More

    ಯೋಜನೆ ಅನುಷ್ಠಾನಕ್ಕೆ ತರಾತುರಿ ಬೇಡ

    ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ಪ್ರದೇಶ ಯೋಜನೆಯನ್ನು ಕೂಡಲೇ ಕೈಬಿಡಲು ಒತ್ತಾಯಿಸಿ 8 ಗ್ರಾಪಂ ವ್ಯಾಪ್ತಿಯ ರೈತರು ಮತ್ತು ಸ್ಥಳೀಯರು ಸಭೆ ಸೇರಿ ಕೈಗೊಂಡ ನಿರ್ಣಯವನ್ನು ಜಿಲ್ಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರಿಗೆ ಗುರುವಾರ ಸಲ್ಲಿಸಲಾಯಿತು.

    ಮಲಗಾರು ಸರ್ವೆ ನಂ.12ರಲ್ಲಿ ಜನವಸತಿ ಪ್ರದೇಶ ಮತ್ತು ದಲಿತರಿಗೆ ಈ ಹಿಂದೆ ಜಿಲ್ಲಾಧಿಕಾರಿ ಮಂಜೂರು ಮಾಡಿದ್ದ 30 ರೈತರ ಜನವಸತಿ ಹಾಗೂ ಕೃಷಿ ನಿರತ ಪ್ರದೇಶವನ್ನು ಡೀಮ್್ಡ ಫಾರೆಸ್ಟ್ ಎಂದು ಪಟ್ಟಿ ಮಾಡಲಾಗಿದೆ. ಹಾಗಾಗಿ ಈ ಯೋಜನೆಯನ್ನು ತರಾತುರಿಯಲ್ಲಿ ಅನುಷ್ಠಾನ ಮಾಡಬಾರದು ಎಂದು ಹೋರಾಟ ಸಮಿತಿ ಮುಖಂಡರು ಮನವಿ ಮಾಡಿದರು.

    ಮೀಸಲು ಪ್ರದೇಶ ಘೊಷಣೆಯ ಸಾಧಕ-ಬಾಧಕಗಳನ್ನು ಸಂಬಂಧಿಸಿದ ಗ್ರಾಪಂ ಮೂಲಕ ಗ್ರಾಮ ಸಭೆ ನಡೆಸಿ ನ್ಯಾಯಾಲಯದ ನಿರ್ದೇಶನದಂತೆ ಜನಾಭಿಪ್ರಾಯ ಪಡೆಯಬೇಕು. ಹುಲಿ ಯೋಜನೆ ಕುರಿತು ಕೋರ್​ಜೋನ್​ನಿಂದ 12 ಕಿಮೀ ವಾಯು ಮಾರ್ಗವಾಗಿ ಅಕ್ಷಾಂಶ ಮತ್ತು ರೇಖಾಂಶ ಸರ್ವೆ ಮೋಜಣಿಯೊಂದಿಗೆ ಸೂಕ್ಷ್ಮ ಪ್ರದೇಶವೆಂದು ಕೇಂದ್ರ ಪರಿಸರ ಇಲಾಖೆಯಿಂದ ಅಧಿಸೂಚನೆ ಹೊರಡಿಸಿದ್ದು ಆಕ್ಷೇಪಣೆ ಸಲ್ಲಿಸುವ ಸಮಯ ಪೂರ್ಣವಾಗಿದೆ. ಆದರೆ ಇದರಲ್ಲಿ ದೊಡ್ಡ ಕೈಗಾರಿಕೆಗಳು, ನೀರಾವರಿ ಯೋಜನೆ, ಜಲವಿದ್ಯುತ್ ಯೋಜನೆ, ಕಲ್ಲುಗಣಿಗಾರಿಕೆ ಹೀಗೆ ವನ್ಯಜೀವಿ ಹಾಗೂ ಪರಿಸರಕ್ಕೆ ಧಕ್ಕೆಯಾಗುವ ಯೋಜನೆಗಳನ್ನು ನಿಷೇಧಿಸಲಾಗುತ್ತದೆ. ವೈಲ್ಡ್​ಕ್ಯಾಟ್ ಸಿ ಸಂಸ್ಥೆ ಪ್ರಸ್ತಾವನೆಗೆ 2017ರಿಂದ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಗಳು ಹಲವು ಸಭೆ ನಡೆಸಿವೆ. ಅರಣ್ಯ ಕಾಯ್ದೆಯಡಿ 2018ರಲ್ಲಿ ದಾವೆ ಹೂಡಿ ಯೋಜನೆ ಆರಂಭಗೊಳಿಸಲು ಸೂಚಿಸಿದೆ. ಇದರ ಉದ್ದೇಶವನ್ನು ಜನರಿಗೆ ತಿಳಿಸದೆ ಕೇವಲ ಹುಲಿ ಯೋಜನೆಯಲ್ಲಿರುವ ಅವಕಾಶಗಳ ಬಗ್ಗೆ ಮಾತ್ರ ಜನರಿಗೆ ಮಾಹಿತಿ ನೀಡಿ ಅಧಿಕಾರಿಗಳು ಗ್ರಾಮಸ್ಥರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.

    ಹೋರಾಟ ಸಮಿತಿಯ ವಿಜಯ್ಕುಮಾರ್, ಎಂ.ಕೃಷ್ಣಪ್ಪ, ರಘು, ಈಶ್ವರ್, ಜಯಕುಮಾರ್, ವಕೀಲ ಪರಮೆಶ್ ಮತ್ತು ಸಿಪಿಐ ಮುಖಂಡರಾದ ಎಚ್.ಎಂ.ರೇಣುಕಾರಾಧ್ಯ, ಜಿ.ರಘು, ಜೆಡಿಎಸ್​ನ ಎಚ್.ಎಚ್.ದೇವರಾಜ್, ಚಂದ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts