More

    ಮುಕ್ತಿ ಪಡೆಯಲು ವೈರಾಗ್ಯ ಅಗತ್ಯ

    ಮಾನ್ವಿ: ಭಗವಂತ ಹಾಗೂ ಗುರುಗಳಲ್ಲಿ ಭಕ್ತಿ, ವೈರಾಗ್ಯ, ಜ್ಞಾನ, ಮೋಕ್ಷ ನೀಡುವಂತೆ ಬೇಡಬೇಕು ಎಂದು ಹೈದರಾಬಾದಿನ ಪಂಡಿತ ಪ್ರಾಣೇಶಾಚಾರ್ಯ ಚಿಕ್ಕದಿನ್ನಿ ಹೇಳಿದರು.

    ಪಟ್ಟಣದ ನಾರಾಯಣತೀರ್ಥ ಆಶ್ರಮದಲ್ಲಿ ನಾರಾಯಣತೀರ್ಥ ಶ್ರೀಪಾದಂಗಳು ಅವರ ಸುವರ್ಣ ಆರಾಧನಾ ಮಹೋತ್ಸವದ ಪೂರ್ವರಾಧನೆ ಕಾರ್ಯಕ್ರಮದಲ್ಲಿ ಭಾನುವಾರ ಪ್ರವಚನ ನೀಡಿದರು. ಮುಕ್ತಿ ಪಡೆಯಲು ವೈರಾಗ್ಯ ಅಗತ್ಯವಾಗಿದ್ದು, ವೈರಾಗ್ಯ ಪಡೆಯಲು ಭಕ್ತಿ ಅಗತ್ಯ. ಭಕ್ತಿಯನ್ನು ಪಡೆಯಲು ರುದ್ರದೇವರ ಆರಾಧನೆ ಮಾಡಬೇಕು. ಲೌಕಿಕ ಜೀವನದಲ್ಲಿ ಭಗವಂತನನ್ನು ಒಲಿಸಿಕೊಳ್ಳುವುದಕ್ಕೆ ಆಧ್ಯಾತ್ಮಿಕ ಸಾಧನೆ ಒಂದೇ ದಾರಿ ಎಂದರು.
    ಬೆಳಗ್ಗೆ ಸುಪ್ರಭಾತ ಸೇವೆ, ಧ್ಯಾನ, ಭಜನೆ, ಪಾರಾಯಣ, ಪಂಚಾಮೃತ ಅಭಿಷೇಕ ನಡೆಸಲಾಯಿತು. ವೃಂದವನವನು ಹೂಗಳಿಂದ ಅಲಂಕರಿಸಲಾಗಿತ್ತು. ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಪಲ್ಲಕ್ಕಿ ಸೇವೆ, ಸ್ವಸ್ತಿವಾಚನ ಇತರ ವಿವಿಧ ಕಾರ್ಯಕ್ರಮಗಳು ನಡೆದವು. ಬೆಂಗಳೂರಿನ ಗುರುರಾಜ ದಾಸರು ಪ್ರವಚನ ನೀಡಿದರು.

    ಹೈದರಾಬಾದಿನ ಮಾಧ್ವ ಮಾಧವ ಆಧ್ಯಾತ್ಮ ಕೇಂದ್ರದಿಂದ ಪ್ರಕಟಿಸಿದ ಕೆ.ಪ್ರಾಣೇಶಾಚಾರ್ಯ ಜೋಶಿ ಸಂಗ್ರಹಿಸಿದ ನೀತ್ಯಪಠನೀಯ ಶ್ಲೋಕ ಕಿರುಪುಸ್ತಕವನ್ನು ಆಶ್ರಮದ ವ್ಯವಸ್ಥಾಪಕ ಕೃಷ್ಣಮೂರ್ತಿ ಅಚಾರ್ ಬಿಡುಗಡೆಗೊಳಿಸಿದರು. ಮಾಧ್ವಮಾಧವ ಆಧ್ಯಾತ್ಮ ಕೇಂದ್ರದ ಪ್ರಹ್ಲಾದ್ ಜೋಶಿ, ನಾರಾಯಣತೀರ್ಥರ ಸಂಕ್ಷಿಪ್ತ ಚರಿತ್ರೆ ಒಳಗೊಂಡ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.

    ವಿಪ್ರ ಸಮಾಜದ ತಾಲೂಕು ಅಧ್ಯಕ್ಷ ಮುದ್ದುರಂಗರಾವ್, ಪ್ರಮುಖರಾದ ಕೆ.ವಿ.ಮೂರ್ತಿ, ಶಂಕರರಾವ್ ಚನ್ನಳ್ಳಿ, ವಿಜಯರಾವ್ ಕುಪನೇಶಿ, ಕುರ್ಡಿ ಪ್ರಹ್ಲಾದ್, ನರಸಿಂಹ ಹಳೇಬಂಡಿ, ಕೃಷ್ಣಮೂರ್ತಿ, ಶ್ರೀಪಾದರಾವ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts