More

    ತನ್ನದೇ ಸೆಕ್ಸ್​ ವಿಡಿಯೋ ಮಾರುತ್ತಿದ್ದ ಬಸ್​ ಕಂಡಕ್ಟರ್​! ಪರಸ್ತ್ರೀಯರೊಂದಿಗೂ ಲೈಂಗಿಕ ಸಂಪರ್ಕ, 65 ವಿಡಿಯೋ ವಶ

    ಮುಂಬೈ: ಬಸ್​ ಕಂಡಕ್ಟರ್​ವೊಬ್ಬ ಪರಸ್ತ್ರೀಯರೊಂದಿಗೆ ಸೆಕ್ಸ್​ ಮಾಡಿ ಆ ದೃಶ್ಯವನ್ನು ತಾನೇ ಚಿತ್ರೀಕರಿಸಿಕೊಂಡು ಪೋರ್ನ್​ ವೆಬ್​ಸೈಟ್​ಗೆ ಅ​ಪ್ಲೌಡ್​ ಮಾಡಿ ಸಿಕ್ಕಿಬಿದ್ದಿದ್ದಾನೆ.

    ಇಲ್ಲಿನ ಥಾಣೆ ಮುನ್ಸಿಪಲ್ ಟ್ರಾನ್ಸ್​ಪೋರ್ಟ್(ಟಿಎಂಟಿ)ನ ಬಸ್​ ಕಂಡಕ್ಟರ್​ ಆಗಿದ್ದ ಮಿಲಿಂದ್ ಜೇಡ್(32), ಮಹಿಳೆಯರಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಅವರೊಂದಿಗಿನ ಲೈಂಗಿಕ ಕ್ರಿಯೆಯ ದೃಶ್ಯವನ್ನು ತನ್ನ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಳ್ಳುತ್ತಿದ್ದ. ಹೀಗೆ ಮಾಡಿಟ್ಟುಕೊಂಡಿದ್ದ ಬರೋಬ್ಬರಿ 65 ಸೆಕ್ಸ್​ ವಿಡಿಯೋವನ್ನು ಅಶ್ಲೀಲ ವೆಬ್​ಸೈಟ್​ಗಳಿಗೆ ಮಾರಾಟ ಮಾಡಿದ್ದ.

    ಬಸ್​ ಕಂಡಕ್ಟರ್​ ಮಿಲಿಂದ್​​ ಜೇಡ್​ನ ದುಷ್ಕೃತ್ಯ ಬಯಲಾಗಿದ್ದು ಈತನ ಪತ್ನಿಯ ಸ್ನೇಹಿತರಿಂದ! ಹೌದು, ಈತ ತನ್ನ ಪತ್ನಿಯ ಸ್ನೇಹಿತರನ್ನೂ ಬಿಟ್ಟಿರಲಿಲ್ಲ. ಪತ್ನಿಯ ಸ್ನೇಹಿತೆಯರಿಬ್ಬರು ಎಂಎ, ಬಿಎಡ್ ಓದುತ್ತಿದ್ದರು. ಇವರೊಂದಿಗೆ ಸ್ನೇಹ ಬೆಳೆಸಿದ್ದ ಮಿಲಿಂದ್​, ಅಕ್ರಮ ಸಂಬಂಧದ ಕೂಪಕ್ಕೆ ಬೀಳಿಸಿಕೊಂಡಿದ್ದ. ಈ ಕೃತ್ಯದ ವಿಡಿಯೋವನ್ನು ಅಶ್ಲೀಲ ವೆಬ್​ಸೈಟ್‍ಗೆ ಮಾರಾಟ ಮಾಡಿದ್ದ. ಈ ಪೈಕಿ ಓರ್ವ ಸಂತ್ರಸ್ತೆಯ ಸಂಬಂಧಿಯೊಬ್ಬರು ವಿಡಿಯೋ ಹರಿದಾಡುತ್ತಿರುವುದನ್ನು ಗಮನಿಸಿ ಆಕೆಯ ಗಮನಕ್ಕೆ ತಂದಾಗ ಕೃತ್ಯ ಬೆಳಕಿಗೆ ಬಂದಿದೆ.

    ತನ್ನದೇ ಸೆಕ್ಸ್​ ವಿಡಿಯೋ ಮಾರುತ್ತಿದ್ದ ಬಸ್​ ಕಂಡಕ್ಟರ್​! ಪರಸ್ತ್ರೀಯರೊಂದಿಗೂ ಲೈಂಗಿಕ ಸಂಪರ್ಕ, 65 ವಿಡಿಯೋ ವಶಕೂಡಲೇ ಸಂತ್ರಸ್ತೆಯು ವಿಕ್ರಮ್​ಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಿಲಿಂದ್​​ನ ಸೆಕ್ಸ್​ ದಂಧೆಯ ಜಾಡು ಹಿಡಿದು ಹೊರಟ ಪೊಲೀಸರು ಆರೋಪಿಯ ಖತರ್ನಾಕ್​ ವಂಚನೆಯ ಒಂದೊಂದೇ ಎಳೆಯನ್ನು ಬಯಲಿಗೆಳೆಯುತ್ತಿದ್ದಾರೆ. ಆರೋಪಿ ಮಿಲಿಂದ್​ ತನ್ನ ಪತ್ನಿಯ ಸ್ನೇಹಿತೆಯರಿಬ್ಬರೊಂದಿಗೆ ಮಾತ್ರವಲ್ಲ, ಹಲವಾರು ಮಹಿಳೆಯರನ್ನು ಪುಸಲಾಯಿಸಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾನೆ. ಈ ವೇಳೆ ಮಹಿಳೆಯರ ಮುಖ ಕಾಣುವಂತೆ ಮತ್ತು ತನ್ನ ಮುಖ ಸರೆಯಾಗದಂತೆ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಸರ್ಕಾರಿ ಉದ್ಯೋಗದಲ್ಲಿದ್ದ ಆರೋಪಿಯು ಬಹುತೇಕ ಮಹಿಳೆಯರಿಗೆ ಸರ್ಕಾರಿ ಉದ್ಯೋಗದ ಆಸೆ ತೋರಿಸಿ ಅವರ ಸ್ನೇಹ ಗಿಟ್ಟಿಸಿಕೊಂಡು ಸೆಕ್ಸ್​ ಜಾಲಕ್ಕೆ ಬೀಳಿಸಿಕೊಳ್ಳುತ್ತಿದ್ದ. ವಿರೋಧಿಸಿದರೆ ಅತ್ಯಾಚಾರವೆಸಗುತ್ತಿದ್ದ ಎಂದು ಗೊತ್ತಾಗಿದೆ.

    ಆರೋಪಿ ಮಿಲಿಂದ್​ ವಿರುದ್ಧ ಜುಲೈನಲ್ಲಿ ಎಫ್​ಐಆರ್​ ದಾಖಲಾಗುತ್ತಿದ್ದಂತೆ ಮನೆಯಿಂದ ಪರಾರಿಯಾಗಿದ್ದ. ಇತ್ತೀಚಿಗೆ ಪತ್ನಿಯನ್ನು ನೋಡಲು ಮನೆಗೆ ಆರೋಪಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಅಶ್ಲೀಲ ವೆಬ್‍ಸೈಟ್‍ಗಳಿಗೆ ಸೆಕ್ಸ್​ ವಿಡಿಯೋಗಳನ್ನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಸಂಪಾದಿಸಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಮಿಲಿಂದ್​ನಿಂದ ವಂಚನೆಗೊಳಗಾದ ಮಹಿಳೆಯರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ದೆವ್ವ ಬಿಡಿಸೋದಾಗಿ ಯುವತಿಯನ್ನು ಪೊದೆಯೊಳಕ್ಕೆ ಕರೆದೊಯ್ದ ಮಂತ್ರವಾದಿ-ಮಗ, ಇವರ ದುಷ್ಕೃತ್ಯ ನೋಡಿದ್ರೆ ಬೆಚ್ಚಿಬೀಳ್ತೀರಿ!

    ಇಬ್ಬರು ಪತ್ನಿಯರೊಂದಿಗಿನ ಕಾಮದಾಟದ ಲೈವ್​ ದೃಶ್ಯವನ್ನೇ ಮಾರಾಟಕ್ಕಿಟ್ಟ 24ರ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts