More

    ನಾವೆಲ್ಲರೂ ಒಂದೇ ಎಂಬ ಭಾವನೆ ಅಗತ್ಯ

    ಕೊಪ್ಪ: ನಾವೆಲ್ಲರೂ ಸಹ ಒಂದೇ ಎಂಬ ಭಾವನೆಯಿಂದ ಬದುಕಬೇಕು. ಪ್ರೀತಿ, ವಿಶ್ವಾಸ, ನಂಬಿಕೆ ಇವುಗಳನ್ನು ಅಂತರಂಗದಲ್ಲಿ ನೆಲೆಗೊಳಿಸುವ ಕ್ರಿಯೆ ಉಂಟಾದಲ್ಲಿ ದೈವತ್ವ ಪಡೆದುಕೊಳ್ಳಲು ಸಾಧ್ಯ ಎಂದು ಅರಲಗೂಡು ದೊಡ್ಡಮಠ ಹಾಗೂ ಬೆಂಗಳೂರು ಶ್ರೀ ಸರ್ಪಭೂಷಣ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
    ಹರಿಹರಪುರ ಶ್ರೀ ಮಠದಲ್ಲಿ ಬ್ರಹ್ಮೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಎರಡನೇ ದಿನದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲರಲ್ಲಿಯೂ ನಾವು ಭಗವಂತನನ್ನು ಕಾಣಬೇಕು. ನಾವೆಲ್ಲರೂ ಭಗವಂತನ ಕುಟುಂಬದವರು. ನಾವು ಒಂದೇ ತಂದೆ, ತಾಯಿಯ ಮಕ್ಕಳ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದರು.
    ಹರಿಹರಪುರದ ಶ್ರೀಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಮಾನವತ್ವಕ್ಕಿಂತ ದೊಡ್ಡ ಧರ್ಮ ಇನ್ನೊಂದಿಲ್ಲ. ನಾವು ಮಾನವತ್ವವನ್ನು ಎಂದಿಗೂ ಬಿಡಬಾರದು. ಹೃದಯದಿಂದ ಭಾವನೆಗಳನ್ನು ಹಂಚಿಕೊಂಡು ಸಮಾಜದಲ್ಲಿ ಕೆಲಸ ಮಾಡಬೇಕು ಎಂದರು.
    ಸಮಾಜದಲ್ಲಿ ಜಾತಿ, ಮೇಲು ಕೀಳು, ಬೇದವಿಲ್ಲದೆ ಕೆಲಸ ಮಾಡಬೇಕು. ಮಾನವತ್ವ ಚೌಕಟ್ಟಿನಲ್ಲಿ ಎಲ್ಲರು ತಮ್ಮ ಸಂಪ್ರಾಯದ, ಆಚರಣೆಗಳನ್ನು ಅನುಸರಿಸಬೇಕು. ಸಂಪ್ರಾಯ ಆಚರಣೆಗಳಿಂದ ಬೇರೆಯವರಿಗೆ ನೋವಾಗಬಾರದು ಎಂದು ತಿಳಿಸಿದರು.
    ಅರಕಲಗೂಡು ವಿಶ್ವಕರ್ಮ ಜಗದಗುರು ಪೀಠದ ಶಿವಸುಜ್ಞಾನ ತಿರ್ಥ ಸ್ವಾಮೀಜಿ ಮಾತನಾಡಿ, ಹಿಂದಿನ ಕಾಲದಲ್ಲಿ ಜನರು ತಾವು ವಾಸಿಸುವ ಸ್ಥಳದಲ್ಲಿ ಆಚರಣೆಯಲ್ಲಿದ್ದ ಧರ್ಮ, ಪಂಥವನ್ನು ಬೆಳೆಸಿಕೊಂಡು ಬಂದವರು. ಆದಿ ಶಂಕರಚಾರ್ಯರು ಸಮಾನತೆ ಬೋಧನೆ ಮಾಡಿದರು. ಯಾವ ದೇವರಲ್ಲಿ ಬೇಧವಿಲ್ಲ ಪರಮಾತ್ಮ ಒಬ್ಬನೇ ಎಂಬ ಪ್ರಮುಖ ದೇವರನ್ನು ನೀಡಿದರು. ಒಂದೊಂದು ಕಡೆ ಒಂದೊಂದು ಜಾತಿ, ಧರ್ಮ ಆಚರಣೆಯಲ್ಲಿರಲಿ. ಆದರೆ ನಾವೆಲ್ಲ ಒಂದು ಎಂಬ ಸೂತ್ರದಲ್ಲಿ ಇರಬೇಕು ಎಂದರು.
    ಬ್ರಹ್ಮೋತ್ಸವದ ನಿಮಿತ್ತ ಶ್ರೀಮಠದಲ್ಲಿ ನವಗ್ರಹ ಹೋಮ, ಸಪ್ತಶತೀ ಪಾರಾಯಣ, ಅಶ್ವತ್ಥ ಪುನಯನ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಮಾತೆಯರಿಂದ ಕುಂಕುಮಾರ್ಚನೆ ಹಮ್ಮಿಕೊಳ್ಳಲಾಗಿತ್ತು. ತೆಲುಗು ಚಿತ್ರರಂಗದ ಕೊರ‌್ರಾಪಟಿ ಸಾಯಿ, ಪತ್ರಕರ್ತ ಶ್ಯಾಮ್ ಸುಂದರ್, ಶ್ರೀಮಠದ ಆಡಳಿತಾಧಿಕಾರಿ ಬಿ.ಎಸ್ ರವಿಶಂಕರ್, ಶ್ರೀಗಳ ಆಪ್ತ ಕಾರ್ಯದರ್ಶಿ ರಘುನಾಥ ಶಾಸಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts