More

    ಬಿಜೆಪಿಗೆ ಎದುರಾಯ್ತು ಸಂಕಷ್ಟ! ಬೇರೆ ಪಕ್ಷದ ಶಾಸಕನ ಕೊಲೆಗೆ ಸಂಚು ರೂಪಿಸಿದ್ರಾ ಬಿಜೆಪಿ ನಾಯಕ?

    ಕೋಲ್ಕತ: ಕೇಂದ್ರ ಬಿಜೆಪಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಚುನಾವಣೆಗೆ ಪ್ರಚಾರ ಆರಂಭಿಸಿರುವ ಪಕ್ಷದ ನಾಯಕನ ವಿರುದ್ಧ ಟಿಎಂಸಿ ಶಾಸಕರೊಬ್ಬರ ಕೊಲೆ ಸಂಚಿನ ಆರೋಪ ಕೇಳಿಬಂದಿದೆ.

    ಇದನ್ನೂ ಓದಿ: ಹೊಸ ಸಂಸತ್​ ಭವನದ ಭೂಮಿ ಪೂಜೆಗೆ ಮುಹೂರ್ತ ಫಿಕ್ಸ್​; ಮುಂದಿನ ವರ್ಷದ ಸ್ವಾತಂತ್ರ್ಯೋವಕ್ಕೆ ಸಿದ್ಧ

    ಟಿಎಂಸಿ ಪಕ್ಷದ ಶಾಸಕ ಸತ್ಯಜಿತ್​ ಬಿಸ್ವಾಸ್​ ಅವರನ್ನು 2019ರ ಫೆಬ್ರವರಿ 9ರಂದು ಯಾರೋ ಕೊಲೆ ಮಾಡಿದ್ದರು. ಇದರ ಕುರಿತಾಗಿ ರಾಜ್ಯ ಪೊಲೀಸ್​ ಇಲಾಖೆ ತನಿಖೆ ನಡೆಸುತ್ತಲಿದೆ. ಇದೀಗ ಪ್ರಕರಣದ ಪೂರಕ ಚಾರ್ಜ್​ಶೀಟ್​ ಸಲ್ಲಿಸಲಾಗಿದೆ. ಈ ಚಾರ್ಜ್​ಶೀಟ್​ನಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್​ ರಾಯ್ ಅವರ ಹೆಸರೂ ಇರುವುದಾಗಿ ಹೇಳಲಾಗಿದೆ. ಕೊಲೆ ಸಂಚುಕೋರರಲ್ಲಿ ಪ್ರಮುಖ ಪಾತ್ರವನ್ನು ಮುಕುಲ್​ ನಿರ್ವಹಿಸಿರುವುದಾಗಿ ದಾಖಲಿಸಲಾಗಿದೆ. ಚಾರ್ಜ್​ಶೀಟ್​ನ್ನು ನಾಡಿಯಾ ಜಿಲ್ಲೆಯ ನ್ಯಾಯಾಲಯದಲ್ಲಿ ಶನಿವಾರ ಮಧ್ಯಾಹ್ನ ಸಲ್ಲಿಸಲಾಗಿದೆ.

    ಪ್ರಕರಣದ ಸಂಬಂಧ ಮುಕುಲ್​ ರಾಯ್​ ಅವರನ್ನು ಈ ಹಿಂದೆಯೇ ಸಿಐಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಸಲ್ಲಿಸಿದ್ದ ಮೊದಲ ಚಾರ್ಜ್‌ಶೀಟ್‌ನಲ್ಲಿ ರಾಜ್ಯ ಸಂಸ್ಥೆ ಮುಕುಲ್​ ಅವರನ್ನು ಹೆಸರಿಸಲಿಲ್ಲ. ಆದರೆ ಬಿಜೆಪಿ ಸಂಸದ ಜಗನ್ನಾಥ ಸರ್ಕಾರ್ ಅವರ ಹೆಸರನ್ನು ದಾಖಲಿಸಲಾಗಿತ್ತು.

    ಇದನ್ನೂ ಓದಿ: ಮೀನು ಹಿಡಿಯೋಣ ಬಾರೇ ಎಂದ; ಬರಲೊಪ್ಪದ ಪತ್ನಿಗೆ ಪತಿ ಮಾಡಿದ್ದೇನೆಂದು ತಿಳಿದರೆ ಬೆಚ್ಚಿ ಬೀಳುತ್ತೀರ!

    ಈ ಬಗ್ಗೆ ಮಾತನಾಡಿರುವ ಮುಕುಲ್​ ರಾಯ್​ ಅವರು ತಮ್ಮ ಹೆಸರನ್ನು ಚಾರ್ಜ್​ಶೀಟ್​ನಲ್ಲಿ ದಾಖಲಿಸಿರುವುದನ್ನು ಖಂಡಿಸಿದ್ದಾರೆ. “ನನ್ನ ವಿರುದ್ಧ ಕನಿಷ್ಠ 45 ಪ್ರಕರಣಗಳು ಬಾಕಿ ಉಳಿದಿವೆ. ನಾನು ಹಿಂಸಾಚಾರದ ರಾಜಕೀಯವನ್ನು ನಂಬುವುದಿಲ್ಲ ಮತ್ತು ಅಂತಹ ವಿಷಯಗಳಲ್ಲಿ ಎಂದಿಗೂ ಪಾಲ್ಗೊಳ್ಳುವುದಿಲ್ಲ. ನಾನು ಹಿಂಸಾಚಾರ ಮಾಡುವ ಮನಸ್ಥಿತಿ ಹೊಂದಿದ್ದೇನೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜನತೆಗೆ ಹೇಳಲು ಸಿದ್ಧರಿದ್ದಾರಾ? ಇದು ನನ್ನ ಸವಾಲು. ನಾನು ಅವರ ಪಕ್ಷದಲ್ಲಿದ್ದಾಗಲೂ ಅಂತಹ ಕೆಲಸಗಳಲ್ಲಿ ಭಾಗಿಯಾಗಿರಲಿಲ್ಲ ಮತ್ತು ಈಗಲೂ ಭಾಗಿಯಾಗಿಲ್ಲ” ಎಂದು ಮುಕುಲ್​ ಅವರು ಹೇಳಿದ್ದಾರೆ. (ಏಜೆನ್ಸೀಸ್​)

    ಅಣ್ಣನ ಹೆಂಡತಿ ಜತೆ ತಮ್ಮನ ರೊಮ್ಯಾನ್ಸ್​! ಮೈದುನನಿಗೆ ಮದುವೆ ಫಿಕ್ಸ್​ ಆಗಿದ್ದಕ್ಕೆ ಅತ್ತಿಗೆ ಮಾಡಿದ್ದೇನು ಗೊತ್ತಾ?

    ಐದು ವರ್ಷದ ಮಗನ ಎದುರೇ ಹೋಯಿತು ಅಮ್ಮ, ಅಕ್ಕನ ಪ್ರಾಣ! ಕೊಲೆ ಮಾಡಿದ್ದು ಯಾರು ಎಂದು ಗೊತ್ತಾದರೆ ಬೆಚ್ಚಿ ಬೀಳುತ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts