More

    FMCG ಸರಕು ವ್ಯಾಪಾರಕ್ಕೂ ಕಾಲಿಟ್ಟ ಮುಕೇಶ್​ ಅಂಬಾನಿ; ಮನೆ ಮನೆಗೂ ರಿಲಯನ್ಸ್ ಎಣ್ಣೆ ಬೇಳೆ..!

    ಬೆಂಗಳೂರು: ನೆಟ್ವರ್ಕ್​ ಸೇವೆಯಿಂದ ಶುರುವಾದ ಮುಕೇಶ್​ ಅಂಬಾನಿಯ ಸಂಸ್ಥೆ ಈಗ, ಮಾರುಕಟ್ಟೆಯ ಬೇರೆ ಬೇರೆ ಕ್ಷೇತ್ರಗಳಿಗೂ ಕಾಲಿಡಲಾರಂಭಿಸಿದೆ.

    ಇಂದು ರಿಲಯನ್ಸ್ ರೀಟೇಲ್‌ ಸಂಸ್ಥೆಯ FMCG ಅಂಗವಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್​, ಗುರುವಾರ ಗುಜರಾತ್‌ನಲ್ಲಿ ಪ್ಯಾಕೇಜ್ಡ್ ಸರಕುಗಳ ಬ್ರ್ಯಾಂಡ್ ‘ಇಂಡಿಪೆಂಡೆನ್ಸ್’ ಅನ್ನು ಬಿಡುಗಡೆ ಮಾಡಿದೆ.

    ಈ ಬ್ರ್ಯಾಂಡ್​ ಅಡಿಯಲ್ಲಿ ಸಂಸ್ಕರಿಸಿದ ಆಹಾರಗಳು ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳೂ, ಉತ್ಪನ್ನಗಳನ್ನು ಮಾರಾಟ ಮಾಡಲಿದೆ ಎಂದು ಹೇಳಲಾಗಿದೆ. ಇದು ತನ್ನ FMCG ಮಾರುಕಟ್ಟೆಯಲ್ಲಿ ಉತ್ಕೃಷ್ಟತೆಯನ್ನು ಸೃಷ್ಟಿಸಲು ಗುಜರಾತ್ ಅನ್ನು ‘ಗೋ-ಟು-ಮಾರ್ಕೆಟ್’ ರಾಜ್ಯವಾಗಿ ಅಭಿವೃದ್ಧಿಪಡಿಸಲು ಯೋಜಿಸಿದೆ. ಅದಲ್ಲದೇ ಅದು ಶೀಘ್ರದಲ್ಲೇ ದೇಶಾದ್ಯಂತ ವಿಸ್ತರಿಸಲಿದೆ. ಇನ್ನು ಕೆಲವೇ ತಿಂಗಳಲ್ಲಿ ಇಡೀ ಗುಜರಾತ್​ನಲ್ಲಿ ತಮ್ಮ ಬ್ರ್ಯಾಂಡ್​ನ ಕೆಳಗೆ ಅನೇಕ ವ್ಯಾಪಾರಿ ಮಳಿಗೆಗಳನ್ನು ತೆರೆಯಲಿದೆ ಎನ್ನಲಾಗುತ್ತಿದೆ.

    ಏನಿದು FMCG?
    FMCG ಎಂದರೆ ಫಾಸ್ಟ್ ಮೂವಿಂಗ್​ ಕನ್ಸ್ಯೂಮರ್​ ಗೂಡ್ಸ್​ ಎಂದರ್ಥ. ಈ ಕೆಟಗರಿ ಕೆಳಗೆ, ಹಾಲು, ಹಣ್ಣು, ತರಕಾರಿ, ಧಾನ್ಯ, ಬೇಳೆ ಇತ್ಯಾದಿ ವಸ್ತುಗಳು ಬರುತ್ತವೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಇದು ದಿನಸಿ ವ್ಯಾಪಾರ. ಆದರೆ ದೊಡ್ ಮಟ್ಟದಲ್ಲಿ ನಡೆಯುವ ದಿನಸಿ ವ್ಯಾಪಾರ. ಇವರು

    ಈ ಮೂಲಕ ಅಂಬಾನಿ ಒಡೆತನದ ಇಂಡಪೆಂಡೆನ್ಸ್​ ಹೆಸರಿನ ಬ್ಯಾಂಡ್​ ಸ್ಥಳೀಯವಾಗಿ ಉತ್ಪಾದನೆಯಾಗುತ್ತಿರುವ ವಸ್ತುಗಳನ್ನು ಖರೀದಿಸಿ, ಜನರಿಗೆ ಮಾರಾಟ ಮಾಡುತ್ತದೆ. ಇದರಿಂದ ಭಾರತೀಯರ ಸಮಸ್ಯೆಗಳಿಗೆ ಸುಲಭವಾಗಿ ಉತ್ತರ ಸಿಗುತ್ತದೆ.

    ಇನ್ನು ಮುಂದೆ FMCG ಕ್ಷೇತ್ರದ ದೊಡ್ಡ ಬ್ರ್ಯಾಂಡ್​ ಎಂದೇ ಕರೆಸಿಕೊಳ್ಳುವ ಯೂನಿಲಿವರ್​,ಐಟಿಸಿ ಕಂಪೆಸಿಗಳಿಗೆ ನೇರವಾಗಿ ಟಕ್ಕರ್​ ಕೊಡಲಿದೆ.

    https://www.vijayavani.net/attika-babu-alias-bommanahalli-babu-arrested-and-taken-away-by-anantapur-police/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts