More

    ಯುಎಇಯಲ್ಲಿ ಅಭ್ಯಾಸ ಆರಂಭಿಸಿದ ಮುಂಬೈ ಇಂಡಿಯನ್ಸ್, ಸಿಎಸ್‌ಕೆ ತಂಡಗಳು

    ದುಬೈ: ಯುಎಇ ತಲುಪಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಿ ಅಭ್ಯಾಸ ಆರಂಭಿಸಿವೆ. ಸಿಎಸ್‌ಕೆ ನಾಯಕ ಧೋನಿ, ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಕರ್ಣ್ ಶರ್ಮ ಫುಟ್‌ಬಾಲ್ ಆಡುತ್ತಿರುವ ಫೋಟೋಗಳನ್ನು ತಂಡ ಟ್ವೀಟ್ ಮಾಡಿದೆ. ಸಂಜೆ ಆಟಗಾರರು ನೆಟ್ಸ್​ ಅಭ್ಯಾಸ ಮಾಡಿದರು. ಸಿಎಸ್‌ಕೆ ತಂಡ ದುಬೈನಲ್ಲಿರುವ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ಆರಂಭಿಸಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ತಂಡ ಅಬುಧಾಬಿಯಲ್ಲಿ ಶುಕ್ರವಾರದಿಂದಲೇ ಅಭ್ಯಾಸ ಆರಂಭಿಸಿದೆ. ಉಭಯ ತಂಡಗಳು ಆಗಸ್ಟ್ 13 ರಂದೇ ಯುಎಇ ತಲುಪಿದ್ದವು. ಸೆ.19 ರಂದು ನಡೆಯಲಿರುವ ಲೀಗ್‌ನ ಮೊದಲ ಮುಖಾಮುಖಿಯಲ್ಲಿ ಉಭಯ ತಂಡಗಳು ಎದುರಾಗಲಿವೆ.

    ಇದನ್ನೂ ಓದಿ: ಆರ್‌ಸಿಬಿ ತಂಡದ ಮುಖ್ಯ ಕೋಚ್ ಆಗಿ ಮೈಕ್ ಹೆಸ್ಸನ್

    ವಿದೇಶಿ ಆಟಗಾರರು ಪೂರ್ಣ ಪ್ರಮಾಣದಲ್ಲಿ ಲಭ್ಯರಾಗದ ಹಿನ್ನೆಲೆಯಲ್ಲಿ ಅಂತಿಮ ತಂಡ ಸಲ್ಲಿಸಲು ಸಮಯಾವಕಾಶ ಕೋರಿದ್ದ ಕೆಲ ಫ್ರಾಂಚೈಸಿಗಳ ಮನವಿಯನ್ನು ಬಿಸಿಸಿಐ ಪುರಸ್ಕರಿಸಿದೆ. ಐಪಿಎಲ್ ಭಾಗ-2ಕ್ಕೆ ಶುಕ್ರವಾರ (ಆ.20) 5 ಗಂಟೆಯೊಳಗೆ ತಂಡಗಳನ್ನು ಅಂತಿಮಗೊಳಿಸುವಂತೆ ಬಿಸಿಸಿಐ ಸೂಚಿಸಿತ್ತು. ಆಸ್ಟ್ರೇಲಿಯಾದ ಆಟಗಾರರ ಐಪಿಎಲ್ ಭಾಗ-2 ರಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ತಂಡಗಳು ಬದಲಿ ಆಟಗಾರರ ತಲಾಷ್‌ನಲ್ಲಿ ತೊಡಗಿದ್ದವು. ಪಂಜಾಬ್ ಕಿಂಗ್ಸ್ ಹಾಗೂ ಕೆಕೆಆರ್ ಹೊರತುಪಡಿಸಿ ಉಳಿದ ಫ್ರಾಂಚೈಸಿಗಳು ತಂಡಗಳನ್ನು ಅಂತಿಮಗೊಳಿಸಿವೆ.

    ಇದನ್ನೂ ಓದಿ: ಯುಎಸ್ ಓಪನ್‌ನಿಂದ ಹಿಂದೆ ಸರಿದ ಸ್ಟಾರ್ ಆಟಗಾರ ನಡಾಲ್

    * ದುಬೈ ತಲುಪಿದ ಡೆಲ್ಲಿ ಕ್ಯಾಪಿಟಲ್ಸ್
    ಹಾಲಿ ರನ್ನರ್‌ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶನಿವಾರ ದುಬೈ ತಲುಪಿತು. ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ತಮ್ಮ ಫಿಟ್ನೆಸ್ ಕೋಚ್ ಜತೆಗೆ ಈಗಾಗಲೇ ದುಬೈನಲ್ಲಿದ್ದಾರೆ. ಮುಂದಿನ 6 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಲಿದ್ದು, ಬಳಿಕ ಅಭ್ಯಾಸ ಆರಂಭಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts