ಮಾಲಿಂಗ..

    ಬೆಂಗಳೂರು: ಶ್ರೀಲಂಕಾದ ದಿಗ್ಗಜ ವೇಗದ ಬೌಲರ್​ ಲಸಿತ್​ ಮಾಲಿಂಗ ಶುಕ್ರವಾರ 37ನೇ ವರ್ಷದ ಹುಟ್ಟಹಬ್ಬ ಆಚರಿಸಿಕೊಂಡರು. ನಿಗದಿತ ಓವರ್​ಗಳಲ್ಲಿ ಡೆತ್​ ಓವರ್​ ಸ್ಪೆಷಲಿಸ್ಟ್​ ಎನಿಸಿಕೊಂಡಿರುವ ಮಾಲಿಂಗ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಐಸಿಸಿ, ಮುಂಬೈ ಇಂಡಿಯನ್ಸ್​ ಹಾಗೂ ಐಪಿಎಲ್​ನ ಅಧಿಕೃತ ವೆಬ್​ಸೈಟ್​ಗಳಲ್ಲಿ ಮಾಲಿಂಗ ಹುಟ್ಟುಹಬ್ಬಕ್ಕೆ ಶುಭ ಕೋರಲಾಗಿದೆ. ಮುಂಬೈ ಇಂಡಿಯನ್ಸ್​ ತಂಡದ ಸಹ-ಆಟಗಾರ ಹಾರ್ದಿಕ್ ಪಾಂಡ್ಯ ಮಾಲಿಂಗ ಜತೆಗಿರುವ 4 ಫೋಟೋಗಳನ್ನು ಟ್ವಿಟರ್​ನಲ್ಲಿ ಪ್ರಕಟಿಸಿದ್ದಾರೆ.

    ಇದನ್ನೂ ಓದಿ: ಕೊಹ್ಲಿ- ಅನುಷ್ಕಾ ತಂದೆ-ತಾಯಿ ಆಗುತ್ತಿರುವುದಕ್ಕೆ ಟ್ರೋಲ್​ ಆಗುತ್ತಿದ್ದಾನೆ ಬಾಲಿವುಡ್​ ಸ್ಟಾರ್​ ದಂಪತಿ ಪುತ್ರ..!

    ಐಪಿಎಲ್​ ಆರಂಭಿಕ ದಿನಗಳಿಂದಲೂ ಮುಂಬೈ ಇಂಡಿಯನ್ಸ್​ ತಂಡ ಪ್ರತಿನಿಧಿಸುತ್ತಿರುವ ಮಾಲಿಂಗ, ವೈಯಕ್ತಿಕ ಕಾರಣಗಳಿಂದ ಸೆ.19 ರಿಂದ ಯುಎಇಯಲ್ಲಿ ಆರಂಭಗೊಳ್ಳಲಿರುವ ಟೂರ್ನಿಯ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ವಿರಾಟ್​ ಕೊಹ್ಲಿ ಬಿಟ್ಟರೆ ಲಸಿತ್​ ಮಾಲಿಂಗ, ಐಪಿಎಲ್​ನಲ್ಲಿ ಒಂದೇ ತಂಡ ಪ್ರತಿನಿಧಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಮುಂಬೈ ಪರ ಐಪಿಎಲ್​ನಲ್ಲಿ ಇದುವರೆಗೂ ಆಡಿರುವ 122 ಪಂದ್ಯಗಳಿಂದ 170 ವಿಕೆಟ್​ ಕಬಳಿಸಿದ್ದಾರೆ.

    ಇದನ್ನೂ ಓದಿ: VIDEO: ಸಿಪಿಎಲ್ ಟೂರ್ನಿಯಲ್ಲಿ ಟಿಕೆಆರ್​ ತಂಡಕ್ಕೆ ಸತತ 5ನೇ ಜಯ

    ಶ್ರೀಲಂಕಾ ತಂಡದ ಪರ 30 ಟೆಸ್ಟ್​, 226 ಏಕದಿನ ಹಾಗೂ 83 ಟಿ20 ಪಂದ್ಯಗಳನ್ನಾಡಿದ್ದಾರೆ. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮಾಲಿಂಗ, ಟಿ20 ಕ್ರಿಕೆಟ್​ನಲ್ಲಿ 107 ವಿಕೆಟ್​ ಕಬಳಿಸುವ ಮೂಲಕ ಅತಿಹೆಚ್ಚು ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 338 ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ 101 ವಿಕೆಟ್​ ಕಬಳಿಸಿದ್ದಾರೆ. 2011ರಲ್ಲಿ ತಮ್ಮ 27ನೇ ವಯಸ್ಸಿಗೆ ಮಾಲಿಂಗ ಟೆಸ್ಟ್​ಗೆ ವಿದಾಯ ಘೋಷಿಸಿದರು. 2014ರ ಟಿ20 ವಿಶ್ವಕಪ್​ ವಿಜೇತ ಲಂಕಾ ತಂಡದ ಸದಸ್ಯರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts